Header Ads Widget

ಮಲಬಾರ್ ಗೋಲ್ಡ್ ನಲ್ಲಿ ಹೊಸ ಸಂಗ್ರಹ 'ನುವಾ' ಡೈಮಂಡ್ಸ್ ಸಂಗ್ರಹ ಅನಾವರಣ

ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮೈನ್ ಎಂಬ ಸಬ್ ಬ್ರಾಂಡಿನ ನೂತನ ಸಂಗ್ರಹ ನುವಾ ಡೈಮಂಡ್ಸ್ ಆಭರಣಗಳ ಸಂಗ್ರಹವನ್ನು ರವಿವಾರ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಅನಾವರಣ ಗೊಳಿಸಲಾಯಿತು.

ಮಲಬಾರ್ ಗೊಲ್ಡ್‌ನ ಗ್ರಾಹಕರಾದ ಚಂದ್ರಿಕಾ ನಾಗರಾಜ್ ಹಾಗೂ ಎಸ್.ಎಂ.ಪ್ರಜ್ವಲಾ ಕೇಕ್ ಕತ್ತರಿಸಿ, ನೂತನ ನೂಹ ಡೈಮಂಡ್ಸ್ ಆಭರಣಗಳನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಚಂದ್ರಿಕಾ ನಾಗರಾಜ್, ಹೆಣ್ಣು ಮಕ್ಕಳಿಗೆ ಶೃಂಗಾರವೇ ಮುಖ್ಯ. ಅದರಲ್ಲೂ ಡೈಮಂಡ್ಸ್ ಆಭರಣಗಳಂದರೇ ಅಚ್ಚು ಮೆಚ್ಚು. ಮಲಬಾರ್ ಗೋಲ್ಡ್‌ನಲ್ಲಿ ಮಹಿಳೆಯರಿಗೆ ಇಷ್ಟವಾಗುವ ಡೈಮಂಡ್ ಆಭರಣಗಳ ಸಂಗ್ರಹವೇ ಇದೆ. ಈ ಸಂಸ್ಥೆಯು ವ್ಯವಹಾರದ ಜೊತೆ ಜನಪರ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದೆ ಎಂದು ತಿಳಿಸಿದರು.

ಹೊಸ ಆಭರಣದ ಕುರಿತು ಮಾತನಾಡಿದ ಸಂಸ್ಥೆಯ ಸಿಬ್ಬಂದಿ ಯಾಸೀರ್ ಅರಾಫತ್, ನ್ಯಾಚುರಲ್ ಡೈಮಂಡ್ಸ್ ಜ್ಯುವೆಲ್ಲರಿಯಾಗಿರುವ ನುವಾ, ಸಮುದ್ರದ ಅಲೆ, ಹೂವು, ಕಟ್ಟಡದ ಆರ್ಕಿಟೆಕ್ಟ್ ರೀತಿಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ತುಂಬಾ ಸಂಗ್ರಹ ಇದ್ದು, ಯಾವುದೇ ಶುಭ ಕಾರ್ಯಕ್ರಮಗಳಿಗೂ ಈ ಆಭರಣವನ್ನು ಧರಿಸಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ಮೆನೇಜರ್ ಮುಸ್ತಾಫ ಎ.ಕೆ.,ಸಂದೀಪ್ ಸಫಲ್ಯ,ಗುರುರಾಜ್ ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ,ದಿವ್ಯ,ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ನಿತ್ಯಾನಂದ್ ನಾಯಕ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು