ಆರೋಗ್ಯ ಮತ್ತು ವಿದ್ಯಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಾಹೆ ವಿ.ವಿ. ಯಕ್ಷಗಾನ ಕಲೆಯ ಉಳಿವಿಗೆ ಇಂದ್ರಾಾಳಿಯಲ್ಲಿ ಯಕ್ಷಗಾನ ಕೇಂದ್ರದ ಆಡಳಿತ ಕೈಗೆತ್ತಿಿಕೊಂಡು ಆಸಕ್ತ ವಿದ್ಯಾಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿಯೊಂದಿಗೆ ವಿದ್ಯಾಾಭ್ಯಾಾಸ ನೀಡುತ್ತಿದೆ ಎಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ ಎಚ್.ಎಸ್. ಬಲ್ಲಾಳ್ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉಡುಪಿ ಘಟಕ ವತಿಯಿಂದ ಪುರಭವನದಲ್ಲಿ ಶನಿವಾರ ನಡೆದ ಗೌರವಾರ್ಪಣೆ ಮತ್ತು ತೆಂಕು-ಬಡಗು ಯಕ್ಷಗಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಲ ಸತೀಶ್ ಶೆಟ್ಟಿ ಸ್ಥಾಪಕತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಳೆದ 10 ವರ್ಷಗಳಿಂದ ಯಕ್ಷಗಾನ, ನಾಟಕ, ದೈವಾರಾಧನೆ, ಕಂಬಳ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಾವಿರಾರು ಮಂದಿಗೆ ಆರೋಗ್ಯ, ಗೃಹ ನಿರ್ಮಾಣ, ಅಪಘಾತ ವಿಮೆ, ಆರು ಜಿಲ್ಲೆೆಗಳ ವಿದ್ಯಾಾರ್ಥಿಗಳಿಗೆ ಉಚಿತ ಯಕ್ಷ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಟ್ರಸ್ಟ್ ಮಾಡುತ್ತಿರುವ ಆರೋಗ್ಯ ಕಾಳಜಿ ಕಾರ್ಯದಲ್ಲಿ ಮಾಹೆ ವಿ.ವಿ. ಕೈ ಜೋಡಿಸಲಿದೆ ಎಂದರು.
ಗೌರವಾರ್ಪಣೆ ಸ್ವೀಕರಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್ ಮಾತನಾಡಿ, ಪಟ್ಲ ಸತೀಶ್ ಶೆಟ್ಟಿಯವರು ಕಲಾವಿದರಿಗಾಗಿ ಮಾಡುತ್ತಿರುವ ಉತ್ತಮ ಕಾರ್ಯಗಳಲ್ಲಿ ಯಕ್ಷಾಭಿಮಾನಿಗಳೆಲ್ಲರೂ ಕೈಜೋಡಿಸಿದರೆ ಅವರು ಕಂಡ ಕನಸು ನನಸಾಗಲಿದೆ ಎಂದರು.
ಉಡುಪಿ ಘಟಕದ ಸಾಧನೆಯನ್ನು ಪ್ರಶಂಶಿಸಿದ ಪಟ್ಲ ಸತೀಶ್ ಶೆಟ್ಟಿ ಅವರು, ದಶಮಾ ಸಂಭ್ರಮದ ದಶಕೋಟಿ ಅಭಿಯಾನಕ್ಕೆ ಉಡುಪಿಯ ದಾನಿಗಳಿಂದ ಸಂಗ್ರಹಿಸಿದ ಸಂಕಲ್ಪ ನಿಧಿಯನ್ನು ಸ್ವೀಕರಿಸಿ ಶುಭಾಶಂಶನೆಗೈದರು.
ನೂತನ ಟ್ರಸ್ಟಿಗಳನ್ನು ಗೌರವಿಸಲಾಯಿತು. ಉದ್ದೇಶಿತ ಉಚಿತ ತೆಂಕುತಿಟ್ಟು ನಾಟ್ಯ, ಹಿಮ್ಮೇಳ ತರಬೇತಿ ಗುರುಗಳಿಗೆ ವೀಳ್ಯೆ ನೀಡಲಾಯಿತು. ಟ್ರಸ್‌ಟ್ ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ. ಶೆಟ್ಟಿ, ದಿವಾಕರ ಶೆಟ್ಟಿ ತೋಟದಮನೆ, ದಾನಿ ಪ್ರೊ ಎಂ.ಎಲ್. ಸಾಮಗ ಉಪಸ್ಥಿತರಿದ್ದರು.
ಉಡುಪಿ ಘಟಕದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಸ್ವಾಗತಿಸಿದರು. ಶಿಲ್ಪಾ ಹರೀಶ್ ಜೋಷಿ ನಿರೂಪಿಸಿದರು. ಪಟ್ಲ-ಜನ್ಸಾಲೆ ಸಾರಥ್ಯದಲ್ಲಿ ‘ದಕ್ಷಯಜ್ಞ’ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.
0 ಕಾಮೆಂಟ್‌ಗಳು