Header Ads Widget

'ಮಾದಕ ವ್ಯಸನ ಸಮಾಜಕ್ಕೆ ಮಾರಕ': ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ರತ್ನ

ಸಮಾಜದಲ್ಲಿ ಸುಲಭವಾಗಿ ದೊರೆಯುವ ಬೇರೆ ಬೇರೆ ಮಾದಕ ವಸ್ತು ನಮ್ಮ ಯುವ ಪೀಳಿಗೆ ಮತ್ತು ಸಮಾಜಕ್ಕೆ ಮಾರಕವಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣ ಕ್ಕೆ ಇದೊಂದು ದುರಂತ ವಾಗಿದೆ. ಹಾಗಾಗಿ ನಮ್ಮ ಯುವ ಶಕ್ತಿಗೆ  ಇಂತಹ ಅರಿವು ಕಾರ್ಯಕ್ರಮ ಅತ್ಯಗತ್ಯ ವಾಗಿರುತ್ತವೆ  ಎಂದು ಜಿಲ್ಲಾ  ಅಂಗವಿಕಲ  ಕಲ್ಯಾಣಧಿಕಾರಿ  ರತ್ನ ತಿಳಿಸಿದರು.


ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ, ಶ್ರೀ ರಾಜೀವ್ ಗಾಂಧಿ ಎಜುಕೇಷನ್ & ವೆಲ್ಫೇರ್ ಟ್ರಸ್ಟ್- ಸ್ಪಂದನ ವ್ಯಸನ ಮುಕ್ತಿ ಕೇಂದ್ರ ಉಡುಪಿ ಹಾಗೂ  ಪೂರ್ಣ ಪ್ರಜ್ಞಾ ಕಾಲೇಜು ಉಡುಪಿ ಇವರ ಜಂಟಿ ಆಶ್ರಯ ದಲ್ಲಿ ಪೂರ್ಣ ಪ್ರಜ್ಞಾ  ಕಾಲೇಜು ನ  ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆದ ನಶಾ ಮುಕ್ತ ಭಾರತ ಅಭಿಯಾನ ಅರಿವು ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.


ಸಮಾರಂಭ ದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ  ಡಾ| ರಾಮು ಎಲ್. ರವರು ವಹಿಸಿ ದ್ದರು. ಸ್ಪಂದನ ವ್ಯಸನ ಮುಕ್ತಿ ಕೇಂದ್ರದ ಸಂಯೋಜಕಿ  ನಿಶಾ ಶೆಟ್ಟಿ  ದಿಕ್ಸೂಚಿ ಭಾಷಣ ಮಾಡಿದರು. 


ನರೇಂದ್ರ ಕ್ರಷ್ಣ ರವರು ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದರು. ಏನ್. ಜಿ. ಓ ಪ್ರೇಮಾನಂದ ಕಲ್ಮಡಿ ಮಾಹಿತಿ ನೀಡಿದರು. ಉಡುಪಿ ನಗರ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್  ನಾರಾಯಣ್ ಬಿ. & ಸುಭಾಷ್ ಕಾಮತ್ ರವರು ಮುಖ್ಯ ಅಥಿತಿ ಯಾಗಿ ಉಪಸ್ಥಿತರಿದ್ದರು.


ಕಾಲೇಜು ಉಪನ್ಯಾಸಕಿ ಶ್ರೀರಕ್ಷಾ ಸ್ವಾಗತಿಸಿದರು.ಉಪನ್ಯಾಸಕರಾದ ಮುರಳಿಧರ್ ನಿರೂಪಿಸಿ, ವಂದಿಸಿ ದರು. ಸ್ಪಂದನ ಕೇಂದ್ರ ದ ಉತ್ತಮ್ ಶೆಟ್ಟಿ ಹಾಗೂ ಇತರ ಸಿಬ್ಬಂದಿ ಮತ್ತು ಕಾಲೇಜಿನ  ಉಪ ನ್ಯಾಸಕ ವೃಂದ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು