ಸ್ಯಾಂಡಲ್‌ವುಡ್ ನ ಖ್ಯಾತ ಖಳನಟ ಉಡುಪಿ ಮೂಲದ ಹರೀಶ್ ರಾಯ್ (55) ನಿಧನರಾಗಿದ್ದಾರೆ. ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದ ಖಳನಟ ಹರೀಶ್ ರಾಯ್ ನಿಧನರಾಗಿದ್ದಾರೆ.
ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ತಮ್ಮ ಚಿಕಿತ್ಸೆಗೆ ಅವರು ಅಂಗಲಾಚಿದ್ದರು. ಆಗ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿಗಳದವರು ಸೇರಿ ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಡಿದ್ದರು. ನಟ ಯಶ್ ಕೂಡಾ ಸಹಾಯ ಮಾಡಿರುವುದಾಗಿ ಹರೀಶ್ ರಾಯ್ ಹೇಳಿದ್ದರು.
ಬೆಂಗಳೂರು ಅಂಡರ್‌ವರ್ಲ್ಡ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್ ಜೋಡಿ ಹಕ್ಕಿ, ತಾಯವ್ವ, ಓಂ, ನಲ್ಲ, ಕೆಜಿಎಫ್, ಕೆಜಿಎಫ್ 2 ಹಾಗೂ ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಹರೀಶ್ ರಾಯ್ ಅವರು ನಟಿಸಿದ್ದರು.

0 ಕಾಮೆಂಟ್‌ಗಳು