ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ, ಡಾ. ಬನ್ನಂಜೆ ಗೋವಿಂದಾಚಾರ್ಯ ನಾಡಿನ ಶ್ರೇಷ್ಠ ವಿದ್ವಾಂಸ ರಲ್ಲಿ ಅಗ್ರಗಣ್ಯರಾಗಿದ್ದಾರೆ. ಅವರು ನಮ್ಮೊಂದಿಗೆ ಬೌತಿಕವಾಗಿ ಇಲ್ಲದಿದ್ದರೂ ಅವರು ಸಾಹಿತ್ಯ ಲೋಕಕ್ಕೆ ನೀಡಿದ ಅಪಾರ ಕೊಡುಗೆಗಳಿಂದ ಮಾನಸಿಕವಾಗಿ ನಮ್ಮೊಂದಿಗಿದ್ದಾರೆ.
ಇಂದು ಅವರು ಬದುಕಿದ್ದರೆ ಅವರಿಗೆ 90 ವಷ೯ ವಾಗುತ್ತಿತ್ತು. (ಆ .3) ಅವರು ನಮ್ಮ ನಾಡಿಗೆ ನೀಡಿದ ಕೊಡುಗೆಗಳು ಅಪಾರವಾದದ್ದು, ಅವರ ಪುತ್ರಿ ಶ್ರೇಷ್ಠ ವಿದ್ವಾಂಸರು, ಪ್ರವಚನಕಾರರಾದ ವೀಣಾ ಬನ್ನಂಜೆ ಯವರು ನಾಡಿನ ಹಲವಾರು ಕಡೆಗಳಲ್ಲಿ ಬನ್ನಂಜೆ 90 ಕಾಯ೯ಕ್ರಮ ಆಯೋಜನೆ ಮಾಡು
ತ್ತಿದ್ದು ಆ .3 ರಂದು ಉಡುಪಿಯಲ್ಲಿ ಬನ್ನಂಜೆ ಗೋವಿಂದಾಚಾಯ೯ ಉಡುಪಿ ನಮನ ಕಾಯ೯ಕ್ರಮ ಆಯೋಜನಾ ಸಮಿತಿ ಮೂಲಕ ನಡೆಯಲಿದೆ.
ಬನ್ನಂಜೆ ಅವರ ಬಗ್ಗೆ ವಿವರಿಸಲು ಶಬ್ದಗಳೆ ಸಾಲದು ಅಂತಹ ವಿದ್ವಾಂಸರು ಅವರು. ಬಹುಶ: ಇಡೀ ದಕ್ಷಿಣ ಭಾರತದಲ್ಲಿ ಅವರಂತಹ ವಿದ್ವಾಂಸರು ಯಾರು ಇರಲು ಅಸಾಧ್ಯ;
ಜನನ: - ಅವರು 1936 ರಲ್ಲಿ ಪಡುಮನ್ನೂರು ನಾರಾಯಣ ಆಚಾರ್ಯ ದಂಪತಿಗಳ ಮಗನಾಗಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು.ಬಾಲ್ಯದಲ್ಲಿ ಪ್ರತಿಭಾವಂತ ವಿದ್ಯಾಥಿ೯ ಯಾಗಿದ್ದರು.
ಪತ್ರಕತ೯ ಜೀವನ: - ಅವರು ಆರಂಭದಲ್ಲಿ ಉದಯವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸಾಪ್ತಾಹಿಕ ವಿಭಾಗ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.
ಸಾಹಿತ್ಯ ಕೃಷಿ :- ಈವರೆಗೆ ಸಂಸ್ಕೃತದಲ್ಲಿ ಸುಮಾರು 50ಕ್ಕೂ ಹೆಚ್ಚು ಕೃತಿಗಳು, ಕನ್ನಡದಲ್ಲಿ ಸುಮಾರು 120 ಅಧಿಕ ಕೃತಿಗಳು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಸುಮಾರು 50 ಕೃತಿ ಸೇರಿ ರಚನೆ ಮತ್ತು ಪ್ರಕಾಶನ ಮಾಡಿದ್ದಾರೆ.
ಭಾರತದ ಪ್ರಾಚೀನ ಜ್ಞಾನ ಶಾಖೆಗಳಾದ ವೇದ – ಉಪನಿಷತ್ತು – ಪುರಾಣ- ರಾಮಾಯಣ – ಮಹಾಭಾರತ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಈ ತನಕ ಸುಮಾರು 30000 ಸಾವಿರ ಘಂಟೆಗಳಷ್ಟು ಉಪನ್ಯಾಸ ಪ್ರವಚನಗೈದ ದಾಖಲೆ ಅವರದ್ದಾಗಿದೆ. ಎಂಬುದು ಅಭಿನಂದನೀಯ .
ಇವರ ಹತ್ತಿರ ಯಾರಾದರೂ ವಿದ್ವಾಂಸರು ತಕ೯ಕ್ಕೆ ನಿಂತರೆ ಬನ್ನಂಜೆಯವರ ವಿಧ್ವತ್ ಗೆ ಮಾರು ಹೋಗುತ್ತಿದ್ದರು ಅಂತಹ ವಿದ್ವಾಂಸರು ನಮ್ಮ ಬನ್ನಂಜೆಯವರು ಎಂದು ಹೇಳಲು ನಮಗೆ ಹೆಮ್ಮೆ. ಅವರ ಜ್ಞಾಪಕ್ಷಿ ಅದ್ಭುತವಾಗಿ ಒಂದು ಬಾರಿ ಒಂದು ಪುಸ್ತಕವನ್ನು ಓದಿದರೆ ಆ ಎಲ್ಲಾ ಪುಸ್ತಕದ ಪ್ರತಿ ಸಾಲುಗಳು ಸದಾ ನೆನಪಿನಲ್ಲಿ ಇರುತ್ತಿದ್ದವು ಹೀಗಾಗಿ ಅವರು ಎಲ್ಲಾ ಗ್ರಂಥಗಳನ್ನು ಅಧ್ಯಯನ ಮಾಡಿ ವಿಶೇಷವಾದ ಧ್ಯಾನವನ್ನು ಸಂಪಾದನೆ ಮಾಡಿದ್ದರು ಅವರ ಪ್ರವಚನಗಳು ಅವರ ಜ್ಞಾನ ಶಕ್ತಿಗೆ ಉದಾಹಣಿಯಾಗಿದ್ದವು.
ಸಾಧನೆಗೆ ಸಂದ ಪ್ರಶಸ್ತಿ, ಪುರಸ್ಕಾರಗಳು: ಅವರು ಯಾವ ಪ್ರಶಸ್ತಿಗೂ ಆಸೆ ಪಡೆದ ವ್ಯಕ್ತಿ ಅವರು ಆದರೆ ನೂರಾರು ಪ್ರಶಸ್ತಿ ಗೌರವ ಇವರನ್ನು ಹುಡುಕಿ ಬಂದಿವೆ. ಉಡುಪಿ ಶ್ರೀ ಕೃಷ್ಣ ಮಠ ಅಷ್ಟ ಮಠಗಳು ಸೇರಿದಂತೆ ಅನೇಕ ಪ್ರಸಿದ್ಧ ಮಠ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ , ವಿದ್ಯಾರತ್ನಾಕರ , ಪಂಡಿತರತ್ನ , ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಇತ್ಯಾದಿ ಬಿರುದು ಪ್ರದಾನ. ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ ವಿದ್ವಾನ್ ಎಂಬ ಬಿರುದು ಅವರಿಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1974
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ
ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್
ರಾಷ್ಟ್ರೀಯ ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ 2009
ಅಂತಾರಾಷ್ಟ್ರೀಯ ಮಾನ್ಯತೆ : 2008 ರಲ್ಲಿ ಅಮೇರಿಕಾದಲ್ಲಿ ( ಪ್ರಿನ್ಸ್ಟನ್) ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಭಾಗಿಯಾಗಿದ್ದರು. ಈ ಸಂದಭ೯ ಇವರ ವಿಧ್ವತ್ ಗೆ ಮೆಚ್ಚಿ ನೂರಾರು ಮಂದಿ ವಿದೇಶಿಯರು ಕೂಡ ಶಿಷ್ಯರಾದದ್ದು ಇತಿಹಾಸ.
ಉಡುಪಿಯ ಅಷ್ಟಮಠದ'ಹಲವಾರು ಯತಿಗಳಿಗೆ ಪಾಠ ಹೇಳಿರುವ ಇಂಥ ಶ್ರೇಷ್ಠ ವಿದ್ವಾಂಸರು ಪ್ರವಚನಕಾರರು ಆದ ಬನ್ನಂಜೆ ಅವರು ನಮ್ಮ ಉಡುಪಿಯವರು ಎಂದು ಹೇಳಲು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲಿ ಉಡುಪಿಯ ಹೆಸರನ್ನು ಬೆಳಗಿಸಿದ ಅವರು ನಾಡಿಗೆ ನೀಡಿದ ಸಂದೇಶಗಳನ್ನು ಮತ್ತು ಕೊಡುಗೆಗಳನ್ನು ಸ್ಮರಿಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ.
ಇಂಥ ಶ್ರೇಷ್ಠ ವಿದ್ವಾಂಸರ ಕೊಡುಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಡೆಯಬೇಕು ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಪ್ರಾರಂಭಿಸಿದರು ಉತ್ತಮ.
ರಾಜ್ಯ ಸಕಾ೯ರ ಉಡುಪಿಯ ಕೇಂದ್ರ ಗ್ರoಥಾಲಯಕ್ಕೆ ಇವರ ಹೆಸರು ಇಟ್ಟು ಗೌರವ ನೀಡಿದೆ. ಮುಂದಿನ ದಿನದಲ್ಲಿ ಎಲ್ಲಾ ವಿ.ವಿಗಳಲ್ಲಿಸಂಶೋಧನಾ ಕೇಂದ್ರ ಅಥವಾ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಿ ಅವರ ಬಗ್ಗೆ ವಿದ್ಯಾಥಿ೯ಗಳಿಗೆ ಸಂಶೋಧನೆ ಮಾಡಲು ಅವಕಾಶ ಒದಗಿಸಬೇಕು. ಇಂತಹ ಶ್ರೇಷ್ಠ' ವ್ಯಕ್ತಿ ಆಚಾಯ೯ರ ಕೊಡುಗೆ ಸದಾ ಸ್ಮರಣಿe ಯವಾದದ್ದು.
ಉಡುಪಿ ನಮನ: -
ಅಗಸ್ಟ್ 3ರಂದು ಇಂದು ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ತಮ್ಮೆಲ್ಲರ ಉಪಸ್ಥಿತಿ ಬೇಕು ಈಗಾಗಲೇ ಕಾಯ೯ಕ್ರಮ ಸಮಿತಿ ವತಿಯಿಂದ ತಯಾರಿಗಳು ಭರದಿಂದ ಸಾಗುತ್ತಿವೆ.ತಾವೆಲ್ಲರೂ ಬನ್ನಿ ತಮ್ಮವರನ್ನು ಕರೆತನ್ನಿ.
ಈ ಕಾರ್ಯಕ್ರಮದಲ್ಲಿ ಅವರ ವಿಶೇಷವಾದ ಭಾವಚಿತ್ರಗಳ ಪ್ರದರ್ಶನ ಸೇರಿದಂತೆ ಅವರು ಬಳಸುತ್ತಿದ್ದ ಅನೇಕ ವಸ್ತುಗಳ ಪ್ರದರ್ಶನವು ನಡೆಯಲಿದೆ ಒಂದು ಸಾಹಿತ್ಯ ಸಮ್ಮೇಳನದಂತೆ ನಡೆಯಲಿರುವ ಈ ಕಾರ್ಯಕ್ರಮ ಉಡುಪಿಗೆ ಹೆಮ್ಮೆಯಾಗಿದೆ.

0 ಕಾಮೆಂಟ್‌ಗಳು