Header Ads Widget

ಬ್ರಹ್ಮಾವರ : ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟಿಪ್ಪರ್; ಚಾಲಕ ಸ್ಥಳದಲ್ಲೇ ಸಾವು!

ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಟಿಪ್ಪರ್ ಮರಕ್ಕೆ ಢಿಕ್ಕಿ ಹೊಡೆದು ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟ ಚಾಲಕ ಶ್ರೀಕಾಂತ್ ಎಂದು ತಿಳಿದು ಬಂದಿದೆ.ಈ ಘಟನೆ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ 10.12.2025 ರಂದು ಫಿರ್ಯಾದಿದಾರ ರಂಜನ್ ಶೆಟ್ಟಿ, 40 ವರ್ಷ, ತಂದೆ: ಮಹಾಬಲಶೆಟ್ಟಿ, ವಾಸ: ಆಶೀರ್ವಾದ ನಿಲಯ, ನಿಟ್ಟೂರು ಇವರ ಮಾಲಕತ್ವದ KA-20-C-2256 ನೊಂದಣಿ ನಂಬ್ರದ ಟಿಪ್ಪರ್ ವಾಹನವನ್ನು ಅದರ ಚಾಲಕನಾದ ಶ್ರೀಕಾಂತನು ಫಿರ್ಯಾದಿದಾರರ ನಿಟ್ಟೂರಿನ ಮನೆಯಿಂದ ಜೆಲ್ಲಿ ಲೋಡ್ ಬಗ್ಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 07:00 ಗಂಟೆಗೆ ಚೇರ್ಕಾಡಿ ಗ್ರಾಮದ ಪೇತ್ರಿ – ಮಡಿ ರಸ್ತೆಯಲ್ಲಿ ಶ್ರೀಕಾಂತನು ಟಿಪ್ಪರ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತಿರುವಿನಲ್ಲಿರುವ ಒಂದು ರಸ್ತೆ ಹೊಂಡಕ್ಕೆ ವಾಹನವನ್ನು ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಬಲ ಬದಿಯಲ್ಲಿರುವ ಒಂದು ದೊಡ್ಡ ಮರಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ವಾಹನದ ಮುಂಭಾಗ ತೀವೃ ಜಖಂಗೊಂಡು ಚಾಲಕನ ಸೀಟ್ ನಲ್ಲಿ ಶ್ರೀಕಾಂತ ಸಿಲುಕಿಕೊಂಡು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು