ಉಡುಪಿ : ಉಡುಪಿಯ ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನ ಇತಿಹಾಸ ವಿಭಾಗ, ಹೆರಿಟೇಜ್ ಕ್ಲಬ್ ಹಾಗೂ ವಿದ್ಯಾರ್ಥಿ ವೇದಿಕೆಯ ಜಂಟಿ ಆಶ್ರಯದಲ್ಲಿ ದಿ. ೦೮.೧೦.೨೦೨೫ರಂದು ಇತಿಹಾಸತಜ್ಞ ಡಾ. ಬಿ. ವಸಂತ ಶೆಟ್ಟಿ ಸಂಸ್ಮರಣ ಉಪನ್ಯಾಸ ಕರ‍್ಯಕ್ರಮ ನೆರವೇರಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಆರ್‌ಆರ್‌ಸಿ ಉಡುಪಿಯ ಸಹಸಂಶೋಧಕ ಡಾ. ಅರುಣ್ ಕುಮಾರ್ ಎಸ್ ಆರ್ ಆಗಮಿಸಿ, ‘ಇತಿಹಾಸದ ಅಧ್ಯಯನದಲ್ಲಿ ಜಾನಪದ ಆಕರಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು. ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ, ಮಾಹೆಯ ಸಾಂಸ್ಕೃತಿಕ ಕೇಂದ್ರದ ಆಡಳಿತಾಧಿಕಾರಿಗಳೂ ಆಗಿರುವ ಡಾ. ಬಿ. ಜಗದೀಶ್ ಶೆಟ್ಟಿ ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶ್ರೀ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ವೇದಿಕೆಯ ಸಂಯೋಜಕ ಡಾ. ಶಿವಕುಮಾರ ಅಳಗೋಡು ವಂದಿಸಿದರು. ವಿದ್ಯಾರ್ಥಿನಿಯರಾದ ಯಶಸ್ವಿ ಹಾಗೂ ಸಿಂಧು ಹೆಗಡೆ ಕರ‍್ಯಕ್ರಮ ನಿರೂಪಿಸಿ, ಪ್ರಾರ್ಥಿಸಿದರು.
0 ಕಾಮೆಂಟ್‌ಗಳು