ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಆರೋಪಿ ಗಣೇಶ್ ಪೂಜಾರಿಯ ವಿಪರೀತ ಮಧ್ಯ ವ್ಯಸನ ಚಟವುಳ್ಳವನಾಗಿದ್ದು, ದಿನಾಂಕ 19-06-2025 ರಂದು ತನ್ನ ಹೆಂಡತಿ ರೇಖಾ ಯಾವಾಗಲೂ ಮೊಬೈಲ್ ಹೆಚ್ಚಾಗಿ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ವಿಪರೀತ ಮಧ್ಯ ಸೇವನೆ ಮಾಡಿ ಬಂದು ಜಗಳವಾಡಿ ರಾತ್ರಿ 11:30 ಗಂಟೆ ಸುಮಾರಿಗೆ ಮನೆಯಲ್ಲಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 62/2025 ಕಲಂ 103, 351(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿಯಾದ ಗಣೇಶ್ ಪೂಜಾರಿಯವರನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
0 ಕಾಮೆಂಟ್‌ಗಳು