ರಾಷ್ಟ್ರೀಯ ವೈದ್ಯರ ದಿನ-೨೦೨೫ ರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಂ ಸಿ ಮಣಿಪಾಲ ಇವರ ಸಹಯೋಗದೊಂದಿಗೆ ಕಲಾವಿದರಾದ ಶ್ರೀನಾಥ್ ಮಣಿಪಾಲ್ ಅವರು ಬೃಹತ್ ಜಲವರ್ಣ ಕಲಾಕೃತಿಯನ್ನು ಕೆ ಎಂ ಸಿ ಯ ಇಂಟಾರಾಕ್ಟ್ಆವರಣದಲ್ಲಿ ರಚಿಸಿದರು.
ಕೆಎಂಸಿಯ ಅಸೋಸಿಯಟ್ ಡೀನ್ ಡಾ ರಂಜಿತಾ ಎಸ್. ಶೆಟ್ಟಿ ಅವರು ಈ ಜಲವರ್ಣ ಕಲಾಕೃತಿಯನ್ನು ಅನಾವರಣಗೊಳಿಸಿ ಈ ವರ್ಷದ ವದ್ಯರ ದಿನದ ಘೋಷವಾಕ್ಯ “ಮುಖಕವಚದ ಹಿಂದೆ ಆರೈಕೆ ಮಾಡುವವರ ಕಾಳಜಿ” ಇದರ ಬಗ್ಗೆ ವಿವರಿಸಿದರು.
ಪ್ರತಿಯೊಬ್ಬರಿಗೂ ಜೀವ ಅತೀ ಅಮೂಲ್ಯವಾದು .ಜೀವ ಕಾಪಾಡುವಲ್ಲಿ ಹಾಗೂ ಪ್ರತೀ ವ್ಯಕ್ತಿಯ ಆರೋಗ್ಯ ಕಾಪಾಡುವಲ್ಲಿ ಸಮುದಾಯದಲ್ಲಿ ವೈದ್ಯರ ಪಾತ್ರ ಅತೀ ಮುಖ್ಯ ಹಾಗೂ ಗೌರವಯುತವಾದುದು. ಈ ವೈದ್ಯರು ಹಾಗೂ ರೋಗಿಗಳ ಸಂಬ೦ಧ ಭರವಸೆ ಹಾಗೂ ನಂಬಿಕೆಯಿ೦ದ ಕೂಡಿದೆ ಎಂದರು.
ಡಾ.ಮುರಳಿಧರ್ ಕುಲಕರ್ಣಿ, ಡಾ ಚೈತ್ರಾ ರಾವ್, ಡಾ ಸಂಜಯ ಕಿಣಿ, ಡಾ ಸ್ನೇಹಾ ಡಿ ಮಲ್ಯ, ಡಾ ಈಶ್ವರಿ, ಡಾ. ಹರ್ಷಿತ, ಡಾ ರುಷಿ ಮತ್ತು ಭೋಧಕೇತರ ಸಿಬಂಧಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು