ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು ಸುಮಾರು 45 ವರ್ಷ ಬ್ರಹ್ಮಾವರ ತಾಲೂಕಿನಾದ್ಯಂತ ಸೈಕಲ್ನಲ್ಲೇ ಸುತ್ತಿ, ಹಿಂದುತ್ವ, ರಾಷ್ಟ್ರೀಯತೆ ವಿಚಾರಗಳಗಳನ್ನು ಹಳ್ಳಿ ಹಳ್ಳಿಗೆ ಪಸರಿಸಿ, ಸಾವಿರಾರು ಯುವಕರನ್ನು ಸಂಘ ಕಾರ್ಯದಲ್ಲಿ ತೊಡಗಿಸಿದ ಬ್ರಹ್ಮಾವರ ಬಾಬುದೇವಾಡಿಗರನ್ನ ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲೆಯ ಅದ್ಯಕ್ಷರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಅವರ ನೇತ್ರತ್ವದಲ್ಲಿ ಗುರುಪೂರ್ಣಿಮೆಯ ಪುಣ್ಯ ದಿನದಂದು ಅವರ ಮನೆಗೆ ತೆರಳಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಗ್ರಾಮಾಂತರ ಮಂಡಲ ಅದ್ಯಕ್ಷರಾದ ರಾಜೀವ ಕುಲಾಲ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅರ್ಜುನ್ ಪ್ರಭು, ಸತ್ಯರಾಜ್ ಬ್ರಹ್ಮಾವರ, ದೇವಾನಂದ್ ಬ್ರಹ್ಮಾವರ, ಪ್ರಸಾದ್, ನಿತ್ಯಾನಂದ ಪೂಜಾರಿ ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು