Header Ads Widget

ಪ್ರಧಾನಿ ನರೇಂದ್ರ ಮೋದಿಜಿ ಉಡುಪಿ ಭೇಟಿ~ 'ಬೃಹತ್ ಸ್ವದೇಶಿ ಹಬ್ಬ'

 

ಪ್ರಧಾನಿ ನರೇಂದ್ರ ಮೋದಿಜಿ ಉಡುಪಿ ಭೇಟಿ ಸಂಭ್ರಮಾಚರಣೆಗಾಗಿ ನವೆಂಬರ್ 27ರಿಂದ ಡಿಸೆಂಬರ್ 1 ರವರೆಗೆ 'ಬೃಹತ್ ಸ್ವದೇಶಿ ಹಬ್ಬ'


ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ "ಸ್ವಾವಲಂಬಿ ಭಾರತ" ದ ಪರಿಕಲ್ಪನೆಯ ಆತ್ಮನಿರ್ಭರ ಭಾರತ - ಸ್ವದೇಶಿ ಸಂಕಲ್ಪ ಅಭಿಯಾನ ದ ಅಂಗವಾಗಿ 'ಬೃಹತ್ ಸ್ವದೇಶಿ ಹಬ್ಬ' (ಕೃಷಿ - ಕೌಶಲ - ಗುಡಿ ಕೈಗಾರಿಕೆ - ಆಹಾರ - ಸಸ್ಯೋತ್ಸವ) ನವೆಂಬರ್ 27 ರಿಂದ ಡಿಸೆಂಬರ್ 1, 2025 ರ ತನಕ ಬೆಳಿಗ್ಗೆ 9.00ರಿಂದ ರಾತ್ರಿ 8.30ರ ವರೆಗೆ ರೈತ ಸೇವಾ ಕೇಂದ್ರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಜರುಗಲಿದೆ.


ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಭೇಟಿ ಸಂಭ್ರಮಾಚರಣೆಗಾಗಿ  ಹಮ್ಮಿಕೊಂಡಿರುವ 'ಬೃಹತ್ ಸ್ವದೇಶಿ ಹಬ್ಬ' ದ  ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ  ಆತ್ಮನಿರ್ಭರ ಭಾರತ ಜನ-ಜಾಗೃತಿ ಪಾದಯಾತ್ರೆಯು 27.11.2025, ಸಂಜೆ 4:00 ರಿಂದ ದೊಡ್ಡಣಗುಡ್ಡೆ ನೇಕಾರರ ಕಾಲೋನಿಯಿಂದ ರೈತ ಸೇವಾ ಕೇಂದ್ರದ ವರೆಗೆ ನಡೆಯಲಿದೆ.


ಈ ಹಬ್ಬದಲ್ಲಿ ಈ ಭಾಗದ ಪ್ರಸಿದ್ಧ ಗುಡಿ ಕೈಗಾರಿಕೆಗಳಾದ ಕೈಮಗ್ಗ ನೇಕಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಬಡಗಿ, ಅಗರಬತ್ತಿ, ಜೇನುಕೃಷಿ, ಆಲೆಮನೆ ಮುಂತಾದವುಗಳ ಪ್ರದರ್ಶನ ಮತ್ತು ಉತ್ಪನ್ನಗಳ ಮಾರಾಟ ನಡೆಯಲಿದೆ. 


ಕೃಷಿ - ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳು, ಮುದ್ರಾ, ಉಜ್ವಲ, ಸ್ಟಾರ್ಟ್ ಅಪ್ ಇಂಡಿಯಾ, ಕೌಶಲ್ಯ ಅಭಿವೃದ್ದಿ,  PMEGP, PMFME, ಪಿಎಂ ಸೂರ್ಯ ಘರ್ ಇತ್ಯಾದಿ ಯೋಜನೆಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ - ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ

''ನಾನು ಆದ್ಯತೆಯಲ್ಲಿ ಸ್ವದೇಶಿ ವಸ್ತುಗಳನ್ನು ಉಪಯೋಗಿಸುತ್ತೇನೆ” ಎಂಬ ಶೀರ್ಷಿಕೆ ಅಡಿಯಲ್ಲಿ ಆತ್ಮ ನಿರ್ಭರ ಭಾರತ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿ ಗಳು ಹಾಗೂ ಕುಶಲಕರ್ಮಿಗಳ ಅಭಿನಂದನಾ ಕಾರ್ಯಕ್ರಮವೂ ಜರುಗಲಿದೆ.


ಮಾನ್ಯ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಈ ಬೃಹತ್ ಸ್ವದೇಶಿ ಹಬ್ಬವನ್ನು ಉದ್ಘಾಟಿಸಲಿದ್ದಾರೆ.  ಸಭಾಧ್ಯಕ್ಷರಾಗಿ ಉಡುಪಿ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಶ್ರೀ ಯಶ್ ಪಾಲ್ ಸುವರ್ಣ, ಕಾರ್ಕಳ ಶಾಸಕ  ಶ್ರೀ ಸುನಿಲ್ ಕುಮಾರ್,  ಕಾಪು ಶಾಸಕ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಶ್ರೀ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ, ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಶ್ರೀ ಲಾಲಾಜಿ ಆರ್ ಮೆಂಡನ್, ಉಡುಪಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಶ್ರೀ ಪ್ರಭಾಕರ್ ಪೂಜಾರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ, ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಉದ್ಯಮಿಗಳಾದ ಉದಯ ಶೆಟ್ಟಿ ಇನ್ನಾ, ಲಕ್ಷ್ಮಿಕಾಂತ್ ಬೆಸ್ಕೂರ್, ಮನೋಹರ್ ಶೆಟ್ಟಿ ತೋನ್ಸೆ, ದಿವಾಕರ್ ಸನಿಲ್  ಭಾಗವಹಿಸಲಿದ್ದಾರೆ. 


ಪ್ರಧಾನಿ ಮೋದಿಯವರ ಸ್ವಾವಲಂಬಿ ಭಾರತ ಪರಿಕಲ್ಪನೆಗೆ ಶಕ್ತಿ ತುಂಬಲು, ಉಡುಪಿಯ ಜನತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ 'ಬೃಹತ್ ಸ್ವದೇಶಿ ಹಬ್ಬ' ಕ್ಕೆ ಆಗಮಿಸಬೇಕಾಗಿ ಆತ್ಮನಿರ್ಭರ ಭಾರತ - ಸ್ವದೇಶಿ ಹಬ್ಬ ಅಭಿಯಾನದ ಜಿಲ್ಲಾ ಸಂಚಾಲಕ ರತ್ನಾಕರ ಇಂದ್ರಾಳಿ ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು