Header Ads Widget

ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ನವತಿ ಜನ್ಮ ​​ವರ್ಧಂತಿ ಉತ್ಸವ ಕಾರ್ಯಕ್ರಮಗಳ ಉದ್ಘಾಟನೆ

ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಡಾ|| ಬನ್ನಂಜೆ ಗೋವಿಂದ ಪಂಡಿತಾಚಾ ರ್ಯರ ನವತಿ ಜನ್ಮವರ್ಧಂತ್ಯುತ್ಸವ ಸಮಿತಿ, ಉಡುಪಿ ಇವರ ಆಶ್ರಯದಲ್ಲಿ ಈಶಾವಾಸ್ಯ ಪ್ರತಿಷ್ಠಾನ (ರಿ.) ಅಂಬಲಪಾಡಿ, ಉಡುಪಿ​ ಇದರ ಸಹಯೋಗದಲ್ಲಿವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾ ಚಾರ್ಯರ ನವತಿ ಜನ್ಮ ​ವರ್ಧಂತಿ  ಉತ್ಸವ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮ​ ಶ್ರೀಕೃಷ್ಣ ಮಠದ ರಾಜಾಂಗಣ​ದಲ್ಲಿ   9/8/2025 ಶನಿವಾರ ಸಂಜೆ 5.30ಕ್ಕೆ​ ನಡೆಯಲಿದೆ 

ಉದ್ಘಾಟನೆ​ : ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠ,ಕೃತಿ ಬಿಡುಗಡೆ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಕಿರಿಯ ಪಟ್ಟಿ, ಶ್ರೀ ಪುತ್ತಿಗೆ ಮಠ​ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆ​ಯನ್ನು  ಶ್ರೀ ಕೆ ರಘುಪತಿ ಭಟ್, ಮಾಜಿ ಶಾಸಕರು ಅಧ್ಯಕ್ಷರು ಬನ್ನಂಜೆ ನವತಿ ಜನ್ಮ ವರ್ಧಾತಿ ಸಮಿತಿ​ ಇವರುಗಳು  ವಹಿಸಿಕೊಳ್ಳಲಿದ್ದಾರೆ. 

 
ಮುಖ್ಯ ​ಅತಿಥಿಗಳಾಗಿ : ಶ್ರೀ ಕೋಟ ಶ್ರೀನಿವಾಸ ಪೂಚಾರಿ, ಮಾನ್ಯ ಸಂಸದರು, ಉಡುಪಿ ಚಿಕ್ಕಮಗಳೂರು ಕ್ಷೇತ್ರ​, ಶ್ರೀ ಯಶ್ ಪಾಲ್ ಎ. ಸುವರ್ಣ, ಮಾನ್ಯ ಶಾಸಕರು, ಉಡುಪಿ​ ಆಗಮಿಸಲಿದ್ದಾರೆ  ಆಶಯ ಭಾಷಣ​ವನ್ನು  ಶತಾವಧಾನಿ ಡಾ॥ ಉಡುಪಿ ರಾಮನಾಥ ಆಚಾರ್ಯ​,  ಪ್ರಸ್ತಾವನೆ​ಯನ್ನು  ಬಾಲಾಜಿ ರಾಘವೇಂದ್ರ ಆಚಾರ್ಯ ಉದ್ಯಮಿ ಹಾಗೂ ವಿಶ್ವಸ್ತರು ಈಶಾವಾಸ್ಯ ಪ್ರತಿಷ್ಠಾನ (ರಿ.) ಉಡುಪಿ​ ಇವರುಗಳು ನಡೆಸಲಿದ್ದಾರೆ.  


ಗೌರವ ಉಪಸ್ಥಿತಿ​ : ಡಾ ಎ ರಾಘವೇಂದ್ರ ರಾವ್​, ಮುಖ್ಯಸ್ಥರು, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು​,:ಪ್ರೊ ಎಂ ಬಿ ಪುರಾಣಿಕ್ ಅಧ್ಯಕ್ಷರು, ಶಾರದಾ ವಿದ್ಯಾ ಸಂಸ್ಥೆಗಳು, ಮಂಗಳೂರು​, : ಡಾ ನಿ ಬೀ ವಿಜಯ ಬಲ್ಲಾಳ್, ಆಡಳಿತ ಧರ್ಮ​ ದರ್ಶಿಗಳು, ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ​, : ಶ್ರೀ ದಂಡತೀರ್ಥ ಸೀತಾರಾಮ ಭಟ್ ​ಧಾರ್ಮಿಕ ಮುಖಂಡರು, ಕೆ ರಮೇಶ್ ರಾವ್ ಬೀಡು, ಇಂಜಿನಿಯರ್ ಉಡುಪಿ​, ವಿದ್ವಾನ್ ಪಾವಂಜೆ ವಾಸುದೇವ ಭಟ್, ಜ್ಯೋತಿಷಿಗಳು


ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ :​ ಡಾ ಬನ್ನಂಜೆ ಆಚಾರ್ಯರ 'ಗಾಯತ್ರಿ ಚಿಂತನ' ಉಪನ್ಯಾಸ ಆಧಾರಿತ 'ವಿಶ್ವಾಮಿತ್ರ ಗಾಯತ್ರಿ' ನೃತ್ಯ ರೂಪಕ, ಶ್ರೀ ಸಂದೇಶ್ ಭಾರ್ಗವ್ ಮತ್ತು ತಂಡ ಕಲಾ ಸಂದೇಶ ಪ್ರತಿಷ್ಠಾನ ಮೈಸೂರು ಇವರಿಂದ​ ನಡೆ ಯಲಿದೆ. 
ಕಾರ್ಯಕರ್ಮಗಳು : ಬನ್ನಂಜೆ ಗೋವಿಂದಾಚಾರ್ಯರ ನವತಿ ​ವರ್ಧಂತಿ  ಉತ್ಸವ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮವು ವಿಶ್ವಾವಸು ಸಂವತ್ಸರದ ಆಷಾಢ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ಯಿಂದ ಕೃಷ್ಣ ಪಕ್ಷದ ತದಿಗೆ ವರೆಗೆ (09-08-2025ರಿಂದ 12-08-2025 ಶನಿವಾರ ಮಂಗಳವಾರ) ಅಂಬಲಪಾಡಿಯಲ್ಲಿರುವ ಡಾ|| ಬನ್ನಂಜೆ ಯವರ ಸ್ವಗೃಹ 'ಈಶಾವಾಸ್ಯಮ್'ನಲ್ಲಿ ನೆರವೇರಲಿದೆ.


09-08-2025ಡಾ ಬನ್ನಂಜೆಯವರ ಜನ್ಮದಿನ ಆಷಾಢ ಶುದ್ದ ಪೂರ್ಣಿಮೆ (ಹಯಗ್ರೀವ ಜಯಂತಿ) ಬೆಳಿಗ್ಗೆ ಋತ್ವಿಜರಿಂದ ಶ್ರೀ ನರಸಿಂಹ ಮಂತ್ರ ಹೋಮ, ಬಳಿಕ ಡಾ. ಉಡುಪಿ ರಾಮನಾಥ ಆಚಾರ್ಯರ ಮಾರ್ಗದರ್ಶನದಲ್ಲಿ ಯಜುರುಪಾಕರ್ಮ- ತಪ್ತ ಮುದ್ರಾ ಧಾರಣೆ, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ.​ ಸಂಜೆ 5.00: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ​. 


ದಿನಾಂಕ​:10-08-2025​; ಬೆಳಗ್ಗೆ 10.00: ಋತ್ವಿಜರಿಂದ ತತ್ವಾಭಿಮಾನಿ ದೇವತಾ ಮಂತ್ರಗಳಿಂದ ವಿಶೇಷ ಹೋಮ - ರಾಯರ ಆರಾಧನಾ ಮಹಾಪೂಜೆ 12.30ಕ್ಕೆ ತೀರ್ಥ ಪ್ರಸಾದ​, ಸಂಜೆ ಗಂಟೆ 4.00ಕ್ಕೆ ತತ್ವ ಪ್ರದೀಪ ಧ್ಯಾನ ಮಂದಿರ ಉದ್ಘಾಟನೆ - ಡಾ| ನಿ.ಬೀ ವಿಜಯ ಬಲ್ಲಾಳರಿಂದ ಸಂಜೆ 5.00ಕ್ಕೆ ಧಾರ್ಮಿಕ ಚಿಂತನೆ : ವಿದ್ವಾನ್ ಕೃಷ್ಣರಾಜ ಭಟ್ ಕುತ್ಪಾಡಿ ಇವರಿಂದ ಸಂಜೆ 6.00ರಿಂದ ಭಕ್ತಿ ಸಂಗೀತ - ಜ್ಞಾನ ದೇಗುಲ ಪ್ರಶಸ್ತಿ ಪುರಸ್ಕೃತ ಶ್ರೀಮತಿ ವಾರಿಜಾಕ್ಷಿ ಆರ್ ಭಟ್, ಅಂಬಲಪಾಡಿ ಮತ್ತು ಶಿಷ್ಯರಿಂದ, ಸಂಜೆ 7.15 ರಾತ್ರಿ ಪೂಜೆ - ಫಲಾಹಾರ ಪ್ರಸಾದ.


ದಿನಾಂಕ ​:11-08-2025 ಸೋಮವಾರ​; ಬೆಳಿಗ್ಗೆಯಿಂದ ರಾಯರ ಆರಾಧನೋತ್ಸವದ ಧಾರ್ಮಿಕ ವಿಧಿಗಳು ಮತ್ತು 12.30 ಕ್ಕೆ ತೀರ್ಥ ಪ್ರಸಾದ ಸಂಜೆ 5.00ಕ್ಕೆ ಧಾರ್ಮಿಕ ಚಿಂತನೆ - ವಿದ್ವಾನ್ ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ ಬೆಂಗಳೂರು 6.00 ರಿಂದ ಭಕ್ತಿ ಸಂಗೀತ - ಶ್ರೀನಿವಾಸ ಪೆಜತ್ತಾಯ ಮತ್ತು ಬಳಗ ಉಡುಪಿ ಇವರಿಂದ 7.15 ರಾತ್ರಿ ಪೂಜೆ - ಫಲಾಹಾರ ಪ್ರಸಾದ.


ದಿನಾಂಕ​: 2-08-2025 ​:ಬೆಳಗ್ಗೆಯಿಂದ ರಾಯರ ಆರಾಧನೋತ್ಸವದ ಧಾರ್ಮಿಕ ವಿಧಿಗಳು ಮತ್ತು 12.30 ಕ್ಕೆ ತೀರ್ಥ ಪ್ರಸಾದ ಸಂಜೆ 5.30 ರಿಂದ ಭಕ್ತಿ ಸಂಗೀತ -  ಉಷಾ ಹೆಬ್ಬಾರ್ ಮತ್ತು ಬಳಗ, ಮಣಿಪಾಲ ಇವರಿಂದ 7.15 ರಾತ್ರಿ ಪೂಜೆ​ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು