ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಹಾಗೂ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ, ಲೋಕಕಲ್ಯಾಣಾರ್ಥವಾಗಿ ಮತ್ತು ಭಕ್ತ ಜನರ ಜ್ಞಾನ, ಅರೋಗ್ಯ ಉದ್ಯೋಗ ,ಕ್ಷೇಮ,ವಿದ್ಯಾ ಪ್ರಾಪ್ತಿಗಾಗಿ, ಡಲ್ಲಾಸ್ ನಗರದಲ್ಲಿರುವ ಶ್ರೀ ಪುತ್ತಿಗೆ ಶಾಖಾ ಮಠ ಶ್ರೀ ಕೃಷ್ಣ ವೃಂದಾವನ ವು ಹಮ್ಮಿ ಕೊಡಿದ್ದ ಪೂಜಾ ಹವನ ಗಳು ಒಕ್ಟೋಬರ್ ೨೫ರಂದು ಪಂಚ ದುರ್ಗಾ ಪೂಜಾ ವು ೧೦೮ ಮಹಿಳೆರಿಂದ ಲಕ್ಷ್ಮಿ ಸಹಸ್ರ ನಾಮಾವಳಿ ಕುಂಕುಮಾರ್ಚನೆ, ೧೦೮ ಬರಿ ಲಕ್ಷ್ಮಿ ಶೋಭಾನೆ ,ತುಳಸಿ ಸಂಕೀರ್ತೇನೆ ಯೊಂದಿಗೆ ವೈಭವದಿಂದ ಸಂಪನ್ನಗೊಂಡವು. ಅಕ್ಟೋಬರ್ ೨೬ ರಂದು ಅರಣಿ ಮಥನ ದೊಂದಿಗೆ ಅಗ್ನಿ ಜ್ವಲನ ಮಾಡಿಕೊಂಡು ೮ ಗಂಟೆಯ ಸುಮುಹೂರ್ತದಲ್ಲಿ ಆರಂಭಗೊಂಡಿತು. ೧೯,೦೦೦ ಶನಿ ಜಪ ದೊಂದಿಗೆ ಶನೈಶ್ಚರ ಶಾಂತಿ ,ಸಂಜೀವಿನಿ ಮೃತುಂಜಯ ಹೋಮ,ದ್ವಾದಶ ನಾರಿಕೇಳ ಗಣಪತಿ ಹೋಮ,ಪೂರ್ಣ ಪ್ರಮಾಣ ನವಗ್ರಹ ಹೋಮ ಹಾಗೂ ಲಕ್ಷ್ಮಿ ಹೃದಯ ಹೋಮ ವು ಜರಗಿದವು. ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯರ ಮಾರ್ಗದರ್ಶನ ಗಳೊಂದಿಗೆ ಡಲ್ಲಾಸ್ ಶ್ರೀ ಶಾಖಾಮಠದ ಋತ್ವಿಜರಾದ ಶ್ರೀ ವಾದಿರಾಜ ಭಟ್ ಕುಕ್ಕೆಹಳ್ಳಿ ಡಲ್ಲಾಸ್, ಶ್ರೀ ರಘುರಾಮ ಭಟ್ ಹೂಸ್ಟನ್, ಶ್ರೀ ಶ್ರೀಪತಿ ತಂತ್ರೀ ಸಿಯಾಟಲ್, ಶ್ರೀ ವೇದವ್ಯಾಸ ಭಟ್ ಹೆರ್ಗ ಸಿಯಾಟಲ್, ಶ್ರೀ ಅವಿನಾಶ್ ಆಚಾರ್ಯ ಆಸ್ಟಿನ್ ಶ್ರೀ ಉದಯ ಕುಮಾರ್ ಕಲ್ಲೂರಾಯ ಫಿನಿಕ್ಸ್ ಇವರುಗಳ ಸಹಯೋಗದೊಂದಿಗೆ ಅತ್ಯಂತ ಶಿಸ್ತುಬದ್ಧವಾಗಿ ನಡೆದವು. ಸ್ಥಳೀಯ ಸ್ವಯಂಸೇವಕರ ಸಹಕಾರದೊಂದಿಗೆ ಶ್ರೀ ಹರೀಶ್ ಭಟ್ ಡಲ್ಲಾಸ್ ರ ಉಡುಪಿ ಶೈಲಿಯ ಅಡುಗೆಯು ಜನರನ್ನು ಸಂತ್ರಿಪ್ತಿಗೊಳಿಸಿದವು. ಪೂಜೆ, ಹೋಮಗಳಲ್ಲಿ ಸುಮಾರು ಸಾವಿರಾರು ಭಕ್ತರು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನ್ಯರಾದರು.

0 ಕಾಮೆಂಟ್‌ಗಳು