Header Ads Widget

ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷರಾಗಿ ರೋ ಡಾ ದೀಪಕ್ ರಾಮ್ ಬಾಯಿರಿ ಆಯ್ಕೆ

ಮಣಿಪಾಲ : ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ವಾರ್ಷಿಕ ಪದಗ್ರಹಣ ಸಮಾರಂಭವು ದಿನಾಂಕ 5-7-2025 ರಂದು ಮಣಿಪಾಲದ ಮಾಹೆ ಶಾರದ ಸಭಾಂಗಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ, ಕ್ಲಬ್‌ನ 11ನೇ ಅಧ್ಯಕ್ಷರಾಗಿ ರೋ. ಡಾ. ದೀಪಕ್ ರಾಮ್ ಬಾಯಿರಿ ಹಾಗೂ ಕಾರ್ಯದರ್ಶಿಯಾಗಿ ರೋ. ಮೋಹನ್ ನಾಯಕ್ ಅವರು ಅಧಿಕೃತವಾಗಿ ಪದಗ್ರಹಣ ಸ್ವೀಕರಿಸಿದರು.

ಪದಗ್ರಹಣ ಅಧಿಕಾರಿಯಾಗಿ PDG ರೋ. ಅಭಿನಂದನ್ ಶೆಟ್ಟಿ ಭಾಗವಹಿಸಿದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ KMC ಮಣಿಪಾಲದ ಡೀನ್ ಡಾ. ಅನಿಲ್ ಭಟ್ ಉಪಸ್ಥಿತರಿದ್ದರು. ರೋಟರಿ ಸಹಾಯಕ ಗವರ್ನರ್ ರೋ. ಅಮಿತ್ ಅರವಿಂದ್ ಹಾಗೂ ವಲಯ ಸೇನಾನಿ ರೋ. ಡಾ. D. ಶ್ರೀಧರ್ ಅವರು ಉಪಸ್ಥಿತಿಯಿದ್ದರು.

ನಿರ್ಗಮನ ಅಧ್ಯಕ್ಷರು ರೋ. ಡಾ. ಮನೋಜ್ ಕುಮಾರ್ ನಾಗಸಂಪಿಗೆ ಹಾಗೂ ನಿರ್ಗಮನ ಕಾರ್ಯದರ್ಶಿ ರೋ. ಡಾ. ನವೀನ್ ಕುಮಾರ್ ಕೂಡಮರ ಅವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮ ನಿರ್ವಹಣೆಯನ್ನು ರೋ. ಹಿಲ್ಡಾ ಕರ್ನೇಲಿಯೊ ಹಾಗೂ ರೋ. ಡಾ. ಗುರುಮೂರ್ತಿ ನೆರವೇರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು