Header Ads Widget

“ಒಂದು ಮರ ಅಮ್ಮನ ಹೆಸರಿನಲ್ಲಿ..."

ತಾಯಿಯ ಹೆಸರಲ್ಲಿಗಿಡವಂದನುು ನಿಟ್ಟು ಪೋಷಿಸಿ ನಾವು ಗಿಡ ಮರಗಳನುು ಆದರ್ಶವಾಗಿಟ್ಟುಕೊಂಡು ಬಾಳಬೇಕು ಮತ್ತು ಮುಂದಿನ ಪಿಳಿಗೆಯವರ ಭವಿಷ್ಯ ಚೆನ್ನಾಗಿರಲೆಂದು ಗಿಡ-ಮರಗಳನ್ನು ಕಾಪಾಡಬೇಕು ಎಂದು ಪ್ರಾರ್ಥಮಿಕ ನೇಕಾರರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರತ್ನಾಕರ ಇಂದ್ರಾಳಿಯವರು ಇಂದ್ರಾಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೇಳಿದರು.

ಅವರು ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅವರಣದಲ್ಲಿ ಹಂಸ ಚೈತನ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಸಹಕಾರ ಭಾರತಿ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಸಹಕಾರ ವರ್ಷ-2025ರ ಪ್ರಯುಕ್ತ 'ಒಂದು ಮರ ಅಮ್ಮನ ಹೆಸರಿನಲ್ಲಿʼ ವಿಷಯಧಾರಿತ ವನ ಮಹೋತ್ಸವವನ್ನು ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿದರು.

ಕಾರ್ಯಕ್ರಮದಲ್ಲಿ, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸುದೇಶ್ ನಾಯಕ್, ದುರ್ಗಾಪರಮೇಶ್ವರಿ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀ ಪಾಡುರಂಗ ಕಾಮತ್ ಎಳ್ಳಾರೆ, ಪರ್ಕಳ ಗ್ರಾಹಕರ ಸಂಘದ ಶ್ರೀಮತಿ ಪ್ರೀತಿ ಪಾಡುರಂಗ ಕಾಮತ್, ಶ್ರೀ ಗುರು ಪೂರ್ಣಾನಂದ ಕ್ರೆಡಿಟ್ ಕೋ ಅಪ್‌ರೇಟಿವ್ ಸೊಸೈಟಿ ಪರ್ಕಳ ಇದರ ಕಾರ್ಯದರ್ಶಿ ಶ್ರೀ ನಾಗೇಶ್ ಪ್ರಭು, ಸಹಕಾರ ಸಂಘದ ಸದಸ್ಯೆ ಶ್ರೀಮತಿ ಭಾರತಿ ನಾಯಕ್, ಇಂದ್ರಾಳಿ ಅಂಗ್ಲ ಮಾದ್ಯಮ ಪ್ರೌಢಶಾಲಾ ಮುಖ್ಯಸ್ಥರಾದ ಶ್ರೀ ಕೆ. ವಿನಾಯಕ್ ಕಿಣಿ ಮತ್ತು ಪ್ರಾರ್ಥಮಿಕ ಶಾಲಾ ಮುಖ್ಯಸ್ಥರಾದ ಶ್ರೀಮತಿ ರೇಶಾ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು