ಓಂ ಶಾಂತಿ ತೀರ್ಥ ಸಂಸ್ಥೆಯು ಶ್ರೀ ವೆಂಕಟಕೃಷ್ಣ ಬೃಂದಾವನದ ಸಹಯೋಗದೊಂದಿಗೆ ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥರ ಹಾಗೂ ಶ್ರೀ ಸುಶ್ರೇೇಂದ್ರ ತೀರ್ಥರ ಆಶೀರ್ವಾದಗಳೊಂದಿಗೆ ಮೆಲ್ಬೋರ್ನ್ ಮಹಾನಗರದಲ್ಲಿ ಹಿಂದೂ ಅಂತ್ಯಕ್ರಿಯೆಗಳಿಗೆ ವ್ಯವಸ್ಥೆಯನ್ನು 14-8-2025 ರಂದು ಪ್ರಾರಂಭಿಸಿದೆ.
ದಶಕಗಳಿಂದ ಬೇಡಿಕೆಯಿರುವ ಈ ವ್ಯವಸ್ಥೆಯನ್ನು ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನಚಾರ್ಯ ರವರು ಉದ್ಘಾಟಿಯಾದರು.
OST ಯ ಕಾರ್ಯದರ್ಶಿ ರಾಧಾಕೃಷ್ಣರವರು ಸಂಸ್ಥೆಯ ಸೌಲಭ್ಯಗಳನ್ನು ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು.
ಹಾಗೆ ಈ ಕಾರ್ಯದಲ್ಲಿ ಮೆಲ್ಬೋರ್ನ್ ನಗರದ ಶ್ರೀ ವೆಂಕಟ ಕೃಷ್ಣ ಬೃಂದಾವನ ನೀಡಿದ ಸಹಕಾರವನ್ನು ಶ್ಲಾಘಿಸಿದರು.
ಸರಳವಾದ ಸಮಾರಂಭವನ್ನು SvKB ಯ ರಮೇಶ ರಾವ್ ಸ್ವಾಗತಿಸಿದರು ಹಾಗೂ ಅವಿನಾಶ್ ಅಧ್ಯಾಪಕ್ ರವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ SVKB ಯ ಕಾರ್ಯಕರ್ತರು ಹಾಗು OSTಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು