ಯಕ್ಷಗಾನ ಕಲಾರಂಗ (ರಿ.) ಉಡುಪಿ ವೃತ್ತಿ ಮೇಳದ ಯುವ ಕಲಾವಿದರಿಗೆ ನಾಲ್ಕು ದಿನಗಳ ಯಕ್ಷಗಾನ ಮಾರ್ಗದರ್ಶಿ ಸನಿವಾಸ ಶಿಬಿರ ಆಯೋಜಿಸಿತ್ತು. ಸುಮಾರು ಮೂವತ್ತು ಜನ ಶಿಬಿರಾರ್ಥಿಗಳಿಂದ ಕೂಡಿದ ಇದರ ಸಮಾರೋಪ ಸಮಾರಂಭ ಜುಲೈ 4 ರಂದು ಜರಗಿತು.
ಸಮಾರೋಪಕ್ಕೂ ಪೂರ್ವದಲ್ಲಿ ಎಲ್ಲಾ ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊ0ಡರು. ಶಿಬಿರಾ ರ್ಥಿಗಳು ಇದೊಂದು ಅಪೂರ್ವ ಅನುಭವವಾಗಿ ನಮಗೆ ಉಪಯುಕ್ತ ಮಾಹಿತಿ ಒದಗಿಸಿದೆ. ಅನೇಕ ಹಿರಿಯ ಕಲಾವಿದರ, ಯಕ್ಷಗಾನ ವಿದ್ವಾಂಸರ, ಅಲ್ಲದೆ ನಾಟಕ, ನೃತ್ಯ, ಗಮಕ ಹೀಗೆ ಅನ್ಯ ಕಲಾ ಪ್ರಕಾರ ಗಳ ಹಲವು ಸಂಪನ್ಮೂಲ ವ್ಯಕ್ತಿಗಳಿಂದ ನಮಗೆ ಹಲವು ಹೊಸ ವಿಚಾರಗಳು ತಿಳಿದವು.
ಡಾ.ಅನ್ನಪೂರ್ಣ ಆಚಾರ್ಯರು ನಡೆಸಿಕೊಟ್ಟ ಯೋಗ ತರಗತಿ, ಯೋಗದ ಕುರಿತು ಪ್ರಾಥಮಿಕ ಮಾಹಿತಿ ನೀಡಿತು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಶಿಬಿರದ ಪ್ರಾಯೋಜಕರೂ, ಸಂಸ್ಥೆಯ ಅಧ್ಯಕ್ಷರೂ ಆದ ಎಂ. ಗ0ಗಾಧರ ರಾವ್, ಶಿಬಿರದ ನಿರ್ದೇಶಕರಾದ ಕೊಂಡದಕುಳಿ ರಾಮ ಚ0ದ್ರ ಹೆಗಡೆ, ಉಬರಡ್ಕ ಉಮೇಶ್ ಶೆಟ್ಟಿ, ಪವನ್ ಕಿರಣ್‌ಕೆರೆ, ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್ ಅಲ್ಲದೆ ಗಣ್ಯರಾದ ಡಾ. ಎ. ಪಿ. ಭಟ್, ಡಾ. ಎಂ. ಆರ್. ಹೆಗಡೆ, ಪಣಂಬೂರು ವಾಸುದೇವ ಐತಾಳ್ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು