Header Ads Widget

ಅಸ್ಟ್ರೋ ಮೋಹನ್ ಅವರು PHOTOGENIC–XI, 11ನೇ ನ್ಯಾಷನಲ್ ಡಿಜಿಟಲ್ ಸಾಲೋನ್ 2025ರಲ್ಲಿ ಗೌರವ ​ಪುರಸ್ಕಾರ

ಪ್ರಸಿದ್ಧ ಹಿರಿಯ ಪತ್ರಿಕಾ ಛಾಯಾಗ್ರಾಹಕ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ದೃಶ್ಯಕಲಾವಿದ ಅಸ್ಟ್ರೋ ಮೋಹನ್ ಅವರು PHOTOGENIC–XI, 11ನೇ ನ್ಯಾಷನಲ್ ಡಿಜಿಟಲ್ ಸಾಲೋನ್ 2025ರಲ್ಲಿ ಗೌರವವನ್ನು ಪಡೆದುಕೊಂಡಿದ್ದಾರೆ.

ಅವರ ಆಕರ್ಷಕ ದೃಶ್ಯ “ಭಾರತೀಯ ಗ್ರಾಮೀಣ ಕ್ರೀಡೆಗಳು “ಕೃತಿಗೆ ಓಪನ್ ಕಲರ್ ವಿಭಾಗದಲ್ಲಿ ಫೋಟೋಜೆನಿಕ್ ಸ್ವರ್ಣ ಪದಕ ಪ್ರಾಪ್ತವಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದ ಸಾವಿರಾರು ಪ್ರವೇಶಗಳಲ್ಲಿ ಮೋಹನ್ ಅವರ ಕೃತಿ ವಿಶೇಷವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

ಇದೇ ಸಂದರ್ಭದಲ್ಲಿ ಅಸ್ಟ್ರೋ ಮೋಹನ್ ಅವರ ಇತರ ನಾಲ್ಕು ಛಾಯಾಚಿತ್ರಗಳು ಕೂಡ ಅಕ್ಸೆಪ್ಟೆನ್ಸ್ ಪಡೆಯುತ್ತಾ, ಅವರ ಕಲಾತ್ಮಕ ಸಾಮರ್ಥ್ಯ ಮತ್ತು ವೈವಿಧ್ಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

800ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗೌರವಗಳನ್ನು ಪಡೆದಿರುವ ಅಸ್ಟ್ರೋ ಮೋಹನ್, ಕರ್ನಾಟಕದ ಹೆಮ್ಮೆಯಾಗಿ, ಭಾರತವನ್ನು ಅಂತರರಾಷ್ಟ್ರೀಯ ಛಾಯಾಗ್ರಹಣ ವೇದಿಕೆಗಳಲ್ಲಿ ಗೌರವದಿಂದ ಪ್ರತಿನಿಧಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು