ಸದ್ದು ಮಾಡದ ಸಮುದ್ರ. ಗಾಳಿಗೆ ವಿರುದ್ಧವಾಗಿ ಹಾರಾಡುವ ಧ್ವಜ. ಹಲವಾರು ನಿಗೂಢತೆಗಳಿಗೆ ಹೆಸರಾಗಿರುವ ಒರಿಸ್ಸಾದ ಪುರಿ ಜಗನ್ನಾಥ ಮಂದಿರವು ಯಾವ ಮಂತ್ರ, ತಂತ್ರಗಳ ಪ್ರಶ್ನೆಗೂ ಸಿಗದ ಭರತ ಭೂಮಿಯ ಅಚ್ಚರಿಯಾಗಿಯೇ ಉಳಿದಿದೆ.
1.ಇಲ್ಲೀ ಜಗನ್ನಾಥ, ಬಲಭದ್ರ ಹಾಗೂ ಸುಭದ್ರ ಎಂಬ ತ್ರಿಮೂರ್ತಿಗಳನ್ನು ಪೂಜಿಸುತ್ತಾರೆ. ಈ ಮೂರು ಮೂರ್ತಿಗಳನ್ನು ಬೇವಿನ ಮರಗಳಿಂದ ಕೆತ್ತಲಾಗಿದೆ.
2.ಈ ದೇವಸ್ಥಾನದ ಮೇಲೆ ಹಾರುವ ದ್ವಜವನ್ನು ಪ್ರತಿದಿನ ಬದಲಾಯಿಸಬೇಕು.ಒಂದು ವೇಳೆ ತಪ್ಪಿದಲ್ಲಿ ಈ ದೇವಸ್ಥಾನವನ್ನು 18 ವರ್ಷಗಳ ಕಾಲ ಮುಚ್ಚಲಾಗುವುದು.
3.ದೇವಸ್ಥಾನದ ಮೇಲೆ ಹಾರುವ ದ್ವಜವು ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ.
4.ಇಲ್ಲಿಗೆ ದಿನಾಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ.ಆದರೆ ಭಕ್ತರ ಸಂಖ್ಯೆ ಎಷ್ಟೆ ಜಾಸ್ತಿಯಾದರೂ ಕಡಿಮೆಯಾದರೂ ಇಲ್ಲಿನ ಪ್ರಸಾದ ಸ್ವಲ್ಪವೂ ವ್ಯರ್ಥವಾಗುವುದಿಲ್ಲ.
5.ಇಲ್ಲಿನ ಪ್ರಸಾದವನ್ನು 7 ಮಡಿಕೆಗಳಲ್ಲಿ ಒಂದರ ಮೇಲೆ ಒಂದರಂತೆ ಇಟ್ಟು ಬೇಯಿಸುತ್ತಾರೆ. ವಿಸ್ಮಯವೆನೆಂದರೆ ಮೇಲಿನ ಪ್ರಸಾದ ಬೆಂದ ನಂತರವೆ ಕೆಳಗಿನ ಪ್ರಸಾದ ಬೇಯುತ್ತದೆ.
6.ಈ ದೇವಸ್ಥಾನ ಮೇಲೆ ಯಾವುದೇ ಹಕ್ಕಿಗಳು ಹಾಗೂ ವಿಮಾನಗಳು ಹಾರುವುದಿಲ್ಲ.
7.ಸೂರ್ಯ ಎಷ್ಟೆ ಪ್ರಕಾಶಮಾನವಾಗಿ ಉರಿದರು ದೇವಸ್ಥಾನದ ನೇರಳು ಭೂಮಿಯ ಮೇಲೆ ಬೀಳುವುದಿಲ್ಲ.
8.ದೇವಸ್ಥಾನದ ಮೇಲಿರುವ ಸುದರ್ಶನ ಚಕ್ರವನ್ನು ಯಾವ ದಿಕ್ಕಿನಿಂದ ನೋಡಿದರೂ ನೋಡುಗರ ಕಡೆ ಮುಖ ಮಾಡಿದಂತೆ ಕಾಣುತ್ತದೆ.
ಜೈ ಜೈ ಜಗನ್ನಾಥ
(ಸಂಗ್ರಹ)
0 ಕಾಮೆಂಟ್‌ಗಳು