ರಮಿತಾ ಶೈಲೇಂದ್ರ ಅವರು ಮಾತನಾಡಿ ಪ್ರಕೃತಿ ನಮಗೆಲ್ಲ ಕೊಟ್ಟಿದೆ ನಾವು ಅದರ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ. ವನಮಹೋತ್ಸವದ ಉದ್ದೇಶ,ನಮ್ಮ ಹಿರಿಯರು ಪ್ರಕೃತಿ ಪೂಜಕರಾಗಿದ್ದರು, ಪ್ರಕೃತಿ ಪೂಜೆಯ ವೈಜ್ಞಾನಿಕ ಹಿನ್ನಲೆ , ಸಮಾಜ ಕಟ್ಟುವಲ್ಲಿ ಗ್ರಾಮ ವಿಕಾಸದ ಪಾತ್ರದ ಕುರಿತು ಮಾತನಾಡಿದರು. ಜ್ಯೋತಿ ಕೆ.ಸಿ ವಲಯ ಅರಣ್ಯಾಧಿಕಾರಿಗಳು ಮಾತನಾಡಿ ಅರಣ್ಯ ಸಂರಕ್ಷಣೆಯಲ್ಲಿ ನಮ್ಮ ಜವಾಬ್ದಾರಿ, ಮುಂದಿನ ಪೀಳಿಗೆಗೆ ಪ್ರಕೃತಿ ಪಾಠದ ಅವಶ್ಯಕತೆ ಕುರಿತು ಮಾತನಾಡಿದರು.
ಗ್ರಾಮ ವಿಕಾಸ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಗ್ರಾಮ ವಿಕಾಸ ಸಮಿತಿಯ ಕಾರ್ಯ ಉದ್ದೇಶಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರವೀಣ್ ಪಟೇಲ್, ಮಾನ್ಯ ಸಂಘಚಾಲಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಿದ್ದಾಪುರ ತಾಲೂಕು, ಕೃಷ್ಣ ಪೂಜಾರಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸಿದ್ದಾಪುರ ,ಸಂಜೀವ ಉಪ ವಲಯಅರಣ್ಯಾಧಿಕಾರಿಗಳು, ಶಂಕರನಾರಾಯಣ ವಲಯ, ಗಣೇಶ ಪ್ರಾಂಶುಪಾಲರು, ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ, ಸುಧಾಕರ ಆಜ್ರಿ, ಗ್ರಾಮ ವಿಕಾಸ ಸಮಿತಿ ಜಿಲ್ಲಾ ಸಹಸಂಯೋಜಕರು, ಶ್ರೀಕಾಂತ್ ನಾಯಕ್, ತಾಲೂಕು ಸಂಯೋಜಕರು ಗ್ರಾಮ ವಿಕಾಸ ಸಮಿತಿ ಸಿದ್ದಾಪುರ ತಾಲೂಕು, ಎಸ್ ಪಾಂಡುರಂಗ ಪೈ ಸಂಯೋಜಕರು ಗ್ರಾಮ ವಿಕಾಸ ಸಮಿತಿ ಸಿದ್ದಾಪುರ , ಭೋಜರಾಜ್ ಶೆಟ್ಟಿ, ಅಧ್ಯಕ್ಷರು ಭಾರತೀಯ ಕಿಸಾನ್ ಸಂಘ ಗ್ರಾಮ ಸಮಿತಿ ಸಿದ್ದಾಪುರ.
ಭೋಜ ಶೆಟ್ಟಿ ಕಡ್ರಿ, ಅಧ್ಯಕ್ಷರು ಇಂದಿರಾಗಾಂಧಿ ವಸತಿ ಶಾಲೆ ಹೋರಾಟ ಸಮಿತಿ,ಸಿದ್ದಾಪುರ, N.G.ಭಟ್ ಅಧ್ಯಕ್ಷರು ರೋಟರಿ ಕ್ಲಬ್, ಹೊಸಂಗಡಿ ಸಿದ್ದಾಪುರ, ಟಿ.ಜಿ.ಪಾಂಡುರಂಗ ಪೈ ವಿದ್ಯಾಭಾರತಿಯ ಜಿಲ್ಲಾಧ್ಯಕ್ಷರು, ಚಿದಾನಂದ ಶೆಟ್ಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ಪರ್ಯಾವರಣ ತಾಲೂಕು ಪ್ರಮುಖ ಶ್ರೀಕಾಂತ್ ಶೆಣೈ ಆರ್ಗೋಡು, ರಾಜೇಂದ್ರ ಬೆಚ್ಚಳ್ಳಿ ಅಧ್ಯಕ್ಷರು ಭೋಜು ಪೂಜಾರಿ ಚಾರಿಟಬಲ್ ಟ್ರಸ್ಟ್ ಚಾರಿಟಬಲ್ ಟ್ರಸ್ಟ್ ಬೆಚ್ಚಳ್ಳಿ , ಗ್ರಾಮ ವಿಕಾಸ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು,ಅರಣ್ಯ ಸಿಬ್ಬಂದಿಗಳು,ವಸತಿ ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿ,ವಿದ್ಯಾರ್ಥಿನಿಯರು,ಸಿಬಂದಿ ವರ್ಗ ಉಪಸ್ಥಿತರಿದ್ದರು.
ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ ಇವರು ಸ್ವಾಗತಿಸಿದರು. ಅಧ್ಯಾಪಕರಾದ ಪ್ರತಾಪಚಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
0 ಕಾಮೆಂಟ್‌ಗಳು