ರಾಜ್ಯದ ಮಹಿಳಾ ಕಾಂಗ್ರೆಸ್ ನ ರಾಜಾಧ್ಯಕ್ಷೆ ಆಗಿರುವ ಸೌಮ್ಯ ರೆಡ್ಡಿ ಮೇಡಂ ಅವರ ಬಗ್ಗೆ ಮಾತನಾಡಿರುವ ಹಾಗೂ ತಮ್ಮ ಪಕ್ಷದವರ ಉಪದೇಶ ಮಾತ್ರವೇ ಕೇಳಿ ಅಭ್ಯಾಸವಾಗಿರುವ ತಮ್ಮ ಗಮನಕ್ಕೆ :
1. ತಮ್ಮ ಪಕ್ಷದವರಾದ ಶ್ರೀ.ಸಿ.ಟಿ. ರವಿ ಹಾಗೂ ಶ್ರೀ ರವಿಕುಮಾರ್ ಮಹಿಳೆಯರ ಬಗ್ಗೆ ಮಾತನಾಡುವ ಅಸಹ್ಯಕರ, ಅಪಾರ್ಥ ಮಾತುಗಳು ಮಾತ್ರ ಉಪ ದೇಶವಾಗಿ ತಾವು ಸ್ವೀಕರಿಸುತ್ತೀರಾ? ಅಭಿಪ್ರಾಯ ಕೋರಲಾಗಿದೆ.
2. ತಮ್ಮ ನಾಯಕರುಗಳ ಮಾತುಗಳಿಗೆ ಯಾವುದೇ ಅನಗತ್ಯ ಆಕ್ಷೇಪ, ತಕರಾರು ಇಲ್ಲವೇ?
3. ರಾಜ್ಯದ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾಗಿ ರುವ ಸೌಮ್ಯ ರೆಡ್ಡಿ ಮೇಡಂ ಅವರು ಮಾತ ನಾಡಿದರೆ, ಅದು ಉಪದೇಶ, ಅದು ತಮಗೆ ಅನಗತ್ಯವೆಂದಾದರೇ, ಮಹಿಳೆಯರ ಬಗೆಗಿನ ತಮ್ಮ ನಿಲುವೇನು?
4. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ , ಘಟಾನುಘಟಿನಾಯಕರುಗಳೇ , ಒಂದಲ್ಲ ಎರೆಡೆರಡು ಬಾರಿ ಸೋತು ಗೆದ್ದಿದ್ದಾರೆ, ( ಮಾಜಿ ಪ್ರಧಾನಮಂತ್ರಿಗಳಾದ ಶ್ರೀ.ಹೆಚ್.ಡಿ ದೇವೇ ಗೌಡರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ, ಶ್ರೀ ಜಗದೀಶ್ ಶೆಟ್ಟರ್, ಪ್ರಸ್ತುತ ತಮ್ಮ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಗಳಾಗಿರುವ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಶ್ರೀ ವಿ.ಸೋಮಣ್ಣ, ಕು. ಶೋಭ ಕಾರದ್ಲಾಂಜೆ, ಇನ್ನು ಹೆಸರುಗಳು ಬೇಕಿದ್ದರೆ ತಿಳಿಸುತ್ತೇವೆ.
ಇದೆಲ್ಲ ದೊಡ್ಡ ವಿಷಯ ಬಿಡಿ, ನೀವು ಎಂದಾದರೂ ಚುನಾವಣೆಯಲ್ಲಿ ನಿಂತು ಜನಾಭಿಪ್ರಾಯ ಪಡೆದು ಯಾವುದೇ ಶಾಸಕ ಸ್ಥಾನಮಾನ ಅಲಂಕರಿ ಸಿದ್ದೀರಾ? ಅದು ಬೇಡ ಗ್ರಾಮ ಪಂಚಾಯಿತಿ ಚುನಾವಣೆಗಾದರೂ ನಿಂತಿದ್ದೀರಾ ? ಸೌಮ್ಯ ರೆಡ್ಡಿ ಮೇಡಂ ಅವರು ಸೋತಿದ್ದಾರೆ ಎಂದು ಹೇಳುವ ಯಾವ ನೈತಿಕತೆ ತಮಗಿದೆ ?
5. ಸೋತಿರಬಹುದು ಆದರೂ ಮತ್ತೊಮ್ಮೆ ಪುಟಿದೇಳಬೇಕು ಎನ್ನುವ ಛಲವಿರುವ, ಆತ್ಮ ವಿಶ್ವಾಸ ತೋರುವ ಹೆಣ್ಣುಮಕ್ಕಳನ್ನು ಗೌರವಿಸುವ ಸೌಜನ್ಯ ಬೇಡವೇ? ಇದೇ ತಾವು ತಮ್ಮ ಪಕ್ಷ ದವರಿಂದ ಕಲಿತಿರುವ ಉಪದೇಶವೇ? ನಿಮ್ಮಂತ ಹವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ?
6. ಸಾರಿಗೆ ಸಂಸ್ಥೆಯಲ್ಲಿ ತಮ್ಮ ಪಕ್ಷದ ಅವಧಿಯಲ್ಲಿ ರೂ.5900 ಕೋಟಿ ಸಾಲ ಬಿಟ್ಟು ಹೋಗಿದ್ದರು ಇದು ತಮಗೆ ತಿಳಿದಿಲ್ಲವಾದರೇ , ತಮ್ಮ ಪಕ್ಷ ದವರಿಂದ ಉಪದೇಶ ಕೇಳಿ ತಿಳಿದುಕೊಳ್ಳಬಹುದು.
7. ಸಾರಿಗೆ ಸಂಸ್ಥೆಗಳಲ್ಲಿ ಕಳೆದ 8 ವರುಷಗಳಿಂದ ಒಂದೇ ಒಂದು ನೇಮಕಾತಿ ಆಗಿರಲಿಲ್ಲ, ಸೌಮ್ಯ ರೆಡ್ಡಿ ಮೇಡಂ ಅವರ ತಂದೆಯವರ ಬಗ್ಗೆ ಮಾತನಾಡಿದ್ದೀರೋ, ಅದೇ ಸಾರಿಗೆ ಸಚಿವರು ಅಧಿಕಾರವಹಿಸಿಕೊಂಡ ನಂತರ 9000 ನೇರ ನೇಮಕಾತಿಗೆ ಅನುಮತಿ ನೀಡಿ, ಈಗಾಗಲೇ 7500 ನೇಮಕಾತಿ ಪೂರ್ಣಗೊಂಡಿದೆ.
8. ಇದರೊಂದಿಗೆ ಮೃತಪಟ್ಟ ಸಾರಿಗೆ ಸಿಬ್ಬಂದಿಗಳ ಅವಲಂಬಿತರಿಗೆ ಕಳೆದ ಎರಡು ವರ್ಷದಲ್ಲಿ 1000 ಅನುಕಂಪದ ಆಧಾರದ ನೌಕರಿ ನೀಡಿರುವುದು ಇದೇ ಸಾರಿಗೆ ಸಚಿವರು ಅಧಿಕಾರ ವಹಿಸಿಕೊಂಡ ನಂತರ.
9. ತಾವು ಸತ್ಯವನ್ನೇ ನುಡಿದ್ದೀರಾ, ಸತ್ಯ ಬೆಂಕಿ ಕೆಂಡವಿದ್ದಂತೆ ತುಂಬಾ ಹೊತ್ತು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಧನ್ಯವಾದಗಳು.
10. ತಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ಒಂದೇ ಒಂದು ಹೊಸ ಬಸ್ ಸೇರ್ಪಡೆಯಾಗಿರಲಿಲ್ಲ, ಡಕೋಟ ಬಸ್ ಕಲ್ಪಿಸಿದ ಕೀರ್ತಿ ತಮ್ಮ ಪಕ್ಷಕ್ಕೆ ಸಲ್ಲಬೇಕು. ಡೀಸೆಲ್ ಪಾವತಿ ಬಾಕಿ ಇತ್ತು, ಶೂನ್ಯ ನೇಮಕಾತಿ ಎಲ್ಲವೂ ತಮ್ಮ ಪಕ್ಷದ ಕಾಲದಲ್ಲಿ. ಆಗ ಉಡುಪಿ ಭಾಗಕ್ಕೆ ಬಸ್ ಬೇಕು ಎಂದು ಕೇಳುವ ತಾಕತ್ತು ತಮ್ಮಲ್ಲಿ ಇರಲಿಲ್ಲವೇ?
11. ಇದೇ ಸಾರಿಗೆ ಸಚಿವರು ಬಂದ ಮೇಲೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮತಿ ನೀಡಿದ್ದು ಈಗಾಗಲೇ 4987 ಬಸ್ಸುಗಳು ಸೇರ್ಪಡೆಯಾಗಿವೆ.
12. ಉಡುಪಿ, ಮಂಗಳೂರು ,ಪುತ್ತೂರು ವ್ಯಾಪ್ತಿ ಯ ಘಟಕಗಳಿಗೆ ಚಾಲಕ ನಿರ್ವಾಹಕರಿಲ್ಲದೆ ಬಸ್ಸುಗಳನ್ನು ಓಡಿಸಲು ಸಾಧ್ಯವಾಗದೇ, ಟ್ರಿಪ್ ಗಳನ್ನು ಕಡಿತಗೊಳಿಸಿದ್ದು ತಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಈ ಬಗ್ಗೆಯೂ ಉಪದೇಶ ಕೇಳಿ ತಿಳಿದುಕೊಳ್ಳಬಹುದು.
13. ಇದೇ ಸಾರಿಗೆ ಸಚಿವರು ಅಧಿಕಾರಕ್ಕೆ ಬಂದ ಮೇಲೆ ಉಡುಪಿ, ಕುಂದಾಪುರ,ಮಂಗಳೂರು, ಪುತ್ತೂರು ಗೆ 800 ಹೊಸ ಚಾಲಕ/ನಿರ್ವಾಹಕರನ್ನು ನೇಮಕ ಮಾಡಿ ಒದಗಿಸಿರುವುದು.
14. ಮುಜರಾಯಿ ಇಲಾಖೆಯಲ್ಲಿ ಈವರೆಗೂ ಯಾವೊಬ್ಬ ಮಂತ್ರಿಯೂ ಮಾಡಿರದಂತಹ ಕ್ರಾಂತಿಕಾರಿ ಕೆಲಸಗಳನ್ನು ಮಾಡಿ ಅರ್ಚಕರ ಕಣ್ಮಣಿ ಎಂದೇ ಹೆಸರು ಮಾಡಿರುವರು ಬೇರಾರು ಅಲ್ಲ, ,ಇದೇ ಸೌಮ್ಯ ರೆಡ್ಡಿಮೇಡಂ ರವರ ತಂದೆಯವರು.
15. ದೇವಸ್ಥಾನಗಳ ಅಭಿವೃದ್ಧಿಗೆ ಪ್ರಾಧಿಕಾರಗಳ ರಚನೆ: ಚಾಮುಂಡಿ ಬೆಟ್ಟ ಮೈಸೂರು, ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಹುಲಿಗೆಮ್ಮ ದೇವಾಲಯ ಕೊಪ್ಪಳ, ಸವದತ್ತಿ ಯಲ್ಲಮ್ಮ ದೇವಾಲಯ
16. DBT ಮೊಬೈಲ್ ಮೂಲಕ ತಸ್ತೀಕ್ ವರ್ಷಾಸನ ಜಮಾ
17. ಅರ್ಚಕರು / ನೌಕರರು ಮತ್ತು ಅವರ ಕುಟುಂಬದವರಿಗೆ ಉಚಿತ ಕಾಶಿ-ಗಯಾ ಯಾತ್ರೆ ಹಾಗೂ ದಕ್ಷಿಣ ಯಾತ್ರೆ
18. ಅರ್ಚಕರ / ನೌಕರರ ಮೃತ ಕುಟುಂಬಕ್ಕೆ ಪರಿಹಾರ ಧನ ರೂ. 30,000 ರಿಂದ ರೂ. 2.ಲಕ್ಷಕ್ಕೆ ಹೆಚ್ಚಿಸಲಾಗಿದೆ
19. ಸಾಮೂಹಿಕ ಮದುವೆಗಳಿಗೆ ಉತ್ತೇಜನ: ʼಮಾಂಗಲ್ಯ ಭಾಗ್ಯʼ ಯೋಜನೆಯಡಿ ರೂ. 63,000/-ಗಳ ಪ್ರೋತ್ಸಾಹ ಧನ
20. ಅರ್ಚಕರ / ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡಿಕೆ ಪ್ರಾರಂಭ
21. ಶ್ರೀ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ಸಮಗ್ರ ಅಭಿವೃದ್ಧಿ ಗೆ ಕ್ರಿಯಾಯೋಜನೆಗೆ ಅನುಮತಿ. ಈ ಯೋಜನೆಯಡಿ ಸರ್ಪ ಸಂಸ್ಕಾರ ಯಾಗ ಶಾಲೆ ನಿರ್ಮಾಣ,ಅನ್ನ ದಾಸೋಹ ಭವನ ನಿರ್ಮಾಣ, ಪಾರಂಪರಿಕ ರಥ ಬೀದಿ ನಿರ್ಮಾಣ, ವಸತಿ ಗೃಹಗಳ ನವೀಕರಣ, ಶೌಚಾಲಯ, ಸ್ನಾನಗೃಹಗಳ ನಿರ್ಮಾಣ, ತ್ಯಾಜ್ಯವಿಲೇವಾರಿ ಘಟಕ, ನೀರಿನ ಶುದ್ದೀಕರಣ ಘಟಕ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾತಿ ನೀಡಿದ್ದಾರೆ.
22. ಕನ್ನಡಿಗರ ಬಹುದಿನಗಳ ಕನಸು ತಿರುಪತಿಯಲ್ಲಿ ವಸತಿಗೃಹಗಳಾದ ಐಹೊಳೆ, ಹಂಪಿ ಬ್ಲಾಕ್‌ಗಳ ಉದ್ಘಾಟನೆ
23. ರೂ.500 ಕೋಟಿ ಮೊತ್ತದ ದೇವಸ್ಥಾನಗಳ ಆಸ್ತಿಯನ್ನು ಸಂರಕ್ಷಿಸಿ ದೇವಸ್ಥಾನಗಳ ಸುಪರ್ದಿಗೆ ವಹಿಸಲಾಗಿದೆ.
24. ಬೆಂಗಳೂರಿನಲ್ಲಿ ಧಾರ್ಮಿಕ ಸೌಧ ನಿರ್ಮಾಣ, ಇ - ಪ್ರಸಾದ ಯೋಜನೆ ಜಾರಿ
25. 25551 ದೇವಸ್ಥಾನಗಳಲ್ಲಿರುವ ಅರ್ಚಕರುಗಳಿಗೆ ನೀಡಲಾಗುತ್ತಿದ್ದ ತಸ್ತಿಕ್ ಹಣ ರೂ.60,000 ಗಳಿಂದ ರೂ.72,000 ಕ್ಕೆ ಹೆಚ್ಚಳ
ಸಂಧ್ಯಾ ರಮೇಶ್ ಅವರೇ, ಸೌಮ್ಯ ರೆಡ್ಡಿ ಮೇಡಂ ಅವರ ತಂದೆಯವರು ಯಾರು? ಅವರ ಕಾರ್ಯವೈಖರಿ ಏನು ? ಎಂದು ತಿಳಿದುಕೊಳ್ಳಲು ಸಾವಿರಾರು ಉಪದೇಶ ಕೇಳಿದರೂ ನಿಮಗೆ ಸಾಲದು, ಅವರ ಬಗ್ಗೆ ಮಾತನಾಡಲು ಒಂದಷ್ಟು ಯೋಗ್ಯತೆಯಂತೂ ಹೊಂದಿರಲೇಬೇಕು ಎಂದು ನಾನಂತೂ ಭಾವಿಸಿದ್ದೇನೆ. ಕಳೆದ ಎಂಟು ವಿಧಾನಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಗೆಲ್ಲುತ್ತಿರುವ ಸೋಲಿಲ್ಲದ ಸರದಾರ ಅಂದರೆ ಅದು ಸನ್ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿ ಅವರು, ಸೌಮ್ಯ ರೆಡ್ಡಿ ಮೇಡಂ ರವರ ತಂದೆಯವರು.
ಸೌಮ್ಯ ರೆಡ್ಡಿ ಮೇಡಂ ಅವರ ತಂದೆ ಹಾಗೂ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ತಮ್ಮ ಹಾಗೂ ತಮ್ಮ ಪಕ್ಷದವರ ರೀತಿ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಬರೀ ಮಾತಿನಲ್ಲಿ ಕೆಲಸ ಮಾಡಿ ತೋರಿಸುವ ಸಾಮಾನ್ಯರಲ್ಲ, ಅವರ ಕೆಲಸವೇ ಮಾತನಾಡುವಂತಿರುತ್ತದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಮಹಿಳಾ ಸಬಲೀಕರಣದ ಗ್ಯಾರೆಂಟಿಯಾದ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದು, 500 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಶಕ್ತಿ ಯೋಜನೆ ಯಶಸ್ವಿನ ರೂವಾರಿ ಆದವರು ಇದೇ ಸಾರಿಗೆ ಸಚಿವರು. ಸಂಧ್ಯಾ ರಮೇಶ್ ಅವರೇ,
ನೀವು ಸೇರಿ ನಿಮ್ಮ ಬಿ.ಜೆ.ಪಿ ಪಕ್ಷದ ಮಹಿಳಾ ಪದಾಧಿಕಾರಿಗಳು ಮತ್ತು ತಮ್ಮ ಪಕ್ಷಕ್ಕೆ ವೋಟು ಹಾಕುವ ಮಹಿಳೆಯರು ಸಹ ಶಕ್ತಿ ಯೋಜನೆಯ ಫಲಾನುಭವಿಗಳೇ ಎಂಬುದನ್ನು ಆಗಾಗ ನೆನಪು ಮಾಡಿಕೊಳ್ಳಿ.
ಪಾಪ ಬಿಡಿ.. ತಮ್ಮನ್ನು ದೂಷಿಸಿ ಪ್ರಯೋಜನವಿಲ್ಲ, ತಮ್ಮ ಪಕ್ಷದಲ್ಲಿ ತಮಗೆ ದೊರಕಿರುವ ತರಬೇತಿ , ಉಪದೇಶ ಆ ರೀತಿ ಇದೆ.
ತಮ್ಮ ಜಿಲ್ಲೆಗೆ ಇತರರ ಉಪದೇಶ ಅನಗತ್ಯವೆಂದಲ್ಲಿ, ತಮ್ಮ ಪಕ್ಷದವರ ಯಾವ ಘನಂದಾರಿ ಕೆಲಸಗಳು ತಮಗೆ ಅಲ್ಲಿ ಅಧಿಕಾರ ತಂದುಕೊಟ್ಟಿದೆ ಎಂದು ದಯವಿಟ್ಟು ಹೇಳುತ್ತಿರಾ?
1. ಸಾವಿನ ಮೇಲೆ ರಾಜಕೀಯ ಮಾಡಿದರೆ ಅಷ್ಟೇ ತಮ್ಮಪಕ್ಷ ಅಧಿಕಾರಕ್ಕೆ ಬರುವುದು.
2. ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ರಾಜಕೀಯ ಮಾಡಿದರಷ್ಟೇ ತಮಗೆ ಅಧಿಕಾರ ಸಿಗುವುದು
3. ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿದರಷ್ಟೇ ತಮ್ಮ ಪಕ್ಷದ ರಾಜಕೀಯ ಬೇಳೆ ಬೇಯವುದು
4. ಒಂದರ ನಂತರ ಒಂದು ಕೊಲೆ ,ತಂದೆ ತಾಯಿಯನ್ನು, ಹೆಂಡತಿ ಮಕ್ಕಳನ್ನು ಅನಾಥರನ್ನಾಗಿ ಮಾಡಿಸಿ ರಾಜಕೀಯ ಮಾಡುವುದು ತಮ್ಮ ಪಕ್ಷಕ್ಕೆ ಕರಗತವಾಗಿರುವ ಕಲೆ.
ಈ ಪಟ್ಟಿ ಹೀಗೆಯೇ ಮುಂದುವರೆಯುತ್ತಾ ಹೋದಷ್ಷು ತಮ್ಮ ಪಕ್ಷ ಅಧಿಕಾರ ಮಾಡುತ್ತಾ ಹೋಗುತ್ತದೆ. ತಮ್ಮ ಮನಸ್ಥಿತಿಗೆ ಹಿಡಿದ ಕೈಗನ್ನಡಿ ತಮ್ಮ ಹೇಳಿಕೆ ಎಂಬುದು ಜನಸಾಮಾನ್ಯರಿಗೆ ಈಗಾಗಲೇ ಅರಿವಿಗೆ ಬಂದಿದೆ.
ದೊಡ್ಡ ಮನುಷ್ಯರ ಮೇಲೆ ಹೇಳಿಕೆಗಳನ್ನು ನೀಡಿ ತಾವು ದೊಡ್ಡವರಾಗಿ ಬಿಡಬಹುದು ಎಂಬ ಭ್ರಮೆಯಿಂದ ಹೊರಬನ್ನಿ, ಈ ಹೇಳಿಕೆಯಿಂದ ಇನ್ನೂ ಪಾತಾಳಕ್ಕೆ ಇಳಿದಿದ್ದೀರಾ ನೀವು ಎಂದು ಗೊತ್ತಾಗಲು ತುಂಬಾ ಸಮಯ ಬೇಕಾಗುವುದಿಲ್ಲ.
0 ಕಾಮೆಂಟ್‌ಗಳು