ವೈದ್ಯ, ಲೆಕ್ಕಪರಿಶೋಧಕ, ಪತ್ರಿಕಾ ದಿನಾಚರಣೆಯ ನಿಟ್ಟಿನಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಆರೋಗ್ಯ ಪೂರ್ಣ ಸಮಾಜಕ್ಕೆ ವೈದ್ಯರು,ಲೆಕ್ಕಪರಿಶೋಧಕರು, ಪತ್ರಕರ್ತರು ನೀಡುತ್ತಿರುವ ಕೊಡುಗೆಯನ್ನು ನೆನಪಿಸಿಕೊಂಡು ಉಡುಪಿ ದೊಡ್ಡಣಗುಡ್ಡೆಯ ಜನಾನುರಾಗಿ ವೈದ್ಯರಾದ ಡಾ|ಜಯಂತ್ ಕುಮಾರ್,ಖ್ಯಾತ ಲೆಕ್ಕ ಪರಿಶೋಧಕ ಕೆ.ಸುರೇಂದ್ರ ನಾಯಕ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಿರಿಯ ಪತ್ರಕರ್ತ ನಝೀರ್ ಪೊಲ್ಯರವರಿಗೆ ಶಾಲು ಹೊದಿಸಿ ಗೌರವಿಸ ಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸತೀಶ್ ಕುಮಾರ್ ಮಂಚಿ, ತಾಲೂಕು ಕೆಡಿಪಿ ಸದಸ್ಯ ಭರತ್ ಮಣಿಪಾಲ, ತೆಂಕನಿಡಿಯೂರು ಪಂಚಾಯತ್ ಸದಸ್ಯ ಶರತ್ ಶೆಟ್ಟ ನಗರಸಭಾ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾದವ,ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್,ಮಾಜಿ ನಗರಸಭಾ ಸದಸ್ಯರಾದ ನಾರಾಯಣ ಕುಂದರ್, ಸತೀಶ್ ಪುತ್ರನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸತೀಶ್ ಕೊಡವೂರು, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜಯ್ ಆಚಾರ್ಯ, ಯುವ ಉದ್ಯಮಿ ಸಚಿನ್ ಕುಮಾರ್ ಮಣಿಪಾಲ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು