ಇತಿಹಾಸ ಸೃಷ್ಟಿಸಿದ "ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ" ಚುನಾವಣೆ

ತುರುವೇಕೆರೆ ತಾಲೂಕಿನ ಪ್ರತಿಷ್ಠಿತ ಹೋಬಳಿಯಂದೇ ಹೆಸರಾದ ಮಾಯಸಂದ್ರ ಹೋಬಳಿಯ, ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಸ್ತುತ ಸಾಲಿನ ಆಡಳಿತ ಮಂಡಳಿಯ ಚುನಾವಣೆಯು ಡಿ.30ರ ಭಾನುವಾರ ಮಾಯಸಂದ್ರದ ಸರ್ಕಾರಿ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು. 

ಬೆಳಗ್ಗೆ 9:00 ರಿಂದ ಸಂಜೆ 4 ರವರೆಗೂ ನಡೆದ ಚುನಾವಣೆಯಲ್ಲಿ ಸರಿ ಸುಮಾರು ಶೇಕಡ 85 ಕ್ಕೂ ಹೆಚ್ಚಿನ ಮತದಾನ ನಡೆದಿರುವುದಾಗಿ ತಿಳಿದು ಬಂದಿದೆ. ಬೆಳಗಿನಿಂದ ಸಂಜೆವರೆಗೂ ಸಹ ಬಿರುಸಾಗಿ ನಡೆದ ಚುನಾವಣೆಯ ಕಣದಲ್ಲಿ ಸುಮಾರು 23 ಮಂದಿ ಸ್ಪರ್ಧಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಸ್ಪರ್ಧಿಗಳು ಸಹಾ ವಿಶೇಷವಾದ ತಂಡಗಳಾಗಿ ಮಾರ್ಪಡಿಸಿ, ಮತಯಾಚನೆ ನಡೆಸಿದ್ದರು. 

ನಿರೀಕ್ಷೆಗೂ ಮೀರಿದ ಫಲಿತಾಂಶವೇನೆಂದರೆ ಒಂದೇ ತಂಡದ 11 ಮಂದಿ ಸ್ಪರ್ಧಿಗಳು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 1 ಮಂದಿ ಸೇರಿದಂತೆ ಒಟ್ಟಾರೆ 12 ಮಂದಿ ಚುನಾಯಿತರು ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿರುವ ಘಟನೆ ನಡೆದಿರುವುದಾಗಿ ಗ್ರಾಮದ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗಳಾಗುತ್ತಿವೆ.


ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು:

ಅಶೋಕ್ ಕುಮಾರ್ ಡಿ.ಎಸ್. (ಸಾಮಾನ್ಯ ಅಭ್ಯರ್ಥಿ). ಢಣನಾಯಕನಪುರ 855 ಮತಗಳು. 

ಗಿಡ್ಡಯ್ಯ ಕೆ.ಎಂ. (ಬಿಸಿಎಂ) ಎ. ಮಾಯಸಂದ್ರ 940ಮತಗಳು. 

ನಂದಿನಿ ಮಂಜುನಾಥ್ (ಮಹಿಳಾ ಮೀಸಲು) ಮಾಯಸಂದ್ರ 862ಮತಗಳು. 

ಪದ್ಮ ಎಸ್. ಕೆ. (ಮಹಿಳಾ ಮೀಸಲು) ಜಡೆಯ 838 ಮತಗಳು. 

ಬಾಲರಾಜು ಕೆ.ಆರ್ (ಸಾಮಾನ್ಯ ಅಭ್ಯರ್ಥಿ) ಕಲ್ಲು ನಾಗತಿಹಳ್ಳಿ 789 ಮತಗಳು. 

ಯೋಗೇಶ್ ಎಚ್.ಟಿ.(ಬಿ ಸಿ ಎಂ) ಬಿ ಹೊಣಕೆರೆ 863 ಮತಗಳು. 

ರಘು ಕೆ. (ಸಾಮಾನ್ಯ ಅಭ್ಯರ್ಥಿ) ಟಿ.ಬಿ. ಕ್ರಾಸ್ 884 ಮತಗಳು. 

ರಂಗನಾಥ ಎಂ ಆರ್ (ಸಾಮಾನ್ಯ ಅಭ್ಯರ್ಥಿ) ಮಾಯಸಂದ್ರ 878 ಮತಗಳು. 

ಲೋಕೇಶ್ ಎಂ.ಎಲ್. (ಪರಿಶಿಷ್ಟ ಜಾತಿ ಮೀಸಲು) ಮಾಯಸಂದ್ರ 911ಮತಗಳು.

ಶಿವರಾಜು ಎಮ್. ಎಸ್. (ಪರಿಶಿಷ್ಟ ಪಂಗಡ ಮೀಸಲು) ಮಾಯಸಂದ್ರ 747 ಮತಗಳು.

ಸುನಿಲ್ ಜೆ ಎಸ್ (ಸಾಮಾನ್ಯ ಅಭ್ಯರ್ಥಿ) ಜಡೆಯ 1011 ಅತ್ಯಧಿಕ ಮತಗಳು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಜನಾರ್ದನಪುರದ ವೆಂಕಟೇಶ್ ಜೆ.ಆರ್. ಸೇರಿದಂತೆ 12 ಮಂದಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಪ್ರಸ್ತುತ ಸಾಲಿನ ಚುನಾವಣೆಯಲ್ಲಿ ಜಡೆಯ ಗ್ರಾಮದ ಮಾಯಸಂದ್ರದ ಗಿರಿ ಮೆಡಿಕಲ್ ಸ್ಟೋರ್ ಮಾಲೀಕರಾದ "ಸುನಿಲ್ " 1011 ದಾಖಲೆಯತ್ತ ಅತ್ಯಧಿಕ ಮತಗಳನ್ನು ಪಡೆದು ವಿಶೇಷವಾಗಿ ಜಯಭೇರಿ ಭಾರಿಸಿದ್ದಾರೆ. 

ಈ ವೇಳೆ ದಾಖಲೆಯತ್ತ ಮತ ಪಡೆದು ಜಯಶೀಲರಾದ ಸುನಿಲ್ , ಎಂ.ಎಲ್.ಲೋಕೇಶ್, ಮತ್ತು ಗಿಡ್ಡಯ್ಯನವರ ಪತ್ನಿಯಾದ ಲೀಲಾವತಿ ರವರು ಮಾತನಾಡಿ ನಮ್ಮ ತಂಡಕ್ಕೆ ಅಭೂತಪೂರ್ವ ಗೆಲುವಿಗೆ ಕಾರಣಿಕರ್ತರಾದ ಸರ್ವ ಮತದಾರರಿಗೂ, ಸ್ನೇಹಿತರಿಗೂ, ಹಿತೈಷಿಗಳಿಗೂ, ಕೃತಜ್ಞತೆ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತವನ್ನು ರಚಿಸಿ ರೈತರಿಗೆ, ಸಾರ್ವಜನಿಕರಿಗೆ, ಸರ್ಕಾರದ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಮೂಲಕ ಉತ್ತಮ ಆಡಳಿತವನ್ನು ನೀಡುವುದಾಗಿ ತಿಳಿಸಿದರು.

ತಮ್ಮ ತಂಡದ ಆಯ್ಕೆಯ ಜಯಭೇರಿ ಘೋಷಣೆಯಾಗುತ್ತಿದ್ದಂತೆ ಚುನಾಯಿತರ ಅಭಿಮಾನಿಗಳು, ಬೆಂಬಲಿಗರು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳಾಗಿ ಸಹಕಾರ ಇಲಾಖೆಯ ಶ್ರೀನಿವಾಸ್ ಡಿ.ಹೆಚ್. ರಿಟರ್ನಿಂಗ್ ಆಫೀಸರ್ ಸಿಬ್ಬಂದಿ ವರ್ಗ ಮತ್ತು ಸಬ್ ಇನ್ಸ್ಪೆಕ್ಟರ್ ಮೂರ್ತಿ ಸಿಬ್ಬಂದಿಗಳು ಸೇರಿದಂತೆ ಮಾಯಸಂದ್ರ ಪ್ರಾಥಮಿಕ ಕೃಷಿ ಸಂಘದ ಸಿಇಒ ಮಮತಾ ಮತ್ತು ಸಿಬ್ಬಂದಿ ವರ್ಗದವರು ಮುಂತಾದವರು ಪಾಲ್ಗೊಂಡಿದ್ದರು. 

 -ಸಚಿನ್ ಮಾಯಸಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು