ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕಾಪು ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ಗುರುವಾರದಂದು ಜರುಗಿತು.
ಜಿಲ್ಲಾ ಸಹಾಯಕ ಆಯುಕ್ತರಾದ ಆಲ್ಬನ್ ರೊಡ್ರಿಗಸ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಯಸ್ಸಾದ ಮಹಿಳೆಯು ಯಂತ್ರದ ಮೂಲಕ ತರುಣಿಯಾಗಿ ಹೊರ ಬರುತ್ತಾಳೆ ಎಂಬ ಕಥೆಯ ಮೂಲಕ ತಿಳಿಸಿ, ಅಂತೆಯೇ ಕಬ್, ಬುಲ್ ಬುಲ್,ಸ್ಕೌಟ್, ಗೈಡ್, ರೋವರ್, ರೇಂಜರ್ಸ್ ವಿದ್ಯಾರ್ಥಿಗಳು ಚತುರರಾಗಿ ಹೊರ ಬರುತ್ತಾರೆ ಎಂಬ ಅಮೂಲ್ಯ ಸಂದೇಶವನ್ನು ಶಿಕ್ಷಕರಿಗೆ ನೀಡಿ, ಸ್ಕೌಟ್ಸ್ ಮೂಲಕ ಶಿಕ್ಷಕರು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ.
ಕಾಗೆಯು ಕಪ್ಪು, ಕೋಗಿಲೆಯು ಕಪ್ಪು, ಆದರೆ ನಿಮ್ಮ ಕೈಯಲ್ಲಿರುವ ಮಕ್ಕಳಿಗೆ ಉತ್ತಮ ತರಬೇತಿ ನೀಡಿದರೆ ಮಕ್ಕಳು ಕೋಗಿಲೆಯಾಗುತ್ತಾರೆ. ನೀವು ದೊಡ್ಡ ಕೆಲಸಗಳನ್ನು ಮಾಡುತ್ತಿದ್ದೀರಿ. ನಿಮ್ಮ ಕೆಲಸ ವನ್ನು ಚೆನ್ನಾಗಿ ಮುಂದುವರಿಸಿರಿ ಎಂದು ಸಭೆಯಲ್ಲಿ ತಿಳಿಸಿದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ. ಕೆ. ಪ್ರಶಾಂತ್ ಶೆಟ್ಟಿ ಅವರು ಮಾತನಾಡಿ ಸಂಸ್ಥೆಯನ್ನು ಬೆಳೆಸಲು ತುಂಬಾ ಕಷ್ಟ. ಆಸಕ್ತಿ, ಅನುಭವ ಇರಬೇಕು ಎಂದು ಹೇಳಿದರು.
ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಲಯನ್ ಇಂದ್ರಾಳಿ ಜಯಕರ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವಾ ಮನೋಭಾವನೆಯನ್ನು ಬೆಳೆಸುವಲ್ಲಿ ಶಿಕ್ಷಕರು ಸಂಸ್ಥೆಯ ಬೆನ್ನೆಲು ಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಸ್ಕೌಟ್ ಆಯುಕ್ತರಾದ ಜನಾರ್ದನ ಕೊಡವೂರು, ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ. ಪೈ, ಜಿಲ್ಲಾ ಪದಾಧಿಕಾರಿ ಸಾವಿತ್ರಿ ಮನೋಹರ್, ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ, ರಾಜ್ಯ ಸಹಾಯಕ ಸಂಘಟನಾ ಅಧಿಕಾರಿ ಸುಮನ್ ಶೇಖರ್, ಸದಸ್ಯರಾದ ಸಿದ್ಧ ಬಸಯ್ಯ ಸ್ವಾಮಿ ಚಿಕ್ಕ ಮಠ, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರುಗಳಾದ ಮಧುಕರ್ ಎಸ್. ಮತ್ತು ರೆಹನಾ ಬಾನು, ಜಿಲ್ಲಾ ಸಹಾಯಕ ಆಯುಕ್ತರಾದ ಮಾರ್ಗರೇಟ್ ಸೀಮಾ ಡಿ'ಸೋಜ, ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನೀಲಾನಂದ್ ನಾಯ್ಕ್ , ಶಿಕ್ಷಣ ಸಂಯೋಜಕರಾದ ಶಿವಣ್ಣ ಬಾಯರ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಮರಿಯ ಅನಿತ ಮೆಂಡೋನ್ಸ ವರದಿಯನ್ನು ವಾಚಿಸಿದರು.ಕೋಶಾಧಿಕಾರಿ ನಿಮಿತಾ ಶೆಟ್ಟಿ ಲೆಕ್ಕ ಪತ್ರವನ್ನು ಮಂಡಿಸಿದರು. ಸಹ ಕಾರ್ಯದರ್ಶಿ ಅಸುಂತ ಪ್ರಿಯ ದಾಂತಿ ಸ್ವಾಗತಿಸಿದರು. ಗೈಡ್ ಕ್ಯಾಪ್ಟನ್ ಸುನೀತ ಲೀನಾ ಡಿ'ಸೋಜ ವಂದಿಸಿದರು. ಕಬ್ ಮಾಸ್ಟರ್ ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
0 ಕಾಮೆಂಟ್‌ಗಳು