Header Ads Widget

ಜಯಂಟ್ಸ್ ಬ್ರಹ್ಮಾವರಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ ಸಹಿತ 15 ಪುರಸ್ಕಾರ

ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಘಟಕವು ಅತ್ಯುತ್ತಮ ಘಟಕ ಪ್ರಶಸ್ತಿ ಸಹಿತ 15 ಪುರಸ್ಕಾರಗಳನ್ನು ಮತ್ತು 2 ವಿಶೇಷ ಅಭಿನಂದನಾ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಜಯಂಟ್ಸ್ ಗ್ರೂಪ್ ಬೆಂಗಳೂರು ಗಾರ್ಡನ್ ಸಿಟಿ ಇದರ ಆಥಿತ್ಯದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಅಸೋಸಿಯೇಶನ್ ಮಲ್ಲೇಶ್ವರಂನಲ್ಲಿ ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಫೆಡರೇಶನ್ ವಿಭಾಗದಲ್ಲಿ ಅತ್ಯುತ್ತಮ ಘಟಕ ಮತ್ತು ಅಧ್ಯಕ್ಷ ಪ್ರಶಸ್ತಿ ಸಹಿತ 15 ಪುರಸ್ಕಾರಗಳನ್ನು ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈ ನ ಅಂತರಾಷ್ಟ್ರೀಯ ಉಪಾಧ್ಯಕ್ಷ ಸಿ.ಎ ಲಕ್ಷ್ಮಣನ್ , ಫೆಡರೇಶನ್6ರ ಅಧ್ಯಕ್ಷ ತೇಜಶ್ವರರಾವ್, ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮಿನ್, ಮುಂತಾದವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯ ದಾಸ್, ಕಾರ್ಯದರ್ಶಿ, ಮಿಲ್ಟನ್ ಒಲಿವರ, ನಿಕಟಪೂವ೯ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಶ್ರೀನಾಥ್ ಕೋಟ ವಿವೇಕಾನಂದ ಕಾಮತ್ ಮುಂತಾದರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು