ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಐದನೇ ದಿನವಾದ ಲಲಿತಾ ಪಂಚಮಿಯ ಶುಕ್ರವಾರ ಮಾತೆ ಶ್ರೀ ಸ್ಕಂದ ಮಾತಾದೇವಿ ಆರಾಧನೆಯೊಂದಿಗೆ ಮಹಾ ಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ಕುಟುಂಬಿಕ ರಿಂದ ಶ್ರೀ ಚಂಡಿಕಾ ಹೋಮ ನಡೆಯಿತು.
ಈ ಬಾರಿಯ ಉಚ್ಚಿಲ ದಸರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಿಸ್ವಾರ್ಥ ಸೇವಕರುಅಚ್ಚುಕಟ್ಟಿನ ನಿರ್ವಹಣೆಗಾಗಿ ಹಗಲು ರಾತ್ರಿ ದುಡಿ ಯುತ್ತಿದ್ದಾರೆ. ನಿತ್ಯ ಅನ್ನಸಂತರ್ಪಣೆ ಯಲ್ಲಿ ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದು, ಎಲ್ಲೂ ಅಡಚಣೆಯಾಗದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಸ್ವಚ್ಛತೆಗೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದು ಡಾ.ಜಿ.ಶಂಕರ್ ತಿಳಿಸಿದರು .
ಈ ಸಂದರ್ಭದಲ್ಲಿ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಕಾರ್ಯದರ್ಶಿ ಶರಣ್,ಕುಮಾರ್ ಮಟ್ಟು,ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ್ ಎಸ್. ಸುವರ್ಣ, ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ದಕ ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾರಾಣಿ ಬೋಳೂರು, ಕಾಪು ನಾಲ್ಕುಪಟ್ಟ ಮೊಗವೀರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಗುಣಾ ಎಸ್. ಕರ್ಕೇರ, ಪ್ರಮುಖರಾದ ಹರಿಯಪ್ಪ ಆರ್.ಕೋಟ್ಯಾನ್, ಶಿಲ್ಪಾ ಜಿ.ಸುವರ್ಣ, ಗುಂಡು ಬಿ.ಅಮೀನ್, ಸತೀಶ್ ಕುಂದರ್ ಮಲ್ಪೆ ಸುಭಾಶ್ಚಂದ್ರ ಕಾಂಚನ್, ಸುಧಾಕರ ಕುಂದರ್, ಶಂಕರ ಸಾಲ್ಯಾನ್, ವಾಸುದೇವ ಸಾಲ್ಯಾನ್, ಸುಜಿತ್ ಎಸ್.ಸಾಲ್ಯಾನ್, ಮನೋಜ್ ಕಾಂಚನ್ ಎರ್ಮಾಳು, ನಾರಾಯಣ ಕರ್ಕೇರ, ದಿನೇಶ್ ಎರ್ಮಾಳು, ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾ ಧ್ಯಾಯ, ಕಿರಣ್ ಉದ್ಯಾವರ, ಶಿವ ಕುಮಾರ್ ಮೆಂಡನ್, ವಿಶ್ವಾಸ್ ವಿ ಅಮೀನ್, ಸತೀಶ್ ಅಮೀನ್ ಪಡುಕರ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು