ಉಡುಪಿ ಜು 30 ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ , ಭಜನಾ ಆರಾಧ್ಯ ದೇವ ರಾದ ವಿಠೋಬಾ ರುಖುಮಾಯಿ ಶ್ರೀ ದೇವರ ಸನ್ನಿಧಿಯಲ್ಲಿ ಈ ಬಾರಿಯ 125 ವರ್ಷದ ಭಜನಾ ಸಪ್ತಾಹಕ್ಕೆ ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ಮಹಾ ಮಂಗಳಾರತಿ ಬೆಳಗಿಸಿ ಚಾಲನೆ ನೀಡಿದರು , ಜು 30 ಇಂದಿನಿಂದ 7 ದಿನಗಳ ಕಾಲ ಊರ ಪರ ಊರ ಭಜನಾ ತಂಡಗಳಿಂದ ಅಹೋ ರಾತ್ರಿ ನಿರಂತರ ಭಜನಾ ಕಾರ್ಯಕ್ರಮ ವೈಭವದಿಂದ ನೆಡೆಯಲಿದೆ.
ಧಾರ್ಮಿಕ ಪೂಜಾ ವಿಧಾನಗಳನ್ನು ಹಾಗೂ ಸಮೂಹಿಕ ಪ್ರಾರ್ಥನೆ, ಮಹಾ ಪೂಜೆ ವಿನಾಯಕ್ ಭಟ್ ನೆರವೇರಿಸಿದರು, ಅರ್ಚಕರಾದ ದಯಾಘಾನ್ ಭಟ್, ದೀಪಕ್ ಭಟ್, ಗಿರೀಶ್ ಭಟ್ ಸಹಕರಿಸಿ ದರು, ಶ್ರೀ ದೇವರಿಗೆ ವಿಶೇಷ ಅಲಂಕಾರ, ನೂರಾರು ಭಕ್ತರೂ ಭಕ್ತಿಯಿಂದ ಜೈ ವಿಠಲ್ ಹರಿ ವಿಠಲ್ ನಾಮ ಸ್ಮರಣೆ ಹಾಡುತ್ತ ಭಜನಾ ಸೇವೆ ಯಲ್ಲಿ ಪಾಲ್ಗೊಂಡರು .
ಆಡಳಿತ ಮಂಡಳಿಯ ಪಿ ವಿ ಶೆಣೈ , ವಿಶ್ವನಾಥ್ ಭಟ್, ವಸಂತ್ ಕಿಣೆ, ಶಾಂತಾರಾಮ್ ಪೈ , ಗಣೇಶ್ ಕಿಣಿ, ಉಮೇಶ್ ಪೈ , ಕೈಲಾಸನಾಥ ಶೆಣೈ , ನಾರಾಯಣ ಪ್ರಭು, ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಪ್ರಕಾಶ್ ಭಕ್ತ, ಭಾಸ್ಕರ ಶೆಣೈ, ಹಾಗೂ ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಮಂಡಳಿ ಸದಸ್ಯರು , ಭಗಿನಿ ವೃಂದ ಸದಸ್ಯರು, ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು, ಭಜನಾ ಮಹೋತ್ಸವ ಸಮಿತಿಯ ಸದಸ್ಯರು , ಊರ ಪರಊರ ನೂರಾರು ಭಜನಾ ಮಂಡಳಿಯ ಸದಸ್ಯರು , ಸಾವಿರಾರು ಸಮಾಜ ಬಾಂದವರು ಉಪಸ್ಥರಿದ್ದರು


0 ಕಾಮೆಂಟ್‌ಗಳು