Header Ads Widget

ಕಾರಂತರ ಅಧ್ಯಯನ ಯುವಜನಾಂಗದ ಸೃಜನಶೀಲತೆಗೆ ಪ್ರೇರಣೆ: ಡಾ.ವರದೇಶ್ ಹಿರೇಗಂಗೆ

 

ಎಂ.ಜಿ.ಎಂ ಸಂಧ್ಯಾ ಕಾಲೇಜು:  ಡಾ. ಶಿವರಾಮಕಾರಂತ ಹುಟ್ಟುಹಬ್ಬದ ಪ್ರಯುಕ್ತ ಕಾರಂತ ಅಧ್ಯಯನ ಶಿಬಿರ ~ಯುವ ಬರಹಗಾರರ ಸಮಾವೇಶ

 

 ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಸಾಹಿತ್ಯ ಕೃಷಿ ಆರಂಭಿಸಿದ ಡಾ. ಶಿವರಾಮ ಕಾರಂತರು ಈ ನೆಲದ ಸಂಸ್ಕೃತಿಯನ್ನು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಇಂದಿನಯುವ ಜನಾಂಗ ಅಧ್ಯಯನ ಮಾಡಿದಲ್ಲಿ ಅವರಿಗೆ ಸೃಜನಶೀಲ ಬರವಣಿಗೆಗೆ ಪ್ರೇರಣೆಯಾಗ ಬಹುದು ಎಂದು ಮಾಹೆಯ ಗಾಂಧಿ ಅಧ್ಯಾಯನ ಕೇಂದ್ರ ನಿರ್ದೇಶಕ ಡಾ ವರದೇಶ್ ಹಿರೇಗಂಗೆ



 ಅವರು ಹೇಳಿದರು. ಅವರು ಕನ್ನಡ ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ನ ಯುವ ಬರಹಗಾರರ ಸಮಾವೇಶ ಮತ್ತುಕಾರಂತ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಎಂ.ಜಿ.ಎಂಸಂಧ್ಯಾಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಕೆ ಶ್ರೀಧರ್ ಪೈ, ಆಡಳಿತ ಅಧಿಕಾರಿಗಳು, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಅವರು ಕಾರಂತರ ಬಹುಮುಖ ಪ್ರತಿಭೆ ಇಂದಿನ ವಿದ್ಯಾರ್ಥಿಗಳಿಗೆ ಪರಿಚಯವಾಗಲು ಈ ಶಿಬಿರ ಪೂರಕವಾಗಿದೆ ಎಂದುಶುಭಹಾರೈಸಿದರು. 


ಡಾ ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರು ಆಶಯನುಡಿಗಳನ್ನು ಹೇಳಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾರವರು ಸ್ವಾಗತಿಸಿದರು. ಬರಹ ಗಾರ್ತಿ ಸುಧಾ ಆಡುಕಳ ಮತ್ತು ಪತ್ರಕರ್ತ ನಿತ್ಯಾನಂದ ಪಡ್ರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರಂತ ಟ್ರಸ್ಟ್ ಸದಸ್ಯರಾದ ಸತೀಶ್ ಕೊಡವೂರು, ಸಂತೋಷ್ ನಾಯ್ಕ್ ಪಟ್ಲ, ಶರೀಫ್ ಹೂಡೆ ಉಪಸ್ಥಿತರಿದ್ದರು.


ಪ್ರಸೀಜ, ಪ್ರಜ್ಞಾ, ಭೂಮಿಕ ತಂಡದವರು ನಾಡಗೀತೆಯನ್ನು ಹಾಡಿದರು. ಪೂರ್ಣಿಮಾರವರು ಸ್ವಾಗತಿಸಿ ಪ್ರಜ್ಞಾ, ದ್ವಿತೀಯ ಬಿಸಿಎ ಧನ್ಯವಾದ ಸಮರ್ಪಿಸಿದರು. ಮಧುರ ದ್ವಿತೀಯ ಬಿಸಿಎ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು