ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ- ಶಿಕ್ಷಕರು ಸುಮಾರು ಐದು ವಾರಗಳ ಅವಧಿಯ ಬೋಧನಾಭ್ಯಾಸವನ್ನು ಜಿಲ್ಲೆಯ ಹತ್ತು ವಿದ್ಯಾಲಯಗಳಲ್ಲಿ ಈಚೆಗೆ ಯಶಸ್ವಿಯಾಗಿ ಪೂರೈಸಿದರು. ಈ ಪ್ರಯುಕ್ತ ಕಾಲೇಜಿನಲ್ಲಿ ಅನುಭವ ನಿರೂಪಣೆಯ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ತಂಡಗಳ ಮುಖಂಡರುಗಳಾದ ಅನುಷಾ ಪೂರ್ಣಿಮಾ, ದೀಪಾ ಕುಲಾಲ್, ಗಾನವಿ, ರೀಮಾ ರಚನಾ ಸಲ್ದಾನ, ಯುರೇಖ ಪಿರೇರ, ಸಿದ್ದು ಸಂಗಮೇಶ ಮೇಟಿ, ಅನಂತರಾಜ್ ಮತ್ತು ಕಾರ್ತಿಕ್ ಬೋಧನೆಯ ಪ್ರಥಮಾನುಭವದ ಕಷ್ಟಸುಖಗಳನ್ನು ಹಂಚಿಕೊಂಡರಲ್ಲದೆ ತರಗತಿ ನಿಯಂತ್ರಣ, ಕಲಿಕೆಯಲ್ಲಿ ವಿದ್ಯಾರ್ಥಿಗಳ ಭಾಗಿತ್ವ, ಶಾಲಾ ಶಿಕ್ಷಕರ ಸಹಕಾರ ಹಾಗೂ ಮುಖ್ಯಶಿಕ್ಷಕರ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು. ಅಧ್ಯಾಪಕರ ಪರವಾಗಿ ಶ್ರೀ ಮತಿ ಕಲ್ಪನಾ ಶಯನ ಮತ್ತು ಶ್ರೀ ಮತಿ ಸೀತಮ್ಮ ಮಾತನಾಡಿ ವಿದ್ಯಾರ್ಥಿ ಶಿಕ್ಷಕರ ಇತಿಮಿತಿಗಳನ್ನು ವಿಶ್ಲೇಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡಿ ವಿದ್ಯಾರ್ಥಿ- ಶಿಕ್ಷಕರು ಪಾಠವಿಷಯದ ಆಳಕ್ಕಿಳಿಯಬೇಕಾದರೆ ವಿಶೇಷವಾದ ತಲಸ್ಪರ್ಶಿ ಅಧ್ಯಯನ ಮಾಡಬೇಕು.ಕೇವಲ ಗೂಗಲ್ ಒಂದನ್ನೆ ಆಶ್ರಯಿಸಿ ಸಂತೆಗೆ ತಕ್ಕ ಬೊಂತೆ ಧೋರಣೆಯನ್ನು ಬದಿಗೊತ್ತಿ ಗ್ರಂಥಗಳನ್ನು ವಿಪುಲವಾಗಿ ಅಧ್ಯಯನ ಮಾಡಬೇಕು. ಪರಿಣಾಮಕಾರಿಯಾದ ಅಭಿವ್ಯಕ್ತಿ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರಲ್ಲದೆ ಕಾಲೇಜಿನ ಉಪನ್ಯಾಸಕ ವೃಂದದ ಸಹಕಾರವನ್ನು ಪ್ರಶಂಸಿಸಿದರು. ಭಾಗ್ಯಲಕ್ಷ್ಮಿ .ಐ ಸ್ವಾಗತ ಕೋರಿದರೆ ಅಕ್ಸಾ ಬೇಗಮ್ ಧನ್ಯವಾದ ಸಮರ್ಪಿಸಿದರು. ರಚನಾ ಮತ್ತು ಸೌಜನ್ಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.

0 ಕಾಮೆಂಟ್‌ಗಳು