Header Ads Widget

ಸಿದ್ದಾಪುರ: ವನಮಹೋತ್ಸವ ಕಾರ್ಯಕ್ರಮ

ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಗ್ರಾಮ ಪಂಚಾಯತ್ ಸಿದ್ದಾಪುರ, ವಲಯ ಅರಣ್ಯಾಧಿಕಾರಿಗಳ ಕಚೇರಿ ಸಿದ್ದಾಪುರ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಗ್ರಾಮ ವಿಕಾಸ ಸಮಿತಿ ವಿಭಾಗ ಟೋಳಿ ಸದಸ್ಯರಾದ ಶ್ರೀಮತಿ ರಮಿತಾ ಶೈಲೇಂದ್ರ ಮತ್ತು ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಜ್ಯೋತಿ ಕೆ.ಸಿ ಅವರು ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಗಣೇಶ ಅವರಿಗೆ ಗಿಡ ಹಸ್ತಾಂತರಿಸುವುದರ ಮೂಲಕ ಉದ್ಘಾಟಿಸಿದರು. ಮಿಶ್ರೀಮತಿ ರಮಿತಾ ಶೈಲೇಂದ್ರ ಅವರು ಮಾತನಾಡಿ ಪ್ರಕೃತಿ ನಮಗೆಲ್ಲ ಕೊಟ್ಟಿದೆ ನಾವು ಅದರ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ.ವನಮಹೋತ್ಸವದ ಉದ್ದೇಶ,ನಮ್ಮ ಹಿರಿಯರು ಪ್ರಕೃತಿ ಪೂಜಕರಾಗಿದ್ದರು,ಪ್ರಕೃತಿ ಪೂಜೆಯ ವೈಜ್ಞಾನಿಕ ಹಿನ್ನಲೆ , ಸಮಾಜ ಕಟ್ಟುವಲ್ಲಿ ಗ್ರಾಮ ವಿಕಾಸದ ಪಾತ್ರದ ಕುರಿತು ಮಾತನಾಡಿದರು.ಶ್ರೀಮತಿ ಜ್ಯೋತಿ ಕೆ.ಸಿ ವಲಯ ಅರಣ್ಯಾಧಿಕಾರಿಗಳು ಮಾತನಾಡಿ ಅರಣ್ಯ ಸಂರಕ್ಷಣೆಯಲ್ಲಿ ನಮ್ಮ ಜವಾಬ್ದಾರಿ,ಮುಂದಿನ ಪೀಳಿಗೆಗೆ ಪ್ರಕೃತಿ ಪಾಠದ ಅವಶ್ಯಕತೆ ಕುರಿತು ಮಾತನಾಡಿದರು. ಗ್ರಾಮ ವಿಕಾಸ ಸಮಿತಿಯ ಸದಸ್ಯರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಗ್ರಾಮ ವಿಕಾಸ ಸಮಿತಿಯ ಕಾರ್ಯ ಉದ್ದೇಶಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀ ಪ್ರವೀಣ್ ಪಟೇಲ್,ಮಾನ್ಯ ಸಂಘಚಾಲಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಿದ್ದಾಪುರ ತಾಲೂಕು,ಶ್ರೀ ಕೃಷ್ಣ ಪೂಜಾರಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸಿದ್ದಾಪುರ ,ಶ್ರೀ ಸಂಜೀವ ಉಪ ವಲಯಅರಣ್ಯಾಧಿಕಾರಿಗಳು, ಶಂಕರನಾರಾಯಣ ವಲಯ ,ಶ್ರೀಗಣೇಶ ಪ್ರಾಂಶುಪಾಲರು,ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ,ಶ್ರೀ ಸುಧಾಕರ ಆಜ್ರಿ,ಗ್ರಾಮ ವಿಕಾಸ ಸಮಿತಿ ಜಿಲ್ಲಾ ಸಹಸಂಯೋಜಕರು,ಶ್ರೀ ಶ್ರೀಕಾಂತ್ ನಾಯಕ್, ತಾಲೂಕು ಸಂಯೋಜಕರು ಗ್ರಾಮ ವಿಕಾಸ ಸಮಿತಿ ಸಿದ್ದಾಪುರ ತಾಲೂಕು,ಶ್ರೀ ಎಸ್ ಪಾಂಡುರಂಗ ಪೈ ಸಂಯೋಜಕರು ಗ್ರಾಮ ವಿಕಾಸ ಸಮಿತಿ ಸಿದ್ದಾಪುರ ,ಶ್ರೀ ಭೋಜರಾಜ್ ಶೆಟ್ಟಿ, ಅಧ್ಯಕ್ಷರು ಭಾರತೀಯ ಕಿಸಾನ್ ಸಂಘ ಗ್ರಾಮ ಸಮಿತಿ ಸಿದ್ದಾಪುರ. ಶ್ರೀ ಭೋಜ ಶೆಟ್ಟಿ ಕಡ್ರಿ, ಅಧ್ಯಕ್ಷರು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಹೋರಾಟ ಸಮಿತಿ,ಸಿದ್ದಾಪುರ, ಶ್ರೀ N.G.ಭಟ್ ಅಧ್ಯಕ್ಷರು ರೋಟರಿ ಕ್ಲಬ್, ಹೊಸಂಗಡಿ ಸಿದ್ದಾಪುರ,ಶ್ರೀ ಟಿ.ಜಿ.ಪಾಂಡುರಂಗ ಪೈ ವಿದ್ಯಾಭಾರತಿಯ ಜಿಲ್ಲಾಧ್ಯಕ್ಷರು,ಶ್ರೀ ಚಿದಾನಂದ ಶೆಟ್ಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು,ಪರ್ಯಾವರಣ ತಾಲೂಕು ಪ್ರಮುಖ ಶ್ರೀಕಾಂತ್ ಶೆಣೈ ಆರ್ಗೋಡು, ಶ್ರೀ ರಾಜೇಂದ್ರ ಬೆಚ್ಚಳ್ಳಿ ಅಧ್ಯಕ್ಷರು ಶ್ರೀ ಭೋಜು ಪೂಜಾರಿ ಚಾರಿಟಬಲ್ ಟ್ರಸ್ಟ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು