Header Ads Widget

ನಮೋ ~ ಶ್ರೀಕೃಷ್ಣ

ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ, ಬೆಳಿಗ್ಗೆ 11.40ಕ್ಕೆ ಉಡುಪಿಯ ಆದಿವುಡುಪಿ ಹೆಲಿಪ್ಯಾಡ್'ಗೆ ಆಗಮಿಸುವರು. ಅಲ್ಲಿಂದ ವಾಹನದಲ್ಲಿ ರಸ್ತೆ ಮಾರ್ಗವಾಗಿ ಕೃಷ್ಣಮಠಕ್ಕೆ ಆಗಮಿಸುವರು.


ಮಧ್ಯಾಹ್ನ 12 ಗಂಟೆಗೆ ಕೃಷ್ಣಮಠ ಭೇಟಿ ನೀಡಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬೃಹತ್ ಗೀತೋತ್ಸವದಲ್ಲಿ ಹಮ್ಮಿ ಕೊಂಡಿರುವ ಲಕ್ಷಕಂಠ ಗೀತಾ ಪಾರಾಯಣ ದಲ್ಲಿ ಭಾಗವಹಿಸಿ ಅಪರಾಹ್ನ 1.30ಕ್ಕೆ ಉಡುಪಿ ಯಿಂದ ನಿರ್ಗಮಿಸಿ, ಗೋವಾಕ್ಕೆ ತೆರಳುವರು ಎಂದು ಮೂಲಗಳು ತಿಳಿಸಿವೆ.


ಕಾರಣಾoತರಗಳಿಂದ ರೋಡ್ ಶೋ ರದ್ದು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಕೃಷ್ಣಮಠದಲ್ಲೂ ಭರದ ಸಿದ್ಧತೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು