Header Ads Widget

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠ-ಪ್ರಸಾದ್ ನೇತ್ರಾಲಯ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರ

ಭಾರತದ ಸನ್ಮಾನ್ಯ ಪ್ರಧಾನ ಮ೦ತ್ರಿ ಶ್ರೀ ನರೇ೦ದ್ರ ಮೋದಿಯವರ ೭೫ನೇ ಜನ್ಮದಿನದ ಸವಿನೆನಪಿಗಾಗಿ ಶ್ರೀ ನಿತ್ಯಾನ೦ದ ಯೋಗಾಶ್ರಮ ಕೊ೦ಡೆವೂರು ಮಠ ಇವರ ಆಶ್ರಯದಲ್ಲಿ -ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಫೌ೦ಡೇಶನ್ ಬೆ೦ಗಳೂರು, ಡಾ. ದಯಾನ೦ದ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಇವರ ಜ೦ಟಿ ಆಶ್ರಯದಲ್ಲಿ ಬೆ೦ಗಳೂರಿನ ದೇವಾ೦ಗ ಸ೦ಘದಲ್ಲಿ ಉಚಿತ ನೇತ್ರ ಚಿಕಿತ್ಸಾ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರ ನಡೆಯಿತು. 

ಹ೦ಪಿ ಹೇಮಕೂಟ ಸ೦ಸ್ಥಾನದ ಪರಮಪೂಜ್ಯ ಶ್ರೀ ದಯಾನ೦ದಪುರಿ ಸ್ವಾಮೀಜಿ, ಶ್ರೀ ನಿತ್ಯಾನ೦ದ ಯೋಗಾಶ್ರಮ ಮಠದ ಶ್ರೀ ಯೋಗಾನ೦ದ ಸರಸ್ವತೀ ಸ್ವಾಮೀಜಿ ಅಶೀರ್ವಚನವಿತ್ತರು. ಕೇ೦ದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆಗಳ ರಾಜ್ಯ ಸಚಿವ ಶ್ರಿ ವಿ. ಸೋಮಣ್ಣ ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು. ಕೇ೦ದ್ರ ಮಾಹಿತಿ , ಪ್ರಸಾರ ಮತ್ತು ಸ೦ಸದೀಯ ವ್ಯವಹಾರ ರಾಜ್ಯ ಸಚಿವ ಡಾ. ಎಲ್. ಮುರುಗನ್, ಬೆ೦ಗಳೂರು ಲೋಕಸಭಾ ಸದಸ್ಯ ಶ್ರೀ ಪಿ.ಸಿ. ಮೋಹನ್, ಮಾನ್ಯ ರಾಜ್ಯ ಸಭಾ ಸದಸ್ಯ ಶ್ರೀ ಕೆ. ನಾರಾಯಣ, ಖ್ಯಾತ ಚಲನಚಿತ್ರ ನಟ ಹಾಗೂ ರಾಜ್ಯ ಸಭಾ ಸದಸ್ಯ ಶ್ರೀ ಜಗ್ಗೇಶ್, ವಿಧಾನ ಪರಿಷತ್ ಸದಸ್ಯ ಶ್ರೀ ಎನ್ ರವಿಕುಮರ್(ನಿವೃತ್ತ IPS), ಡಾ. ಕೆ.ಸಿ. ರಾಮಮೂರ್ತಿ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಫೌ೦ಡೇಶನ್ ಬೆ೦ಗಳೂರು ಇದರ ಚೀ¥s಼ï ಮ್ಯಾನೇಜರ್ ಶ್ರೀ ಧರ್ಮಪ್ರಸಾದ್ ರೈ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬೆ೦ಗಳೂರು ದೇವಾ೦ಗ ಸ೦ಘದ ಅಧ್ಯಕ್ಷ ಡಾ. ಜಿ. ರಮೇಶ್, IPS( ನಿವೃತ್ತ) ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರಾದ ಡಾ. ಮೋಹನ್, ಡಾ. ಪ್ರೇಮ್ ಸಾಗರ್ ಹಾಗೂ ಸಿಬ೦ದಿಗಳು ಶಿಬಿರ ನಡೆಸಿಕೊಟ್ಟರು.

ಶಿಬಿರದಲ್ಲಿ ೪೧೯ ಜನರು ಉಚಿತ ತಪಾಸಣೆಗೆ ಒಳಗಾದರು. ಒಟ್ಟು ೨೬೭ ಜನರನ್ನು ಉಚಿತ ಕನ್ನಡಕ ವಿತರಣೆಗಾಗಿ ಗುರುತಿಸಿದ್ದು ೧೧೫ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಕನ್ನಡಕ ವಿತರಿಸಲಾಯಿತು. ೬೬ ಜನರನ್ನು ಉಚಿತ ಪೊರೆ ಶಸ್ತç ಚಿಕಿತ್ಸೆಗೆ ಗುರುತಿಸಿ, ಬೆ೦ಗಳೂರಿನಲ್ಲಿಯೇ ಶಸ್ತçಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು