ಪೊಲೀಸ್ ನೇಮಕಾತಿ ಮಾಡುತ್ತಿಲ್ಲ. ಧಾರವಾಡದಲ್ಲಿ ನೂರಾರು ಯುವಕರು ರೊಚ್ಚಿಗೆದ್ದಿದ್ದಾರೆ. ಹೀಗೇ ಆದರೆ, ಮಂತ್ರಿಗಳ ಮನೆಗೂ ನೇಪಾಳದಂತೆ ಯುವಕರು ದಾಳಿ ಮಾಡುವ ದಿನ ದೂರವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಉಚಿತ ಅಕ್ಕಿಯ ಅನ್ನ ಉಂಡುಕೊಂಡು ಬಸ್ಸಲ್ಲಿ ಓಡಾಡಿಕೊಂಡಿದ್ದರೆ ಸಾಕೇ? ಯುವಕರಿಗೆ ಉದ್ಯೋಗ ಬೇಡವೇ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಪ್ರಶ್ನಿಸಿದರು. ಪೊಲೀಸ್ ನೇಮಕಾತಿಯನ್ನು ವಯಸ್ಸಿನ ಮಿತಿ ರಿಯಾಯಿತಿ ನೀಡುವಂತೆ ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಡೆಯುತ್ತಿದೆ. ಇದೇ ಕಾರಣದಿಂದ ನಾನು ಹೋದಲ್ಲೆಲ್ಲ ಜನ ಸೇರುತ್ತಿದ್ದಾರೆ. ನಾನು ಒಂಟಿ ಸಲಗ. ಆದರೂ ಜನ ಯಾಕೆ ಬರುತ್ತಾರೆ ಎಂದರೆ ಅರ್ಥ ಮಾಡಿಕೊಳ್ಳಿ’ ಎಂದು ಯತ್ನಾಳ್ ಹೇಳಿದರು.
0 ಕಾಮೆಂಟ್‌ಗಳು