Header Ads Widget

ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನ ಕಾರ್ಕಳ: ಮಹಾ ಚಂಡಿಕಾ ಯಾಗ ಸಂಪನ್ನ

 

ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನ  ತೆಳ್ಳಾರು ರಸ್ತೆ, ಕಾರ್ಕಳ    ಆಶ್ವಿಜ ಮಾಸದ (ಚತುರ್ದಶಿ) ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಸಾನಿಧ್ಯ ಹವನ , ದ್ವಾದಶ ಕಲಶಾಭಿಷೇಕ" ಪಂಚಾಮೃತ ಅಭಿಷೇಕ ವನ್ನು ದೇವಳದ ಪ್ರಧಾನ ಅರ್ಚಕರಾದ ಗಣಪತಿ ಭಟ್ ನೆರವೇರಿಸಿದರು.

                                                                                                                                                       ಶ್ರೀ ದುರ್ಗಾ ದೇವಿಯ ಸಾನಿಧ್ಯದ  ಚಂಡಿಕಾ ಹವನ ಮಂಟಪದಲ್ಲಿ  ಅ . 06 ರಂದು  ಚಂಡಿಕಾ ಯಾಗ ಧಾರ್ಮಿಕ ಪೂಜಾ ವಿಧಾನಗಳನ್ನು ವೇ . ಮೂ ಸಂದೀಪ್ ಭಟ್  ನೇತೃತ್ವದಲ್ಲಿ ನೆಡೆಯಿತು, ಸೇವಾ ದಾರದ ಶ್ರೀಮತಿ ಚಂದ್ರಕಲಾ ,ದೇವದಾಸ್ ಕಾಮತ್ ಉಡುಪಿ  ಪೂಜಾ ಕಾರ್ಯದಲ್ಲಿ ಸಹಕರಿಸಿದರು .    

                                                                                     

ಶ್ರೀದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ,ಶ್ರೀ  ದೇವಿಗೆ ವಿಶೇಷ  ಅಲಂಕಾರ, ಸಮೂಹಿಕ ನಮ ಸ್ಕಾರ  , ಚಂಡಿಕಾ ಹೋಮದ ಪೂರ್ಣಹುತಿ, ಸುಹಾಸನಿ ಪೂಜೆ , ಕುಮಾರಿ ಪೂಜೆ  , ದಂಪತಿ ಪೂಜೆ, ಪಲ್ಲಪೂಜೆ ಮಹಾಪೂಜೆಯ ಬಳಿಕ  ಸಮಾರಾಧನೆ ಜರಗಿತು, ರಾತ್ರಿ  ಶ್ರೀ ದೇವಕಿ ಕೃಷ್ಣ  ರವಳನಾಥ ದೇವರಿಗೆ ಹೂವಿನ ಪೂಜೆ , ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ರಂಗ ಪೂಜೆ  , ಪ್ರಸಾದವಿತರಣೆ ನೆಡೆಯಿತು.


ಸಮಾರಂಭದಲ್ಲಿ  ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಟಿ  ಸುಧಾಕರ್ ಪ್ರಭು  , ಎನ್ ರಾಮನಾರಾಯಣ ಪ್ರಭು , ವಿನೋದ್ ಪ್ರಭು , ಆರ್ ವಸಂತ್ ಪ್ರಭು, ಅರ್ಚಕರು  ಹಾಗೂ ನೂರಾರು ಸಮಾಜ ಬಾಂದವರು ಉಪಸ್ಥರಿದ್ದರು 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು