ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಶ್ವ ರೂಪ ದರ್ಶನ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ , ಸೋಮವಾರ ಮುಂಜಾನೆ ಸಾವಿರಾರು ಹಣತೆ ದೀಪಗಳಿಂದ ವಿಶ್ವ ರೂಪ ದರ್ಶನ ನೆಡೆಯಿತು. ಪಶ್ಚಿಮ ಜಾಗರ ಪೂಜೆಯಲ್ಲಿ ಸಾವಿರಾರು ಭಕ್ತರೂ ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದರು ವಿವಿಧ ದೇವರಗಳ ರಂಗೋಲಿಯಲ್ಲಿ ಮೂಡಿ ಬಂದ ಬಣ್ಣದ ಚಿತ್ತಾರದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಚಿತ್ರಣ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರಂಪರೆಯ 550ನೇ ವರ್ಷದ ಆಚರಣೆ, ಶ್ರೀ ದುರ್ಗಾ ಪರಮೇಶ್ವರಿ, ಶ್ರೀ ವೇದವ್ಯಾಸ ದೇವರು, ಶ್ರೀ ವೆಂಕಟರಮಣ, ಶ್ರೀ ಮಹಾಗಣಪತಿ , ಶ್ರೀ ವರಾಹ ರೊಪಂ, ಶ್ರೀರಾಮ, ಶ್ರೀ ಶಿವಾ, ಜೈ ವಿಠಲ್ ಹರಿ ವಿಠಲ್, ಶ್ರೀ ವಿಠೋಬಾ ರುಖುಮಾಯಿ ದೇವರು ಶ್ರೀನಿವಾಸ ದೇವರ ಮುಂತಾದ ದೇವರ ಚಿತ್ತಾರ ಭಕ್ತರ ಮನ ಸೆಳೆಯಿತು. ಪ್ರಧಾನ ಅರ್ಚಕರಾದ ವಿನಾಯಕ ಭಟ್ ಮಹಾ ಪೂಜೆ ನೆರವೇರಿಸಿದರು, ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಹಾಗೂ ಮಹಿಳಾ ಮಂ ಡಳಿಯ ಸದಸ್ಯರು ಸಹಕರಿಸಿದರು, ಭಜನಾ ಮೊಹೋತ್ಸವ ಸಮಿತಿಯ ಸದಸ್ಯರು, ಶ್ರೀ ರಾಮನಾಮ ಜಪ ಅಭಿಯಾನ ಸಮಿತಿಯ ಸದಸ್ಯರು, ನೂರಾರು ಸಮಾಜಭಾಂದವರು ಉಪಸ್ಥರಿದ್ದರು.                                                                                                                 

ಶ್ರೀ ದೇವರ ಸನ್ನಿಧಿಯಲ್ಲಿ ಸುಪ್ರಭಾತ , ಕಾಕಡ ಆರತಿ , ಭಜನಾ ಕಾರ್ಯಕ್ರಮ , ವಿಶೇಷ ಹೂವಿನ ಅಲಂಕಾರ , ದೀಪಾರಾಧನೆ , ಮಂಗಳಾರತಿ , ಪ್ರಸಾದ ವಿತರಣೆ ನೆಡೆಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು