ಕೋರೋನಾ ಮಹಾಮಾರಿ ಸಂದರ್ಭದಲ್ಲಿ ಜಿ ಶಂಕರ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸುಮಾರು 48ಕ್ಕೂ ಅಧಿಕ ಮೃತ ದೇಹಗಳಿಗೆ ಸದ್ಗತಿ ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ ಹಾಗು ತುರ್ತು ಸಂದರ್ಭದಲ್ಲಿ ಸುಮಾರು 40ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಿರುವ ಹಾಗು ಸಮಾಜ ಸೇವೆಯಲ್ಲಿ ಹಗಲಿರುಳೆನ್ನದೆ ಸದಾ ಸಿದ್ದರಿರುವ ಸಹೃದಯಿ ಸರಳ ಸಜ್ಜನ ಸ್ವಭಾವದ ವ್ಯಕ್ತಿ ಸತೀಶ್ ಸಾಲ್ಯಾನ್ ಸಾಲ್ಮರ, ಉಪ್ಪೂರು ಅವರನ್ನು ಅವರ ಸ್ವಗೃಹದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲಾ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಸೋಮಪ್ಪ ತಿಂಗಳಾಯ ಹಾಗು ಬಸವರಾಜ್ ಐಹೊಳೆ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು