Header Ads Widget

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಪದಪ್ರದಾನ ಸಮಾರಂಭ

ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ 2025-26 ನೇ ಸಾಲಿನ ಪದಪ್ರಧಾನ ಸಮಾರಂಭವು ಉಡುಪಿಯ ಟೌನ್ ಹಾಲ್ ನಲ್ಲಿ ನಡೆಯಿತು. ನೂತನ ಅಧ್ಯಕ್ಷ ಲಯನ್ ಜೆರಾಲ್ಡ್ ಪಿರೇರಾ ಮತ್ತು ಅವರ ತಂಡ ಅಧಿಕಾರ ಸ್ವೀಕರಿಸಿತು. 

ಜಿಲ್ಲಾ ದ್ವಿತೀಯ ಉಪ ಗವರ್ನರ್ ಲಯನ್ ಹರಿಪ್ರಸಾದ್ ರೈ, ನೂತನ ತಂಡಕ್ಕೆ ಪದ ಪ್ರಧಾನ ಭೋಧಿಸಿ, ಶುಭ ಹಾರೈಸಿದರು. ರಾಜ್ಯ ಸರ್ಕಾರದ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಮಾತನಾಡಿ, ಸಮಾಜದಲ್ಲಿ ವಿವಿಧ ಸಾಮಾಜಿಕ ಕಾರ್ಯ ಚಟುವಟಿಕೆಗಳ ಜೊತೆ ಶಾಂತಿ ಸೌಹಾರ್ದತೆಯ ಕಾರ್ಯಕ್ರಮಗಳಿಗೂ ಒತ್ತು ನೀಡಿ ಎಂದರು. ಮುಖ್ಯ ಅತಿಥಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಶೇಕ್ ವಹಿದ್ ದಾವುದ್ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಹಮ್ಮಿಕೊಂಡ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಧನದೊಂದಿಗೆ ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತ ಇಬ್ಬರ ಚಿಕಿತ್ಸೆಗೆ ರೂ. ಒಂದು ಲಕ್ಷ ಸಹಾಯಧನವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.

 ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಲಯನ್ ಗಿರೀಶ್ ರಾವ್, ವಲಯ ಅಧ್ಯಕ್ಷ ಲಯನ್ ವಲೇರಿಯನ್ ನೊರೋನ್ನಾ, ನೂತನ ಅಧ್ಯಕ್ಷ ಲಯನ್ ಜೆರಾಲ್ಡ್ ಪಿರೇರ, ಕೋಶಾಧಿಕಾರಿ ಲಯನ್ ಆಲ್ವಿನ್ ಡಿಸೋಜಾ, ಲಯನ್ ಪ್ರೇಮ್ ಮಿನೇಜಸ್, ಲಯನ್ ಅನಿಲ್ ಮಿನೇಜಸ್ ಉಪಸ್ಥಿತರಿದ್ದರು.

ಅಧ್ಯಕ್ಷ ರೊನಾಲ್ಡ್ ರೆಬೆಲ್ಲೋ ಸ್ವಾಗತಿಸಿದರೆ, ಕಾರ್ಯದರ್ಶಿ ಲಯನ್ ಎಡ್ವಿನ್ ಲೂಯಿಸ್ ಧನ್ಯವಾದ ಸಮರ್ಪಿಸಿದರು. ಲಯನ್ ಮೈಕಲ್ ಡಿಸೋಜಾ ಮತ್ತು ಲಯನ್ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು