Header Ads Widget

ಯುಪಿಎಂಸಿ- ಎನ್. ಎಸ್. ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಇದರ 2025-26ರ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಮಹತ್ವದ ಕುರಿತು ಮಾಹಿತಿ ಕಾರ್ಯಕ್ರಮ ಆಗಸ್ಟ್ 21ರಂದು ಜರುಗಿತು.

ಸಾಹಿತಿ, ಉಪನ್ಯಾಸಕಿ ಶ್ರೀಮತಿ ವಾಸಂತಿ ಅಂಬಲಪಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಗೈದು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಪರೋಪಕಾರ ತಾಳ್ಮೆ, ಸಂವೇದನಾಶೀಲ ಗುಣವಿರಬೇಕು. ಧನಾತ್ಮಕ ಚಿಂತನೆ, ಆತ್ಮ ವಿಶ್ವಾಸಯುಕ್ತ ನಡವಳಿಕೆ ಯಶಸ್ಸು ಸಾಧಿಸಲು ಪೂರಕ. ಶಿಸ್ತು ಸಂಯಮ ಭಾವನಾತ್ಮಕ ಸಂಬಂಧಗಳ ಅರಿವು ಹಾಗೂ ಹೊಂದಾಣಿಕೆ ಮನೋಭಾವಗಳ ಕುರಿತಂತೆ ರಾಷ್ಟ್ರೀಯ ಸೇವಾ ಯೋಜನೆ ಕಲಿಸಿ ಕೊಡಲಿದೆ ಎಂದರು. 

ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಆಶಾ ಕುಮಾರಿಯವರು ಅಧ್ಯಕ್ಷತೆ ವಹಿಸಿದ್ದರು.

ನೂತನ ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕರುಗಳಾಗಿ ಆಯ್ಕೆಯಾದ ರಿಶಾನ್ ಲಾರೆನ್ಸ್ ಡಿಸೋಜ, ಐಶ್ವರ್ಯ ದ್ವಿತೀಯ ಬಿ. ಕಾಂ, ಸಾಹಿತ್ಯ ನಾಯಕ್, ಕಾವ್ಯ ದ್ವಿತೀಯ ಬಿಬಿಎ, ಐಫಾ ಪ್ರಥಮ ಬಿ. ಕಾಂ, ಶ್ರೇಯಾಂಕ್ ಪಡಿಯಾರ್ ಪ್ರಥಮ ಬಿಬಿಎ, ಸಾನಿಯಾ ಬಾನು ಪ್ರಥಮ ಬಿಸಿಎ ಇವರುಗಳಿಗೆ ಮುಖ್ಯ ಅಭ್ಯಾಗತರು ಪುಷ್ಪನೀಡಿ ಅಭಿನಂದಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಸಹ ಸಂಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಧನ್ಯವಾದಗೈದರು. ಕನ್ನಡ ಉಪನ್ಯಾಸಕ ಶ್ರೀ ಶಶಿಕಾಂತ್ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು