ಪರ್ಕಳದ ಸರಿಗಮ ಭಾರತಿಯಲ್ಲಿ ವಿಜಯದಶಮಿಯ ಪ್ರಯುಕ್ತ 'ವಿಜಯದಶಮಿ ಸಂಗೀತೋತ್ಸವ-2025' ನಡೆಯಲಿದೆ. 2.10.2025 ಗುರುವಾರ ಬೆಳಗ್ಗೆ 7.45 ಗಂಟೆಗೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್ ರವಿಕಿರಣ್ ಅವರ ಹಿಂದುಸ್ತಾನಿ ಗಾಯನ. 9.00 ರಿಂದ ವಿದುಷಿ ಸುರೇಖಾ ಭಟ್ ಅವರ ಕರ್ನಾಟಕ ಸಂಗೀತ,10.00ರಿಂದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳು, ಬೆಳಗ್ಗ 10.20ಕ್ಕೆ ಕಾರ್ಯಕ್ರಮದ ಉದ್ಘಾಟನೆ- ವಿಧಾನ ಪರಿಷತ್ ಮಾಜಿಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ, ಮಂಜುನಾಥ ಉಪಾಧ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಗಳಾದ ಶಿಲ್ಪಾ ಜೋಶಿ, ಮಾನಸಿ ಸುಧೀರ್ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.
11.45ರಿಂದ ತನ್ಮಯಿ ಉಪ್ಪಂಗಳ ಅವರ ಸಂಗೀತ ಕಛೇರಿ, 2.00ರಿಂದ ವಿದ್ಯಾಲಯದ ಮಕ್ಕಳಿಂದ ಕೃತಿಗಳ ಪ್ರಸ್ತುತಿ, ನಂತರ ಪಂಚರತ್ನ ಗೋಷ್ಠಿ ಗಾಯನ ನಡೆಯಲಿದೆ. ಸಂಜೆ4.00ರಿಂದ ಮೈಸೂರಿನ ಎ. ಚಂದನ್ ಕುಮಾರ್ ಅವರ ಕೊಳಲವಾದನ- ಇವರೊಂದಿಗೆ ವಯೊಲಿನ್‌ನಲ್ಲಿ ಚಾರುಲತಾ ರಾಮಾನುಜಂ, ಮೃದಂಗದಲ್ಲಿ ಅರ್ಜುನ್ ಕುಮಾರ್ ಬೆಂಗಳೂರು ಮತ್ತು ಸುನಾದ ಕೃಷ್ಣ ಅಮೈ ಸಾತ್ ನೀಡುವರು.
ಸಂಜೆ 7.30ರಿಂದ ಮಂಗಳೂರಿನ 'ನೃತ್ಯಾಂಗನ್'ನ ಅದಿತಿ ಲಕ್ಷ್ಮಿ ಭಟ್ ಹಾಗೂ 8.30ರಿಂದ ಪುತ್ತೂರಿನ ದೀಪಕ್ ಕುಮಾರ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾಲಯದ ನಿರ್ದೇಶಕಿ ಉಮಾಶಂಕರಿ ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.
0 ಕಾಮೆಂಟ್‌ಗಳು