BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026

ಕಾಗಿ೯ಲ್ ವಿಜಯ ದಿನ ಎಲ್ಲಾ ಭಾರತೀಯರಿಗೂ ಸ್ಫೂರ್ತಿಯ ದಾರಿದೀಪ


ಇಂದು ಜುಲೈ 26... ಪ್ರತಿ ಭಾರತೀಯರು ಸ್ಮರಿಸ ಬೇಕಾದ ದಿನ. ಶತ್ರುರಾಷ್ಟ್ರದ ದಾಳಿಯಿಂದ ಸಂಕಷ್ಟದಲ್ಲಿದ್ದ ಭಾರತ ತನ್ನ ಕೆಚ್ಚೆದೆಯ ವೀರರ ತ್ಯಾಗ, ಬಲಿದಾನದ ಫಲವಾಗಿ ಸುರಕ್ಷಿತವಾಗಿತ್ತು. ಈ ಮಹತ್ವದ ದಿನಕ್ಕೆ ಈ ಸಲ 26ನೇ ವರ್ಷ ತುಂಬುತ್ತದೆ...!

ಹೌದು... ಯಾವ ಭಾರತೀಯರೂ ಕಾರ್ಗಿಲ್ ಯುದ್ಧವನ್ನು ಮರೆಯಲು ಸಾಧ್ಯವೇ ಇಲ್ಲ. ಈ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ತನ್ನ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದರು. ಇವರ ತ್ಯಾಗ, ಬಲಿದಾನ, ದೇಶಪ್ರೇಮ ಖಂಡಿತಾ ಎಲ್ಲಾ ಭಾರತೀಯರಿಗೂ ಸ್ಫೂರ್ತಿ, ದಾರಿದೀಪ.

ಯುದ್ಧದ ನಡೆ :- 1999ರ ಮೇ ನಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಕಾಶ್ಮೀರದ ಕಾರ್ಗಿಲ್ ಜಿಲ್ಲೆಗೆ ನುಸುಳಿದರು. ಪರಿಣಾಮ ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೈನ್ಯದ ನಡುವೆ ಸಶಸ್ತ್ರ ಸಂಘರ್ಷ ಆರಂಭಗೊಂಡಿತ್ತು. ಭಾರತೀಯ ಭೂಪ್ರದೇಶದಿಂದ ಒಳನುಗ್ಗುವ ವರನ್ನು ಓಡಿಸಲು ಭಾರತೀಯ ಸೇನೆ 'ಆಪರೇಷನ್ ವಿಜಯ್' ಎಂಬ ಮಿಲಿಟರಿ ಕಾರ್ಯಾಚರಣೆ ಯನ್ನು ಪ್ರಾರಂಭಿಸಿತು. ಸುಮಾರು ಎರಡು ತಿಂಗಳಿಗೂ ಅಧಿಕ ಕಾಲ ಈ ಯುದ್ಧ ಮುಂದು ವರಿದಿತ್ತು.

ಈ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ್ದ ನಮ್ಮ ಭಾರತೀಯ ಯೋಧರು ಪಾಕಿಸ್ತಾನದ ಸೈನ್ಯ ಹಾಗೂ ಉಗ್ರಗಾಮಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದರು. ಇದರ ಫಲವಾಗಿ ತನ್ನ ಭೂಪ್ರದೇಶದಲ್ಲಿ ಭಾರತ ಹಿಡಿತ ಸಾಧಿಸಿಕೊಂಡಿತ್ತು. ಕೊನೆಗೆ 1999ರ ಜುಲೈ 26ರಂದು 'ಟೈಗರ್ ಹಿಲ್' ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಯುದ್ಧ ಕೊನೆಗೊಂಡಿತು. ಈ ಯುದ್ಧದಲ್ಲಿ ಭಾರತ ವಿಜಯ ಗಳಿಸಿತು. ಅಂದು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅದೆಷ್ಟೋ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು.

ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಹೋರಾಡಿ ದೇಶದ ರಕ್ಷಣೆ ಮಾಡಿದ್ದರು. ಭಾರತ ಸೈನ್ಯ ಅಂದು ಸುಮಾರು 490ರಷ್ಟು ಸಾಹಸಿಗಳನ್ನು ಕಳೆದುಕೊಂಡಿತ್ತು.

ಕಾಗಿ೯ಲ್ ವಿಜಯ ದಿನಾಚರಣೆ :- ಕಾರ್ಗಿಲ್ ಯುದ್ಧ ಭಾರತ ಹಾಗೂ ನಮ್ಮ ಸೈನ್ಯದ ಕಾಗಿ೯ಲ್ ವಿಜಯ ದಿನ ಎಲ್ಲಾ ಭಾರತೀಯರಿಗೂ ಸ್ಫೂರ್ತಿಯ ದಾರಿದೀಪ ಪಾಲಿಗೂ ಮಹತ್ವದಾಗಿದೆ. ಭಾರತವು ತನ್ನ ಪ್ರಾದೇಶಿಕ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಬಲಿಷ್ಠವಾಗಿದೆ ಎಂಬುದನ್ನೂ ಈ ಯುದ್ಧ ಜಗತ್ತಿಗೆ ತೋರಿಸಿತ್ತು. ಹೀಗಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ.

ಕಾಗಿ೯ಲ್ ವಿಜಯ ದಿನ ಆಚರಣೆ ಮಾಡುದಕ್ಕೂ ನಮಗೆ ಸಮಯ ಇಲ್ಲವಾಗಿದೆ. ನಮ್ಮ ದೇಶದ ಒಳಗಿನ ಪಟ್ಟಭದ್ರ ಹಿತಾಸಕ್ತಿಗಳು ಈ ದಿನ ಆಚರಣೆ ಮಾಡುದಕ್ಕೂ ತೊಂದರೆ ನೀಡುತ್ತಿ ರುವುದು ಸರಿಯಲ್ಲ. ಪ್ರತಿಯೊಂದು ವಿಚಾರದಲ್ಲಿ ಕೂಡ ಸಾಕ್ಷಿ ಕೊಡಿ ಎಂದು ಹೇಳುವ ನಮ್ಮ ರಾಜಕೀಯ ಪಕ್ಷದವರಿಗೆ ಏನೆಂದು ಕರೆಯಬೇಕು ನಾ ಕಾಣೆ.

ರಾಜಕೀಯ ಚುನಾವಣಿ ಸಂದಭ೯ದಲ್ಲಿ ಮಾಡ ಬೇಕು ಆದರೆ ಸೈನಿಕರ ನೈತಿಕ ಶಕ್ತಿ ಕುಂದು ತರುವ ರಾಜಕೀಯ ಹೇಳಿಕೆ ಬೇಡ.

ವಷ೯ ಕ್ಕೆ ಕನಿಷ್ಠ ಒಂದು ದಿನ ನಮ್ಮ ಸೈನಿಕರನ್ನು ನೆನಪು ಮಾಡಲಾಗದಿರುವುದು ಸರಿಯಲ್ಲ, ಸೈನಿಕರಿಂದ ನಾವು ದೇಶದಲ್ಲಿ ಸಂತೋಷ ದಲ್ಲಿದ್ದೇವೆ. ಹೀಗಾಗಿ ಈ ವಿಜಯ ದಿನದಂದು ನಾವೆಲ್ಲರೂ ಒಂದಾಗಿ ಸೈನಿಕರಿಗೆ ನಮನ ಸಲ್ಲಿಸೋಣ.

ಯೋಧರಿಗೆ ಗೌರವ : ತಾಯಿ ನೆಲ ಸಂಕಷ್ಟ ದಲ್ಲಿದ್ದಾಗ ಸಾವಿಗೂ ಅಂಜದೆ ಹೋರಾಡಿದ ಯೋಧರನ್ನು ಸ್ಮರಿಸೋಣ. ದೇಶಕ್ಕಾಗಿ ಪ್ರಾಣಾರ್ಪಣೆಗೈದ ಕೆಚ್ಚೆದೆಯ ವೀರರ ತ್ಯಾಗ ಎಂದಿಗೂ ಅಮರ. ಓ ವೀರರೇ ನಿಮ್ಮ ಸಾಹಸ ಸೂರ್ಯ ಚಂದ್ರರಿರುವ ತನಕ ಶಾಶ್ವತ.

ನಮ್ಮ ದೇಶದ ಸಮಗ್ರತೆಗೆ, ಗೌರವ, ಸುರಕ್ಷತೆಯ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ನಿಲ್ಲಬೇಕು ಎಂಬ ಪಾಠ ಯೋಧರ ಈ ತ್ಯಾಗದಿಂದ ಸಿಗುತ್ತದೆ.

ಓ ವೀರರೇ ನೀವು ಕಲಿಸಿದ ಪಾಠವೇ ನಮ್ಮ ಬದುಕಿಗೆ ಬೆಳಕು ಕಾರ್ಗಿಲ್ ವಿಜಯ ದಿವಸದಂತಹ ಮಹತ್ವದ ದಿನದಂದು ನಾನು ವೀರ ಯೋಧರ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮಾತೃಭೂಮಿಗೆ ಅನರ್ಘ್ಯ ರತ್ನವನ್ನು ನೀಡಿದ ನಿಮಗೆ ಧನ್ಯವಾದ. ಮನೆಯ ಬೆಳಕನ್ನು ಕಳೆದುಕೊಂಡರೂ ದೇಶಕ್ಕಾಗಿ ಧೈರ್ಯದಿಂದ ನಿಂತ ನಿಮ್ಮ ತ್ಯಾಗವೂ ಶ್ಲಾಘನೀಯ.

ಯೋಧರೆಂದರೆ ಅವರು ಬರೀ ವ್ಯಕ್ತಿಗಳಲ್ಲ. ಅವರು ಶಕ್ತಿ, ನಮ್ಮ ಹೆಮ್ಮೆ, ಸೇನೆಯ ಕೀರ್ತಿ. ಈ ವೀರರಿಂದಾಗಿ ಭಾರತ ಎಂದೆಂದಿಗೂ ಸುರಕ್ಷಿತ.

✍🏼 ರಾಘವೇಂದ್ರ ಪ್ರಭು ಕವಾ೯ಲು

ಲೇಖಕ


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!