Header Ads Widget

ಟೀಮ್ ನೇಷನ್ ಫಸ್ಟ್(ರಿ): "ಚಿಣ್ಣರ ನಟ್ಟಿ" ಕಾರ್ಯಕ್ರಮ

ಟೀಮ್ ನೇಷನ್ ಫಸ್ಟ್(ರಿ) ತಂಡವು ಪ್ರತಿ ವರ್ಷದಂತೆ ಈ ವರ್ಷವೂ "ಚಿಣ್ಣರ ನಟ್ಟಿ" ಕಾರ್ಯಕ್ರಮವನ್ನು 13 ಜುಲೈ ಭಾನುವಾರದಂದು ಕಿದಿಯೂರಿನ ಹೊಸ ವಾಟರ್ ಟ್ಯಾಂಕ್ ನ ಬಳಿ ಆಯೋಜಿಸಲಿದ್ದಾರೆ ಎಂದು ಅಧ್ಯಕ್ಷರಾದ ಸೂರಜ್ ಕಿದಿಯೂರ್ ಪ್ರಕಟಣೆಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ 300- 350 ವಿದ್ಯಾರ್ಥಿಗಳು ಪಾಲುಗೊಳ್ಳರಿದ್ದಾರೆ. ಬೆಳಿಗ್ಗೆ 7:30ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರ ಪಾಲುಗೊಳ್ಳುವಿಕೆಗೂ ಅವಕಾಶ ಇದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತದ ನಾಟಿ ಮಾಡುವ ಅವಕಾಶ ಹಾಗು ಸಮಾಜದಲ್ಲಿ ಕೃಷಿಯ ಪ್ರಾಮುಖ್ಯತೆಯ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸೂರಜ್ ಕಿದಿಯೂರ್ - 7353308181 ಇವರನ್ನು ಸಂಪರ್ಕಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು