BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

​ ಒಳಮೀಸಲಾತಿ ವರದಿ ಅವೈಜ್ಞಾನಿಕ: ಜಯನ್ ಮಲ್ಪೆ

ಉಡುಪಿ: ನ್ಯಾಯಮೂರ್ತಿ ನಾಗಮೋಹನ್ ಆಯೋಗವು ನೀಡಿರುವ ರಾಜ್ಯದ ದಲಿತರ ಜನಸಂಖ್ಯೆಯ ಜೊತೆಗೆ ಶೈಕ್ಷಣಿಕ,ಔದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವ ಸಮೀಕ್ಷ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ತಕ್ಷಣಕ್ಕೆ ಅಂಗೀಕರಿಸಬಾರದೆ0ದು ಸರಕಾರಕ್ಕೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.



ಪರಿಶಿಷ್ಟಜಾತಿಯ 101ಉಪಜಾತಿಗಳನ್ನು  ಮೀಸಲಾತಿಯಲ್ಲಿ ಎ,ಬಿ,ಸಿ,ಡಿ,ಇ, ಗುಂಪುಗಳನ್ನಾಗಿ ವರ್ಗೀ ಕರಿಸಿರುವ  ಆಯೋಗವು ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟಿ ಮೀಸಲಾತಿ ಯನ್ನೇ ನಿರ್ನಾಮ ಮಾಡಲು ಹೊರಟಿದಂತ್ತಿದೆ ಎಂದು ಆರೋಪಿಸಿದ್ದಾರೆ.


ರಾಷ್ಟçಪತಿಯಿಂದ ಅಗೀಕೃತಗೊಂಡ ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕವನ್ನು ಉಪ ಜಾತಿ ಗಳಲ್ಲ ಅದು ಒಂದು ಗುಂಪು ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾಗ ಮೋಹನ್ ಆಯೋಗವು ಸಮೀಕ್ಷೆಯ ಪ್ರಾರಂಭದಲ್ಲಿ ತಿಳಿಸಿಲ್ಲ. ಹಲವು ದಶಕಗಳಿಂದ ಕರಾವಳಿಯ ದಲಿತರು ಜಾತಿಪ್ರಮಾಣ ಪತ್ರ ಪಡೆಯುವಾಗ ಪರಿಶಿಷ್ಟಜಾತಿ ಮತ್ತು ಉಪಜಾತಿಯಲ್ಲಿ ಆದಿದ್ರಾವಿಡ ಎಂದು ನಮೂದಿಸಿದ್ದರು.ಈಗ ವಗೀಕರಣಮಾಡುವಾಗ ಪ್ರವರ್ಗ ಇ ಯಲ್ಲಿ ಸೇರಿಸಿ ಅನ್ಯಾಯವಾಡಿದೆ ಎಂದಿ ದ್ದಾರೆ.



ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆದ ದಲಿತರ ಈ ಒಳಮೀಸಲಾತಿ ಸಮೀಕ್ಷೆ ರಾಜಕಾರಣಿ ಗಳ,ಅಧಿಕಾರಿಗಳ ಸ್ವಾರ್ಥಕ್ಕೆ ಅಮಾಯಕ ದಲಿತರು ಎಡಗೈ ಬಲಗೈ ಎಂದು ಕದನ ಕಲಹಕ್ಕೆ ಇಳಿಯು ವಂತೆ ಮಾಡಿದೆ ಎಂದಿದ್ದಾರೆ.



ಪರಿಶಿಷ್ಠ ಜಾತಿಯ 101ಮೂಲ ಜಾತಿಗಳಲ್ಲಿ ಪ್ರವರ್ಗ ಎ,ಯಲ್ಲಿ 59 ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ 522099 ಕ್ಕೆ 4.97ಶೇಕಡ, ಪ್ರವರ್ಗ ಬಿ,ಯಲ್ಲಿ 18 ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ 36,69,246  ಇವರಿಗೆ ಶೇ.24.91.ನೀಡಿದರೆ,ಪ್ರವರ್ಗ ಸಿ,ಯಲ್ಲಿ 17ಉಪಜಾತಿಗಳನ್ನು ಸೇರಿಸಿ ಒಟ್ಟು ಜನಸಂಖ್ಯೆ30,08,633PÉÌ ಶೇಕಡ 28.63%ನೀಡಿದ್ದಾರೆ. 


ಪ್ರವರ್ಗ ಡಿ,ಯವರಲ್ಲಿ ೪ಉಪಜಾತಿಯ ಒಟ್ಟು ಜನಸಂಖ್ಯೆ 28,34,939 ಇದ್ದವರಿಗೆ ಶೇಕಡ 26.97% ಹಾಗೂ ಪ್ರವರ್ಗ ಇ,ಯಲ್ಲಿ ೩ಉಪಜಾತಿಯನ್ನು ಸೇರಿಸಿ ಒಟ್ಟು ಜನಸಂಕ್ಯೆ 4,74,954 ಇದ್ದವರಿಗೆ ಶೇಕಡ 4.52% ನೀಡಿ ಆಯೋಗವು ವರದಿ ನೀಡಿರುವುದು ಸಮಾಜಿಕ ಅಸಮಾನತೆಗೆ ದಾರಿಮಾಡಿದೆ ಎಂದಿದ್ದಾರೆ.


ಎಷ್ಟೆಲ್ಲ ಜನರ ಬೆವರು ನೆತ್ತರಿನ ಹೋರಾಟದೊಂದಿಗೆ, ಕನಸುಗಳೊಂದಿಗೆ ಕಟ್ಟಿದ ದಲಿತ ಶಕ್ತಿಯ ಮರ ಫಲ ಕೊಡುವ ಹೊತ್ತಿನಲ್ಲಿ ಮರ ಬೆಳೆಸಿದ ಸೋದರರೇ ಪಾಲು ಬೇಡಿ ಟೊಂಗೆಗಳಿಗೆ ಕೊಡಲಿ ಹಚ್ಚಿದರೆ ಹೇಗೆಂಬುದನ್ನು ಅರಿವು ಮೂಡಿಸಬೇಕಶಾದ ಸರಕಾರವೇ ದಲಿತರನ್ನು ಒಳಮೀಸಲಾತಿಯಲ್ಲಿ ಒಡೆಯುತ್ತಿರುವುದು ನೋವಿನ ಸಂಗತಿ ಎಂದು ಜಯನ್ ಮಲ್ಪೆ ಸರಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿ ರುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.     

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!