Header Ads Widget

ಮೂರು ವರ್ಷ ಪೂರೈಸಿದ "ಸ್ಕೌಟಿಂಗ್ ನಡಿಗೆ ಹಳ್ಳಿಯ ಕಡೆಗೆ" ಎಂಬ ವಿನೂತನ ಕಾರ್ಯಕ್ರಮ

ಗ್ರಾಮೀಣ ಬದುಕು ಎನ್ನುವುದು ನಗರದ ಮಕ್ಕಳಿಗೆ ದೂರದ ಬೆಟ್ಟ. ನಗರದ ಜೀವನ ಕ್ರಮಕ್ಕೆ ಒಗ್ಗಿಕೊಂಡಿರುವ ಮಕ್ಕಳಿಗೆ ಗ್ರಾಮೀಣ ಜೀವನ ಎನ್ನುವುದು ಕುತೂಹಲದ ಜೊತೆಗೆ ಅಸಡ್ಡೆ ಕೂಡ. ನಗರದ ಮಕ್ಕಳಿಗೆ ಗ್ರಾಮೀಣ ಬದುಕಿನ ಚಿತ್ರಣ ಕಟ್ಟಿಕೊಡಬೇಕು ಮತ್ತು ಗ್ರಾಮೀಣ ಬದುಕೇ ಪ್ರತಿಯೊಬ್ಬನ ಮೂಲ ಎಂದು ತಿಳಿಸಿಕೊಂಡುವ ಉದ್ದೇಶದಿಂದ ಭಾರತ್ ಸ್ಕೌಟ್ಸ್ & ಗೈಡ್ಸ್ ಬೆಂಗಳೂರು ಉತ್ತರ ಜಿಲ್ಲಾ ಸಂಸ್ಥೆಯು ನಗರದ ಮಕ್ಕಳಿಗೆ ಗ್ರಾಮೀಣ ಜೀವನದ ಅನುಭವ ಮತ್ತು ಸೇವಾ ಮನೋಭಾವನೆಯನ್ನು ಬೆಳೆಸುವ ಉದ್ದೇಶದೊಂದಿಗೆ ವಿಶಿಷ್ಟ ಕಾರ್ಯಕ್ರಮವೊಂದನ್ನು ಸಂಯೋಜಿಸಿತು. ಅದುವೆ , "ಸ್ಕೌಟಿಂಗ್ ನಡಿಗೆ ಹಳ್ಳಿಯ ಕಡೆಗೆ"

ಭಾರತ್ ಸ್ಕೌಟ್ಸ್ & ಗೈಡ್ಸ್ ಸಮುದಾಯ ಸೇವೆ ಮತ್ತು ನಾಯಕತ್ವ ಅಭಿವೃದ್ಧಿಯ ಮೂಲಕ ಯುವ ಸಮುದಾಯಕ್ಕೆ ಶಿಸ್ತು, ನೈತಿಕತೆ ಮತ್ತು ಸಾಮಾಜಿಕ ಜವಬ್ದಾರಿ ಮತ್ತು ದೇಶಾಭಿಮಾನವನ್ನು ಕಲಿಸುವ ಗುರಿಯೊಂದಿಗೆ 1909ರಲ್ಲಿ ಭಾರತದಲ್ಲಿ ಆರಂಭಗೊಂಡಿತು. ಈ ಪ್ರಯಾಣಕ್ಕೆ ಈಗ 116 ವರ್ಷಗಳು. ಕರ್ನಾಟಕದಲ್ಲಿ ಸ್ಕೌಟ್ಸ್ & ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯಾ ಅವರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ , "ಸ್ಕೌಟಿಂಗ್ ನಡಿಗೆ ಹಳ್ಳಿಯ ಕಡೆಗೆ" ಕೂಡ ಒಂದು.

2002ರ ಜುಲೈ 31ರಂದು ಆರಂಭಗೊಂಡ ಈ ಪ್ರಯಾಣಕ್ಕೆ ಮೂರು ವರುಷ. ಯಲಹಂಕದ ಸಮೀಪದ ಗಂಟಿಗನಹಳ್ಳಿಯ ಅಭಿವೃದ್ಧಿಗೆ ಪಣತೊಟ್ಟ ವಿದ್ಯಾರ್ಥಿಗಳು, ಈ ಮೂರು ವರ್ಷದಲ್ಲಿ ಕಲಿತದ್ದು ಗ್ರಾಮೀಣ ಬದುಕಿನ ಅನುಭವದ ಜೊತೆಗೆ ಗ್ರಾಮೀಣ ಬದುಕಿನ ಆಂತರ್ಯದ ಪರಿಯಚಯವನ್ನು.

ಬೆಂಗಳೂರು ನಗರದ ವಿವಿಧ ಶಾಲಾ-ಕಾಲೇಜುಗಳ ರೋವರ್ಸ ರೇಂಜರ್ಸ, ಸ್ಕೌಟ್ಸ್ ಮತ್ತು ಗೈಡ್ಸ್ನ ಸದಸ್ಯರು ಪ್ರತಿ ತಿಂಗಳಲ್ಲಿ ಒಂದು ದಿನ ಗಂಟಿಗನಹಳ್ಳಿಗೆ ಪ್ರಯಾಣಿಸುತ್ತಾರೆ. ನಗರದಿಂದ ಬಸ್ ಮೂಲಕ ನಾಗೆನಹಳ್ಳಿ ಗೇಟ್ ತಲುಪಿ, ಅಲ್ಲಿಂದರ 3 ಕಿಲೋಮೀಟರ್ ನಡೆದು ಗಂಟಿಗನಹಳ್ಳಿ ಗ್ರಾಮವನ್ನು ಸೇರುತ್ತಾರೆ. ಪ್ರತಿ ಬಾರಿ ವಿವಿಧ ಚಟುವಟಿಕೆಗಳ ಮೂಲಕ ಗ್ರಾಮೀಣ ಪರಿಸರ, ಸಮುದಾಯ ಸೇವೆ ಮತ್ತು ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಗ್ರಾಮಸ್ಥರಿಂದ ಕಲಿತು ಪ್ರತ್ಯಕ್ಷ ಅನುಭವವನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ.

ಗ್ರಾಮದಲ್ಲಿ ಸ್ಕೌಟ್ಸ್ ನ ಸ್ವಯಂಸೇವಕರು ಗಂಟಿಗನಹಳ್ಳಿಯ ಕೆರೆ, ಗ್ರಾಮ ಪಂಚಾಯತಿ ಪ್ರದೇಶ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತ ಸ್ವಚ್ಛತಾ ಕಾರ್ಯಕ್ರಮಗಳನ್ನು ಸಂಯೋಜಿಸಿ. ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳು ಇದರ ಅಡಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ, ಕಸದ ನಿರ್ವಹಣೆ ಮತ್ತು ಸ್ಥಳೀಯರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.

ಸಂವಿಧಾನದ ಪೀಠಿಕೆ, ಲಸಿಕೆಗಳ ಪ್ರಾಮುಖ್ಯತೆ, ತೆರಿಗೆ ಪಾವತಿ, ಚುನಾವಣೆಯ ಅವಶ್ಯಕತೆ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸುವ ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು. 

ಎಲ್ & ಟಿ ಕಂಪನಿಯ ಸಹಯೋಗದೊಂದಿಗೆ 2,000 ಗಿಡಗಳನ್ನು ನೆಟ್ಟು, 2.5 ವರ್ಷಗಳಿಂದ ನೀರುಣಿಸುವುದು, ಕಳೆ ತೆಗೆಯುವುದು ಮತ್ತು ಗಿಡಗಳಿಗೆ ಊರುಗೋಲು ನೀಡುವಂತಹ ಸಂರಕ್ಷಣಾ ಕಾರ್ಯಗಳನ್ನು ಸ್ಕೌಟ್ಸ್ನ ಸ್ವಯಂಸೇವಕರು ಮಾಡಿದ್ದಾರೆ. 600 ಮೀಟರ್ ದೂರದ ಕೆರೆಯಿಂದ ಮಾನವ ಸರಪಣಿ ಮೂಲಕ ನೀರನ್ನು ಪೂರೈಸಲಾಯಿತು.

"ಸ್ಕೌಟಿಂಗ್ ನಡಿಗೆ ಹಳ್ಳಿಯ ಕಡೆಗೆ" ಈ ಕಾರ್ಯಕ್ರಮಕ್ಕೆ 36 ತಿಂಗಳಲ್ಲಿ 1,800 ಸ್ಕೌಟ್ ಮತ್ತು ಗೈಡ್ ಸ್ವಯಂಸೇವಕರು ಭಾಗವಹಿಸಿದ್ದಾರೆ. ಈ ಸ್ವಯಂಸೇವಕರು ನಡೆಸಿದ ಜನಜಾಗೃತಿ ಕಾರ್ಯಕ್ರಮಗಳು ಗ್ರಾಮದಲ್ಲಿ ಸ್ವಚತೆ ಮತ್ತು ಪರಿಸರ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಗರದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸಮುದಾಯದ ಬದುಕಿನ ಬಗ್ಗೆ ಆಸ್ಥೆ, ಜೊತೆಗೆ ಗ್ರಾಮಸ್ಥರೊಂದಿಗೆ ಅನುಬಂಧ ಬೆಳೆದಿದೆ.   

ಮುಂದಿನ ದಿನಗಳಲ್ಲೂ ಬೆಂಗಳೂರು ಉತ್ತರ ಜಿಲ್ಲಾ ಸಂಸ್ಥೆಯು ಸಮುದಾಯ ಸೇವೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ನಿರಂತರ ತೊಡಗಿಸಿಕೊಳ್ಳಲಿದೆ. ಈ ಮೂರು ವರ್ಷಗಳ ಅನುಭವ ಮತ್ತು ಯಶಸ್ಸಿನ ಆಧಾರದ ಮೇಲೆ, ಗ್ರಾಮೀಣ-ನಗರ ಸಂಪರ್ಕವನ್ನು ಬಲಪಡಿಸುವ ಹೊಸ ಉಪಕ್ರಮಗಳನ್ನು ರೂಪಿಸುವ ಯೋಜನೆಗಳನ್ನು ಹೊಂದಿದೆ. 

ಈ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮೊಂದಿಗೆ ನಿಂತು ಬೆಂಬಲಿಸುತ್ತಾ ಬಂದಿರುವ ಜಿಲ್ಲಾ ಮುಖ್ಯ ಆಯುಕ್ತರಾಗಿರುವ ಶ್ರೀ ಬಿ ಆರ್ ಪ್ರಸನ್ನ ಕುಮಾರ್ ಜಿಲ್ಲಾ ಕಾರ್ಯದರ್ಶಿಯಾಗಿರುವ ಬಿಕೆ ಶೇಷಾದ್ರಿ ಹಾಗೂ ಇತರ ಎಲ್ಲ ಜಿಲ್ಲಾ ಪದಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳು ಶಾಲಾ ಪ್ರಾಂಶುಪಾಲರು ಹಾಗೂ ಗ್ರಾಮ ಪಂಚಾಯತಿನ ಅಧ್ಯಕ್ಷ ಲಕ್ಷ್ಮಿಪತಿ ಕೆ. ನಿಕಟಪೂರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂನಚ್ಚ ಮತ್ತು ಈಗಿನ ಪಿಡಿಓ ನರಸಿಂಹ ಮೂರ್ತಿ ಸೇರಿದಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ನಮ್ಮೊಂದಿಗೆ ಕೈಜೋಡಿಸಿದ ಗ್ರಾಮಸ್ಥರು ಸೇರಿದಂತೆ ಎಲ್ಲರಿಗೂ ವಂದಿಸುತ್ತಾ, ನಾವು ಹೆಮ್ಮೆಯಿಂದ ಹೇಳುತ್ತೇವೆ ಈ ಬಾರಿ ಭಾರತ್ ಸ್ಕೌಟ್ಸ್ & ಗೈಡ್ಸ್ "ಹಳ್ಳಿಯೊಂದಿಗೆ ನಡೆದು, ಸೇವೆಯೊಂದಿಗೆ ಬೆಳೆದಿದೆ" ಮುಂದೆಯೂ ಸಕಾರಾತ್ಮಕ ಕಾರ್ಯಕ್ರಮಗಳನ್ನುಯ ರೂಪಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಸ್ಕೌಟಿಂಗ್ ಚಳುವಳಿ ಪ್ರಮುಖ ಪಾತ್ರ ವಹಿಸಿ ಹೆಗ್ಗುರುತಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು