Header Ads Widget

ಪ್ರಧಾನಿ ಮೋದಿ ಇಥಿಯೋಪಿಯಾ ಪ್ರವಾಸ : ಹೋಟೆಲ್ ನಲ್ಲಿ ಅವರನ್ನು ಸ್ವಾಗತಿಸಿದ್ದು ಯಾರು ಗೊತ್ತಾ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಇಥಿಯೋಪಿಯಾ ಪ್ರವಾಸದ ವೇಳೆ, ಹೋಟೆಲ್ ನಲ್ಲಿ ಅವರನ್ನು ಸ್ವಾಗತಿಸಿದ್ದು ಉಡುಪಿ ಜಿಲ್ಲೆಯ ವ್ಯಕ್ತಿ ವಿಶಾಲ್ ಪೂಜಾರಿ. ಪೂಜಾರಿಯವರ ಈ ಯಶಸ್ಸಿನ ಕಥೆ, ಕನಸುಗಳನ್ನು ಕಾಣುವ ಮತ್ತು ಅವುಗಳನ್ನು ನನಸಾಗಿಸಲು ಶ್ರಮಿಸುವ ಎಲ್ಲರಿಗೂ ಪ್ರೇರಣೆ ನೀಡುತ್ತದೆ.

ಅಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ, ಇಥಿಯೋಪಿಯಾ ದೇಶಕ್ಕೆ ಪ್ರಯಾಣಿಸಿದ್ದರು. ಅಲ್ಲಿ ಅವರನ್ನು ಉಡುಪಿ ಜಿಲ್ಲೆಯ ವಿಶಾಲ್ ಸುಂದರ ಪೂಜಾರಿ ಸ್ವಾಗತಿಸಿದ್ದಾರೆ. ವಿಶಾಲ್ ಅವರು, ಜಿಲ್ಲೆಯ ಕಾರ್ಕಳ ತಾಲೂಕು ನಿಟ್ಟೆ ಸಿರಿ ಮೈಲಾಜೆ ಮಹಾಬಲ ಸುವರ್ಣ ಅವರ ಅಳಿಯರಾಗಿದ್ದಾರೆ.

ಡಿಸೆಂಬರ್ ಹದಿನಾರರಂದು ಪ್ರಧಾನಿ ಇಥಿಯೋಪಿಯಾಗೆ ಆಗಮಿಸಿದ್ದರು. ಅಲ್ಲಿನ ಪ್ರತಿಷ್ಠಿತ ಶೆರಿಟಾನ್ ಆದ್ದಿಸ್ ಎನ್ನುವ ಹೋಟೆಲಿಗೆ ಪ್ರಧಾನಿ ಆಗಮಿಸಿದಾಗ, ಹಣಕಾಸು ವಿಭಾಗದ ನಿರ್ದೇಶಕರಾಗಿರುವ ವಿಶಾಲ್ ಪೂಜಾರಿ, ಪ್ರಧಾನಿ ಅವರನ್ನು ಆದರದಿಂದ ಬರಮಾಡಿಕೊಂಡರು. ಜೊತೆಗೆ, ಮೋದಿಯವರ ವಾಸ್ತವ್ಯದ ಜವಾಬ್ದಾರಿಯನ್ನು ವಿಶಾಲ್ ಅವರೇ ನೋಡಿಕೊಂಡಿದ್ದರು.

ಇದಲ್ಲದೇ, ಮೋದಿಯವರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಔತಣಕೂಟಕ್ಕೆ ಅಲ್ಲಿನ ಪ್ರಧಾನಿ ಅಬಿ ಅಹ್ಮದ್, ವಿಶಾಲ್ ಪೂಜಾರಿಯವರನ್ನೂ ಆಹ್ವಾನಿಸಿದ್ದರು. ಈ ಉನ್ನತ ಮಟ್ಟದ ಭೋಜನಕೂಟದಲ್ಲಿ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಿಗೆ ಆಹ್ವಾನ ಸಿಕ್ಕಿದ್ದು ನಿಜಕ್ಕೂ ಪ್ರಶಂಸನೀಯ.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ವಿಶಾಲ್ ಪೂಜಾರಿ ಭಾಗವಹಿಸಿರುವುದು, ಅವರಿಗೆ ಸಿಕ್ಕ ಅಪರೂಪದ ಅವಕಾಶವಾಗಿದೆ. ಕಾರ್ಕಳ ತಾಲೂಕಿನ ನಿಟ್ಟೆಯಂತಹ ಸಣ್ಣ ಗ್ರಾಮದ ಯುವಕ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಇದು ಯುವ ಪೀಳಿಗೆಗಳಿಗೆ ಸ್ಪೂರ್ತಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು