Header Ads Widget

ಎಂ.ಜಿ.ಎಂ ಸಂಧ್ಯಾ ಕಾಲೇಜಿನಲ್ಲಿ ವಿಶ್ವ ಪ್ರಥಮ ಚಿಕಿತ್ಸಾ ದಿನಾಚರಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ

 

ಉಡುಪಿ: ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಉಡುಪಿ ಜಿಲ್ಲೆ, ಮಹಾತ್ಮಾ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು, ಉಡುಪಿ ಇವರ ಆಶ್ರಯದಲ್ಲಿ, ಯುವ ರೆಡ್‌ಕ್ರಾಸ್ ಘಟಕ ಇವರಿಂದ ರಾಷ್ಟ್ರೀಯ ಸೇವಾ ಯೋಜನೆ – ರೋವರ್ಸ್ ರೇಂಜರ್ಸ್ ಘಟಕಗಳ ಸಹಯೋಗದಲ್ಲಿ ವಿಶ್ವ ಪ್ರಥಮ ಚಿಕಿತ್ಸಾ ದಿನಾಚರಣೆ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ ಶನಿವಾರ ಎಂ.ಜಿ.ಎಂ ಕಾಲೇಜು ಆಡಿಟೋರಿಯಂ, ಟಿ. ಮೋಹನದಾಸ್ ಪೈ ಪ್ಲಾಟಿನಂ ಜುಬ್ಲಿ ಬ್ಲಾಕ್, ಅಮೃತಸೌಧದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಉಡುಪಿಯ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ ಉದ್ಘಾಟಿಸಿದರು. ಡಾ. ಕಾವ್ಯ ಟಿ. ವೈದ್ಯಾಧಿಕಾರಿಗಳು, ಡಾ. ಎ.ವಿ. ಬಾಳಿಗಾ ಮೆಮೋರಿಯಲ್ಆಸ್ಪತ್ರೆ, ಉಡುಪಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಥಮಚಿಕಿತ್ಸೆ ಮತ್ತು ಸಿಪಿಆರ್ ತರಬೇತಿ ನೀಡಿ ಪ್ರಥಮ ಚಿಕಿತ್ಸೆಯ ಅವಶ್ಯಕತೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಪ್ರಾಣ ಉಳಿಸುವಲ್ಲಿ ಇದರ ಮಹತ್ವವನ್ನು ವೈದ್ಯರು ವಿವರಿಸಿದರು. ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದರು. 


ಶ್ರೀಮತಿ ರಮಾದೇವಿ - ಗೌ. ಖಜಾಂಚಿ, ರೆಡ್ ಕ್ರಾಸ್ಉಡುಪಿ ಜಿಲ್ಲೆ, ಎಂ ಜೆ ಎಂ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್ ಸಂಯೋಜನಾಧಿಕಾರಿ ಕು.ದೀಪಿಕಾ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಸನತ್ ಕೋಟ್ಯಾನ್, ರೆಂಜರ್ಸ್ ಸಂcಯೋಜನಾಧಿಕಾರಿ ಅಕ್ಷತಾ ನಾಯಕ್ ಉಪಸ್ಥಿತರಿದ್ದರು. 


ಕಾರ್ಯಕ್ರಮವು ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಶ್ರೇಷ್ಠ ಇವರು ಪ್ರಾರ್ಥಿಸಿದರು. ರೆಡ್ ಕ್ರಾಸ್ ಉಡುಪಿ ಜಿಲ್ಲೆಯ ಕಾರ್ಯದರ್ಶಿಗಳಾದ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಸ್ವಾಗತಿಸಿದರು. ದ್ವಿತೀಯ ಬಿ.ಸಿ.ಎ ಭಾರ್ಗವ್ ಧನ್ಯವಾದ ಸಮರ್ಪಿಸಿ, ದ್ವಿತೀಯ ಬಿ.ಸಿ. ಎ ನಿರೀಕ್ಷಾ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು