ರಾಜ್ಯದಲ್ಲಿ ವಿವಿಧ ಆರೋಗ್ಯ ಯೋಜನೆಗಳ ಎಂಪ್ಯಾನೆಲ್ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳಿಗೆ ಸಿ.ಜಿ.ಎಚ್.ಎಸ್ ದರಗಳನ್ನು ಸರಿಯಾಗಿ ಪರಿಷ್ಕರಿಸದೇ ಇರುವುದು ಮತ್ತು ಕೇಂದ್ರ ಸರ್ಕಾರ 2023, 2024 ಮತ್ತು 2025 ಸಿ.ಜಿ.ಎಚ್.ಎಸ್ ದರವನ್ನು ಪರಿಷ್ಕರಿಸಿದೆ ಆದರೆ ರಾಜ್ಯದಲ್ಲಿ ಚಿಕಿತ್ಸೆಗಳಿಗೆ ಸಿ.ಜಿ.ಎಚ್.ಎಸ್ ದರಗಳನ್ನು ಪರಿಸ್ಕರಿಸಿಲ್ಲ ಯಾಕೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಪ್ರಶ್ನಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತಾನಾಡಿದ ಅವರು ಸಿ.ಜಿ.ಎಚ್.ಎಸ್ ದರ ಪರಿಸ್ಕರಣೆಯಾಗಿ ಸಿಸೇರಿಯನ್ ಹೆರಿಗೆಗೆ 38,040, ನಾರ್ಮಲ್ ಹೆರಿಗೆಗೆ 26, 775 ನಿಗದಿಯಾಗಿದ್ದರೆ. ರಾಜ್ಯದ ಯಶಸ್ವಿನಿ ಯೋಜನೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಕೇವಲ 13,000 ದಿಂದ 14,000 ಮಾತ್ರ ಇದೆ, ನಿಗದಿ ದರಕ್ಕಿಂತ ಮೂರೂ ಪಟ್ಟು ಕಡಿಮೆ ಇದೆ. ಆಂಜಿಯೋಪ್ಲಾಸ್ಟಿ ಗೆ ಪರಿಸ್ಕ್ರುತ ದರ ವಿಥ್ ಔಟ್ ಸ್ಟಂಟ್ 74,205 ಇದೆ, ಚಿಕಿತ್ಸೆಯಲ್ಲಿ ಸ್ಟಂಟ್ ಸೇರಿದರೆ 1 ಲಕ್ಷ ರೂ ಆಗುತ್ತದೆ. ಆದರೆ ಬೇರೆ ಯೋಜನೆಯಡಿ 60,000 ಇದೆ. ಹೃದಯ ಬೈ ಪಾಸ್ ಸರ್ಜರಿಗೆ 1 ಲಕ್ಷದ 80 ಸಾವಿರ ಇದ್ದರೆ ಯಶಸ್ವಿನಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸಿ.ಜಿ.ಎಚ್.ಎಸ್ ದರ 1 ಲಕ್ಷ ರೂ ಗಳನ್ನೂ ರಾಜ್ಯ ಸರ್ಕಾರ ನಿಗದಿಪಡಿಸಿದೆ. ಇದರಿಂದ ಚಿಕಿತ್ಸೆ ಕೊಡುವ ಆಸ್ಪತ್ರೆಗಳಿಗೆ ಅನ್ಯಾಯವಾಗುತ್ತದೆ. ಕಲ್ಲು ಡಾಂಬರ್, ಸಿಮೆಂಟ್ ಕುಡಿಯುವ ನೀರಿನ ಘಟಕ, ಕಂಪ್ಯೂಟರ್ ಪ್ರತಿಯೊಂದು ವಸ್ತುವನ್ನು ಕೊಳ್ಳಬೇಕಾದರೆ ಅದಕ್ಕೆ ಎಸ್.ಆರ್ ಬೆಲೆ ಇರುತ್ತದೆ, ಆರೋಗ್ಯಕ್ಕೆ ಯಾಕೆ ಎಸ್.ಆರ್ ಬೆಲೆ ಇಲ್ಲ ಎಂದು ಪ್ರಶ್ನಿಸಿದರು.
ಮುಂದುವರೆದು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ದಯವಿಟ್ಟು ರಾಜ್ಯ ಸರ್ಕಾರ ಆರೋಗ್ಯ ಯೋಜನೆಗಳಿಗೆ ಪರಿಸ್ಕ್ರುತ ದರದ ಪ್ರಕಾರ ಸಿ.ಜಿ.ಎಚ್.ಎಸ್ ದರವನ್ನು ನಿಗದಿ ಮಾಡಬೇಕು, ಯಶಸ್ವಿನಿ ಯೋಜನೆಗೆ ರಾಜ್ಯ ಸರ್ಕಾರದಿಂದ ಕೇವಲ 60 ರಿಂದ 70 ಕೋಟಿ ಅನುದಾನ ಬಂದರೇ ಯಶಸ್ವಿನಿ ಫಲಾನುಭವಿಗಳಿಗೆ ಉಪಯೋಗವಾಗುತ್ತದೆ, ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮತ್ತು ಆರೋಗ್ಯ ಸಚಿವರಿಗೂ ಮನವಿ ಬಂದಿದೆ. ಸಾರಿಗೆ ಇಲಾಖೆಗಳಿಗೆ ಮತ್ತು 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಕೊಡಬೇಕು ಎಂದು ಕೇಂದ್ರ ಸರ್ಕಾರದಿಂದ ಪ್ರಸ್ತಾವನೆ ಬಂದಿದೆ ಆದರೆ ರಾಜ್ಯ ಸರ್ಕಾರಿಂದ 70 ವರ್ಷ ಮೇಲ್ಪಟ್ಟವರಿಗೆ ಇನ್ನು ಈ ಯೋಜನೆ ಜಾರಿ ಆಗಿಲ್ಲ ದಯವಿಟ್ಟು ಆದಷ್ಟು ಬೇಗ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವರು ನಮ್ಮ ಸರ್ಕಾರವು ಕೂಡ ಗೃಹ ಇಲಾಖೆ, ಕಾರ್ಮಿಕ ಇಲಾಖೆಗಳಲ್ಲಿ ಮತ್ತು ಸರ್ಕಾರಿ ನೌಕರರಿಗೂ ಸಿ.ಜಿ.ಎಚ್.ಎಸ್ ದರವನ್ನು ಅಳವಡಿಸಿಕೊಂಡಿದ್ದೇವೆ, ಯಶಸ್ವಿನಿ ಯೋಜನೆಗೆ ಸಹಕಾರ ಇಲಾಖೆ ಅನುಮೋದನೆ ನೀಡಬೇಕು, ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ನಾವು ಸಿ.ಜಿ.ಎಚ್.ಎಸ್ ದರದ ಬದಲು ಹೆಚ್.ಬಿ.ಪಿ (ಹೆಲ್ತ್ ಬೆನಿಫಿಟ್ ಪ್ಯಾಕೇಜ್ ) ದರದ ಪ್ರಕಾರ 2014ರ ನಿಗದಿಯಂತೆ ನೀಡುತಿದ್ದೇವೆ ಹೆಚ್ಚಿನ ದರವನ್ನು ನೀಡಲು ಹಣದ ಕೊರತೆ ಇದೆ ಹೆಚ್.ಬಿ.ಪಿ (ಹೆಲ್ತ್ ಬೆನಿಫಿಟ್ ಪ್ಯಾಕೇಜ್ ) ದರವನ್ನು 2022 ರ ದರಕ್ಕೆ ತೆಗೆದುಕೊಂಡು ಬರಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

0 ಕಾಮೆಂಟ್‌ಗಳು