ಉಡುಪಿ : ಪಾಜಕ ಕುಂಜಾರುಗಿರಿಯ ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯಮಟ್ಟದ ಕಬ್-ಬುಲ್ ಬುಲ್ ಉತ್ಸವವು ಸೆ. 20 ರಿಂದ 23ರವರೆಗೆ ನಡೆಯಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ 750ಕ್ಕೂ ಹೆಚ್ಚು ಮಕ್ಕಳು ಹಾಗೂ ಸುಮಾರು 250 ಶಿಕ್ಷಕರು, ಸಿಬ್ಬಂದಿ ಹಾಗೂ ಫ್ಲಾಕ್ ಮಾಸ್ಟರ್‌ಗಳು ಭಾಗವಹಿಸಲಿದ್ದಾರೆ.
ಈ ಉತ್ಸವವು ಕೇವಲ ಮಕ್ಕಳ ಕೌಶಲ್ಯ ಪ್ರದರ್ಶನಕ್ಕೆ ಸೀಮಿತವಲ್ಲ, ಬದಲಿಗೆ ನಮ್ಮ ಕರಾವಳಿ ಸಂಸ್ಕೃತಿ, ಸ್ಥಳೀಯ ಪಾಕಕಲೆ, ಕಲಾ-ಕೈಗಾರಿಕೆ, ಹೊರಾಂಗಣ ಜೀವನ ಶೈಲಿ ಇವುಗಳನ್ನು ಮಕ್ಕಳಿಗೆ ಪರಿಚಯಿಸುವ ವಿಶೇಷ ಪ್ರಯತ್ನವಾಗಿದೆ. ಜೊತೆಗೆ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಲ್ಲಿ ಸಾಂಸ್ಕೃತಿಕ ಅರಿವು ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವನ್ನು ಬೆಳೆಸುವುದು ಮುಖ್ಯ ಉದ್ದೇಶವಾಗಿದೆ.
ರಾಜ್ಯಮಟ್ಟದ ಈ ಉತ್ಸವವು ಮಕ್ಕಳಲ್ಲಿ ತಂಡಭಾವನೆ, ಸೇವಾ ಮನೋಭಾವ, ಸಾಹಸಪ್ರಿಯತೆ ಹಾಗೂ ಸಂಸ್ಕೃತಿ ಅರಿವು ಬೆಳೆಸುವ ಸುವರ್ಣಾವಕಾಶವಾಗಲಿದೆ. ಕರ್ನಾಟಕದ ವಿವಿಧೆಡೆಯಿಂದ ಬರುವ ಕಬ್ - ಬುಲ್ ಬುಲ್ ಮಕ್ಕಳು ಒಂದೇ ವೇದಿಕೆಯಲ್ಲಿ ಸೇರುವುದರಿಂದ ‘ಏಕತೆಯಲ್ಲಿ ವೈವಿಧ್ಯತೆ’ ಎಂಬ ಸಂದೇಶವನ್ನು ಬಲಪಡಿಸುವುದು ಇದರ ವಿಶೇಷತೆ.
ಆನಂದತೀರ್ಥ ವಿದ್ಯಾಲಯವು ತನ್ನ ಆತಿಥ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಮೂಲಕ ಈ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಸಜ್ಜಾಗಿದೆ ಎಂದು ಆನಂದತಿರ್ಥ ವಿದ್ಯಾಲಯದ ಪ್ರಾoಶುಪಾಲೆ ಗೀತಾ ಶಶಿಧರ ಪ್ರಕಟನೆಯಲ್ಲಿ ತಿಳಿ ಸಿದ್ದಾರೆ.
0 ಕಾಮೆಂಟ್‌ಗಳು