Header Ads Widget

ಮಾಹೆ ಮಣಿಪಾಲ ಸೆಮಿಕಂಡಕ್ಟರ್ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಹೆಚ್ಚಿಸಲು ಜಪಾನ್ ಎಚ್ ಟಿ ಎಲ್ ಕಂಪನಿಯೊಂದಿಗೆ ಒಡಂಬಡಿಕೆಗೆ ಸಹಿ

 

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಆಗಿರುವ ಡೀಮ್‌ಡ್-ಟು-ಬಿ-ಯೂನಿವರ್ಸಿಟಿ ಸಂಸ್ಥೆ ಸೆಮಿಕಂಡಕ್ಟರ್ ಉಪಕರಣಗಳು, ಡಿಜಿಟಲ್ ಕೈಗಾರಿಕಾ ವ್ಯವಸ್ಥೆಗಳು ಮತ್ತು ಸಾಫ್ಟ್ವೇರ್ ಆಟೋಮೇಷನ್ನಲ್ಲಿ ಪರಿಣತಿ ಹೊಂದಿರುವ ಪ್ರಮುಖ ಜಪಾನ್ ಕಂಪನಿಯಾದ ಎಚ್ ಟಿ ಎಲ್ ಜಪಾನ್ ಲಿಮಿಟೆಡ್ ಮತ್ತು ಅದರ ಭಾರತೀಯ ಅಂಗಸಂಸ್ಥೆಯಾದ ಎಚ್‌ಟಿಎಲ್ ಕೊ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಮಹತ್ವದ ಪಾಲುದಾರಿಕೆಯ ಒಪ್ಪಂದದ ಮೈಲಿಗಲ್ಲನ್ನು ಘೋಷಿಸಿದೆ.

ಈ ಒಪ್ಪಂದವು, 2025ರ ಜೂನ್ 26ರಂದು, ಟೋಕಿಯೋ, ಮಣಿಪಾಲ, ಬೆಂಗಳೂರು ಮತ್ತು ಕೊಲ್ಕತ್ತಾದ ಹಿರಿಯರು ಮತ್ತು ಪ್ರಮುಖ ಸದಸ್ಯರನ್ನು ಜೂಮ್‌ ಮೂಲಕ ಸಂಪರ್ಕಿಸುವ ವರ್ಚುವಲ್ ಸಹಿ ಸಮಾರಂಭದ ಸಮಯದಲ್ಲಿ ಮುಕ್ತಾಯವಾಯಿತು, ಮತ್ತು ಮುಂದಿನ ಐದು ವರ್ಷಗಳ ಸಹಕಾರದ ಭಾಗವಾಗಿ ಈ ಒಡಂಬಡಿಕೆ ಸ್ಥಾಪಿತವಾಯಿತು. ಈ ಪಾಲುದಾರಿಕೆಯು ಸೆಮಿಕಂಡಕ್ಟರ್ ವಲಯದಲ್ಲಿ ಸಂಶೋಧನೆ ತರಬೇತಿ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಹೆಚ್ಚಿಸುವತ್ತ ಪ್ರಾಥಮಿಕವಾಗಿ ಗಮನಹರಿಸುವ ವ್ಯಾಪಕ ಶೈಕ್ಷಣಿಕ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ರೂಪಗೊಂಡಿದೆ. ಈ ಪಾಲುದಾರಿಕೆಯು ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಭಾರತದ ಸೆಮಿಕಂಡಕ್ಟರ್ ಸ್ವಾವಲಂಬನೆಯ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಲಪಡಿಸಲು ಸಹಾಯ ಮಾಡುತ್ತದೆ. 

ಈ ವರ್ಚುವಲ್ ಸಹಿ ಸಮಾರಂಭದಲ್ಲಿ ಮಾಹೆಯ ಹಿರಿಯ ನಾಯಕರೆಲ್ಲರೂ ಭಾಗವಹಿಸಿದ್ದರು. ಮಾಹೆ ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರೊ ವೈಸ್ ಚಾನ್ಸಲರ್ ಡಾಕ್ಟರ್ ನಾರಾಯಣ ಸಭಾಹಿತ್, ರಿಜಿಸ್ಟ್ರಾರ್ ಡಾಕ್ಟರ್ ಪಿ ಗಿರಿಧರ್ ಕಿಣಿ, ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕರಾದ ಡಾ. ಹರೀಶ್ ಕುಮಾರ್, ಎಂಐಟಿ ಮಣಿಪಾಲದ ನಿರ್ದೇಶಕರಾದ ಡಾಕ್ಟರ್ ಅನಿಲ್ ರಾನ ಮೊದಲಾದವರು ಭಾಗವಹಿಸಿದ್ದರು. ಎಚ್ ಟಿ ಎಲ್ ನ ಪರವಾಗಿ ಹಲವಾರು ಗಣ್ಯರು ಭಾಗವಹಿಸಿದ್ದರು. ಎಚ್‌ಟಿಎಲ್ ಜಪಾನ್ ನ ಅಧ್ಯಕ್ಷರಾದ ಶ್ರೀ ಅಚಿಂತ್ಯ ಆಚಾರ್ಯ, ಸಿ ಟಿ ಓ ಹಾಗೂ ಜನರಲ್ ಮ್ಯಾನೇಜರ್ ಡಾಕ್ಟರ್ ಆತ್ಮರಾಮ್ ಗುಪ್ತ, ಸಿಟಿಒ ಹಾಗೂ ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಶ್ರೀ ಹಿಡೇಕಿ ಹಮಾದ , ಜನರಲ್ ಮ್ಯಾನೇಜರ್ ಶ್ರೀ ಅಖೀಕೋ ಮಿಯಾ ಮೋಟೋ. ಎಚ್ ಟಿ ಎಲ್ ಇಂಡಿಯಾದ ನಿರ್ದೇಶಕರಾದ ಡಾಕ್ಟರ್ ಸಂಜಯ್ ಆಚಾರ್ಯ, ಜನರಲ್ ಮ್ಯಾನೇಜರ ಶ್ರೀ ಸುಬ್ರಾಟ ಮುಖರ್ಜಿ, ಇಂಡಿಯಾ ಆಪರೇಷನ್ ನ ಮುಖ್ಯಸ್ಥರಾದ ಶ್ರೀ ಲಿವಿಂಗ್ಸ್ ಟನ್ ಕ್ರಿಸ್ಟಾಫರ್, ಸಿಒಒ ಶ್ರೀ ಅಬು ಅಬಿಜಿತ್, ಎಚ್ ಟಿ ಎಲ್ ನ ಕೇಂದ್ರ ಮುಖ್ಯಸ್ಥರಾದ ಶ್ರೀ ನೀಲಾದ್ರಿ ದಾಸ್, ಡೆಪ್ಯೂಟಿ ಸೆಂಟರ್ ಮುಖ್ಯಸ್ಥರಾದ ಶ್ರೀ ಅಖಿಲ್ ವಿಜಯ್ ಮೊದಲಾದವರು ಉಪಸ್ಥಿತರಿದ್ದರು.


ಒಡಂಬಡಿಕೆಗೆ ಸಹಿ ಹಾಕಿದ ಪ್ರಮುಖ ಉದ್ದೇಶಗಳು:

ಸಹಯೋಗಿ ಸಂಶೋಧನೆ ಮತ್ತು ಅಭಿವೃದ್ಧಿ (R&D) ಸೆಮಿಕಂಡಕ್ಟರ್ ಉತ್ಪಾದನೆ ಹಾಗೂ ಡಿಜಿಟಲ್ ತಂತ್ರಜ್ಞಾನ ಗಳಲ್ಲಿರುವ ಸಮಕಾಲೀನ ಸಮಸ್ಯೆಗಳನ್ನು ಎತ್ತಿ ಹಿಡಿಯಲು, ಮಾಹೆ ಉಪನ್ಯಾಸಕರು ಮತ್ತು ಎಚ್ ಟಿ ಎಲ್ ತಾಂತ್ರಿಕ ತಜ್ಞರ ನಡುವೆ ಒಗ್ಗಟ್ಟಾದ ಸಂಶೋಧನಾ ಅಧ್ಯಯನಗಳಿಂದ ಉಂಟಾಗುವ ಹೊಸ ಅನ್ವೇಷಣೆ ಗಳಿಗೆ ಪ್ರೋತ್ಸಾಹ ನೀಡುವುದು.

ಆಧುನಿಕ ಸಂಶೋಧನಾ ಪ್ರಾಯೋಗಿಕ ಪ್ರಯೋಗಾಲಯಗಳ ನಿರ್ಮಾಣ: ಎಚ್ ಟಿ ಎಲ್ ಸಂಸ್ಥೆಯು ತನ್ನ ಪ್ರಮುಖ ಸೆಮಿಕಂಡಕ್ಟರ್ ಉಪಕರಣ ತಯಾರಕರ ವ್ಯಾಪಕ ಜಾಗತಿಕ ವಿತರಣಾ ಜಾಲದಿಂದ ಮಾಹೆ ಯಲ್ಲಿ ಒಂದು ಅತ್ಯಾಧುನಿಕ ಹಾಗೂ ಸುಧಾರಿತ ಲಿತೋಗ್ರಾಫಿ ವ್ಯವಸ್ಥೆ, ಪ್ಲಾಟ್ ಪ್ಯಾನಲ್ ಡಿಸ್ಪ್ಲೇ ಪರಿಕರಗಳು ಮತ್ತು ತ್ರೀಡಿ ಮುದ್ರಣ ತಂತ್ರಜ್ಞಾನ ಇರುವ ಲೇಬೋರಟರಿಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. 


ತಾಂತ್ರಿಕ ತರಬೇತಿ ಮತ್ತು ಕಾರ್ಯಾಗಾರಗಳು: ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಲು ಎಚ್ ಟಿ ಎಲ್ ಸಹಾಯದಿಂದ ಸೆಮಿಕಂಡಕ್ಟರ್ ಉಪಕರಣ ಉತ್ಪಾದನೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ವಿಶೇಷ ತರಬೇತಿಗಳನ್ನು ಆಯೋಜಿಸಲಾಗುತ್ತದೆ.

ಅಂತರರಾಷ್ಟ್ರೀಯ ಅನುಭವ ಮತ್ತು ಇಂಟರ್ನ್‌ಷಿಪ್‌ಗಳು: ಮಾಹೆ ವಿದ್ಯಾರ್ಥಿಗಳಿಗೆ ಭಾರತ, ಜಪಾನ್ ಮತ್ತು ಇತರ ರಾಷ್ಟ್ರಗಳ ಎಚ್ ಟಿ ಎಲ್ ಘಟಕಗಳಲ್ಲಿ ಇಂಟರ್ನ್‌ಷಿಪ್‌ ಅವಕಾಶಗಳು.


ಈ ಒಡಂಬಡಿಕೆಯ ಒಪ್ಪಂದದ ಕುರಿತು ಮಾಹೆಯ ಪ್ರೋ ವೈಸ್ ಚಾನ್ಸಲರ್ (ತಂತ್ರಜ್ಞಾನ ಮತ್ತು ವಿಜ್ಞಾನ), ಮಾತನಾಡಿ, ಎಚ್ ಟಿ ಎಲ್ ನ ಜೊತೆಗಿನ ಈ ಸಹಭಾಗಿತ್ವ ಭಾರತದಲ್ಲಿ ಸೆಮಿಕಂಡಕ್ಟರ್ ವಿದ್ಯಾಭ್ಯಾಸ ಮತ್ತು ಸಂಶೋಧನೆಯ ಒಂದು ದೊಡ್ಡ ಮೈಲುಗಲ್ಲನ್ನು ಮಾಹೆ ನಿರ್ಮಿಸಿದೆ. ಮಾಹೆಯ ಶೈಕ್ಷಣಿಕ ಶ್ರೇಷ್ಠತೆಯನ್ನು ಎಚ್ ಟಿ ಎಲ್ ಉದ್ಯಮ ಪರಿಣತಿಯೊಂದಿಗೆ ಸೇರಿಸಿ ನಾವು ನಮ್ಮ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಕೌಶಲವನ್ನು ಹೆಚ್ಚಿಸಲು ಹಾಗೂ ಭಾರತದ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಮರ್ಪಕವಾದ ಕೊಡುಗೆ ನೀಡಲು ಹೊಸ ಅವಕಾಶಗಳನ್ನು ನಾವು ಸೃಷ್ಟಿಸುತ್ತಿದ್ದೇವೆ. ಈ ಪಾಲುದಾರಿಕೆಯು ಸೆಮಿಕಂಡಕ್ಟರ್ ವಲಯದಲ್ಲಿ ನಾವಿನ್ಯತೆಯನ್ನು ಸೃಷ್ಟಿಸಲು ಸಮರ್ಥರಾದ ವಿಶ್ವ ದರ್ಜೆಯ ಪ್ರತಿಭೆಗಳನ್ನು ಅಭಿವೃದ್ಧಿ ಪಡಿಸಲು ನಮಗೆ ಸಹಾಯಮಾಡುತ್ತದೆ ಎಂದರು.


ಮಾಹೆಯ ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿನಿ‌ ಪಾಲುದಾರಿಕೆಯ ಸಹಯೋಗದ ಪರಿಣಾಮವನ್ನು ಒತ್ತಿ ಹೇಳುತ್ತಾ ಎಚ್ ಟಿ ಎಲ್ ಜೊತೆಗೆ ಈ ಒಡಂಬಡಿಕೆಯಿಂದ ಶಿಕ್ಷಣ ಮತ್ತು ಉದ್ಯಮದ ನಡುವೆ ಕ್ರಿಯಾತ್ಮಕ ಸೇತುವೆಗಳನ್ನು ನಿರ್ಮಿಸುವ ಮಾಹೆ ಯ ಕ್ರಿಯಾತ್ಮಕ ದೃಷ್ಟಿಕೋನವನ್ನು ಪ್ರದರ್ಶಿಸುತ್ತದೆ. ಇದು ಸಂಶೋಧನೆ ಸಾಮರ್ಥ್ಯವನ್ನು ವಿಸ್ತರಿಸುವುದರ ಜೊತೆಗೆ, ಜಾಗತಿಕ ಸೆಮಿಕಂಡಕ್ಟರ್ ವಲಯದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಕೌಶಲಗಳು ಮತ್ತು ಸಂಬಂಧಿತ ಉದ್ಯಮ ಒಳನೋಟದೊಂದಿಗೆ ಪದವೀಧರರು ಸುಸಜ್ಜಿತರಾಗಿದ್ದಾರೆ ಎಂದು ತಿಳಿಸಲು ಸಹಕಾರಿಯಾಗುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಾನ್ಯತೆಯನ್ನು ಒದಗಿಸಲು ಮತ್ತು ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡಲು ಈ ಪಾಲುದಾರಿಕೆಯೂ ತೆರೆಯುವ ಅವಕಾಶಗಳ ಬಗ್ಗೆ ನಾವು ಇದ್ದೇವೆ ಎಂದು ತಿಳಿಸಿದರು. 

ಭಾರತ ಜಪಾನ್ ಶೈಕ್ಷಣಿಕ ಮತ್ತು ಕೈಗಾರಿಕಾ ಸಹಕಾರದಲ್ಲಿ ಈ ಮಹತ್ವದ ಮೈಲುಗಲ್ಲಿನ ಬಗ್ಗೆ ಪರಸ್ಪರ ಮೆಚ್ಚುಗೆ ಮತ್ತು ಎರಡು ಸಂಸ್ಥೆಗಳ ಸೆಮಿಕಂಡಕ್ಟರ್ ತಂತ್ರಜ್ಞಾನದ ಅಭಿವೃದ್ಧಿಯ ಸಮರ್ಪಣೆಯ ಒಪ್ಪಂದದ ಬದ್ಧತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು