ಪರಶಿವನ ಪುತ್ರ
ಧರೆಗಿಳಿದು ಬಂದ
ಹರಸುವನು ಹರುಷದಿಂದ||
ಗಿರಿಜೆಗಿವ ಸುತನು
ಕರುಣಿಸುವ ಶುಭವ
ಕರಪಿಡಿವ ಮೋದದಿಂದ||
ತಿರೆಯೊಳಗೆ ಮೊದಲ
ಸಿರಿಪೂಜೆ ಪಡೆವ
ಮರೆಯದೆಯೆ ವಿಘ್ನ ಕಳೆವ||
ಕರಿಮುಖನು ದೇವ
ವರಗಳನ್ನೀವ
ಸರಿಸುವನು ಮನದ ನೋವ||
ಇಲಿಯೇರಿ ಕುಳಿತ
ಬಲವಂತನೀತ
ಫಲವೀವ ಸಿದ್ಧಿದಾತ||
ಒಲಿಯುವನು ಬೇಗ
ನಲಿಯುತ್ತಲಿರುವ
ಚೆಲುವನಿವ ಗಣಕೆ ನಾಥ||
ವರವನ್ನು ಕೊಡುತ
ದುರಿತವನು ಕಳೆವ
ಸುರನರರ ಪೊರೆವನಲ್ಲ||
ವರಸುಪ್ರಶಾಂತ
ಹರಿಗಿವನು ಪ್ರೀತ
ಕರೆದಾಗ ಬರುವನಲ್ಲ||
✍ ಪ್ರಶಾಂತ ಕುಮಾರ್ ಮಟ್ಟು
0 ಕಾಮೆಂಟ್‌ಗಳು