Header Ads Widget

ರತ್ನ ಸಂಜೀವ ಕಲಾಮಂಡಲ : ಕನ್ನಡ ರಾಜ್ಯೋತ್ಸವ ಸಂಭ್ರಮ

ಮಣಿಪಾಲ: ಸಾಹಿತ್ಯ ಪ್ರೀತಿಯನ್ನು, ಓದುವ ಹವ್ಯಾಸವನ್ನು ನಮ್ಮ ಎಳೆಯ ಮಕ್ಕಳು ಬೆಳೆಸಿಕೊಂಡಾಗ ಮಾತ್ರ ಕನ್ನಡ ಇನ್ನಷ್ಟು ನಳ ನಳಿಸಲು ಸಾಧ್ಯ ಎಂದು ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಅವರು ಹೇಳಿದರು.

ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕಲಾ ಮಂಡಲದಲ್ಲಿ ರವಿವಾರ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಬೇಕು ಇನ್ನಷ್ಟು ಹೊಸ ಬರಹಗಾರರ ಸೃಷ್ಟಿ ಆಗಬೇಕು ಈ ನಿಟ್ಟಿನಲ್ಲಿ ಸಾಹಿತ್ಯ ಸಂಘ ಒಂದನ್ನು ಹುಟ್ಟು ಹಾಕಿ ಎಳೆಯರಿಗೆ ತರಬೇತಿ ನೀಡುವ, ತನ್ಮೂಲಕ ಸಾಹಿತ್ಯ ಸೃಷ್ಟಿಗೆ ನೇರವಾಗುವ ಉದ್ದೇಶ ತನಗಿದೆ ಎಂದು ಅವರು ವಿವರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ರಾಂತ ಹಿರಿಯ ಉಪ ಸಂಪಾದಕ ನಿತ್ಯಾನಂದ ಪಡ್ರೆ ಅವರು ಗತ ಇತಿಹಾಸವನ್ನು ನೆನಪಿಸಿಕೊಂಡು ಸಂಭ್ರಮಿಸುವಿವುದು ಅಷ್ಟೇ ಅಲ್ಲ. ಇಂದಿನ ಸ್ಥಿತಿಯಲ್ಲಿ ಕನ್ನಡವನ್ನು ತಪ್ಪಿಲ್ಲದೇ ಶುದ್ಧವಾಗಿ ಬಳಸುವುದೂ ಕೂಡ ಒಂದು ಸವಾಲು ಎಂದರು. ಈ ನಿಟ್ಟಿನಲ್ಲಿ ಭಾಷಾ ಶುದ್ಧಿಯ ಬಗ್ಗೆ ನಾವು ಅನೇಕ ವಿಚಾರಗಳನ್ನು ತಿಳಿದುಕೊಂಡು ಬರವಣಿಗೆ ಆರಂಭಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಭೈರಪ್ಪನವರಿಗೆ ನುಡಿನಮನ ಸಲ್ಲಿಸಿದ ಪಾಜಕ ಆನಂದ ತೀರ್ಥ ವಿದ್ಯಾಲಯದ ಶಿಕ್ಷಕಿ ಸುಮಾ ಕಿರಣ್ 

ಭೈರಪ್ಪನವರು ಸಾಕಷ್ಟು ಅಧ್ಯಯನ ಮತ್ತು ಕ್ಷೇತ್ರ ಕಾರ್ಯ ಮಾಡಿದ ಬಳಿಕವೇ ಬರವಣಿಗೆಗೆ ಹೊರಡುತಿದ್ದರು. ಅವರ ಪ್ರತಿಯೊಂದು ಕಾದಂಬರಿಯು ಮಾಸ್ಟರ್ ಪೀಸ್ ಅವರ ಕೃತಿಗಳು ಕೇವಲ ಮನೋರಂಜನೆಗೆ ಅಷ್ಟೇ ಅಲ್ಲ ಓದಿದ ಬಳಿಕವು ಬಹು ಕಾಲ ನಮ್ಮನ್ನು ಚಿಂತನೆಗೆ ಹಚ್ಚುವ ಜ್ಞಾನ ದೀವಿಗೆಗಳಾಗಿವೆ ಎಂದು ಅವರು ವಿಶ್ಲೇಸಿಸಿದರು.

 ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಮಾನಂದ ಸಾಮಂತ್, ಹೇಮಂತ್ ಪರ್ಕಳ, ಉಪಸ್ಥಿತರಿದ್ದರು. 

 ಚೇತನಾ ಗಣೇಶ್ ಸ್ವಾಗತಿಸಿ, ಶಾಲಿನಿ ಕೆಮ್ಮಣ್ಣು ನಿರೂಪಿಸಿ, ಮಹೇಶ್ ನಾಯ್ಕ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು